ಸಿರವಾರ

ಸಿರವಾರ : ಕೊರೋನಾ ಗೆದ್ದ ಗೆಳೆಯನಿಗೆ ಪಟಾಕಿ ಹಚ್ಚಿ ಅದ್ದೂರಿ ಸ್ವಾಗತ

ವರದಿ : ವಿಜಯಕುಮಾರ್. ಎ.ಸರೋದೆ ಪತ್ರಕರ್ತರು ಸಿರವಾರ

ಸಿರವಾರ, ಜು. 21: ಕರೋನಾ ವಿಶ್ವವನ್ನೇ ವ್ಯಾಪಿಸಿ, ಗಲ್ಲಿಗಲ್ಲಿಗಳನ್ನು ಹೊಕ್ಕಿದ್ದರೂ ಹಳ್ಳಿಗರು ಮಾತ್ರ ಕೊಂಚ ಹೆಚ್ಚೇ ಹೆದರಿದಂತೆ ಕಾಣುತ್ತಿದೆ.‌ ಅಪರೂಪಕ್ಕೆ ಒಂದೋ-ಎರಡೋ ಪ್ರಕರಣಗಳು ಕಂಡುಬರುತ್ತಿದ್ದರೂ, ಹಳ್ಳಿಯ ಜನ ಮಾತ್ರ ಸೋಂಕಿತರನ್ನು ಅಪರಾಧಿಗಳಂತೆ ನೋಡುತ್ತಿದ್ದಾರೆ.

ಸೋಂಕಿತರು ಹಾಗೂ ಅವರ ಕುಟುಂಬದವರಿಗೆ ನೋವಾಗುವಂತೆ ವರ್ತಿಸುತ್ತಿದ್ದಾರೆ. ಇದನ್ನರಿತ ಸಿರವಾರದ ಗೆಳೆಯರ ಬಳಗವೊಂದು ಕ್ವಾರೆಂಟೈನ್ನಿಂದ ಮರಳಿದ ತಮ್ಮ ಗೆಳೆಯ ಹಾಗೂ ಇನ್ನೊಬ್ಬ ಯುವಕನನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ಪಟಾಕಿ ಹಚ್ಚಿ, ಆತ್ಮೀಯವಾಗಿ ಬರಮಾಡಿಕೊಳ್ಳುವ ಮೂಲಕ ಮಾನವೀಯತೆಗಿಂತ ದೊಡ್ಡದಾದುದ್ಯಾವುದೂ ಇಲ್ಲ ಎಂದು ಸಾರುವ ಕೆಲಸ ಮಾಡಿದ್ದಾರೆ.

“ಸೋಂಕಿತ ಎಂದು ಗೊತ್ತಾದತಕ್ಷಣ ಹತ್ತಿರದ ಸಂಬಂಧಿಗಳೇ ಮೂಗುಮುರಿಯುತ್ತಾರೆ. ಅಂತಹದರಲ್ಲಿ ಗೆಳೆಯರು ಗಲ್ಲಿಯವರೆಗೆ ಬಂದು ಹೀಗೆ ಪಾಟಾಕಿ ಹಚ್ಚಿ ಸಂಭ್ರಮಿಸುವ ಜೊತೆಗೆ, ನಾವು ನಿಮ್ಮ ಜೊತೆಗಿದ್ದೇವೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. ಕಷ್ಟದಲ್ಲಿ ನೆರವಾಗುವ ಮನಸ್ಥಿತಿಗಳೇ ನಿಜವಾದ ಸಂಬಂಧಕ್ಕೆ ಸಾಕ್ಷಿ. ಅವರ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಆಭಾರಿ” ಎಂದು ಕ್ವಾರೆಂಟೈನ್ ಬಳಿಕ ಮನೆಗೆ ಮರಳಿದ ವ್ಯಕ್ತಿ ತಿಳಿಸಿದ್ದಾರೆ. ಯುವಕರ ಧನಾತ್ಮಕ ಮನೋಭಾವ ನೋಡಿ ಊರಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close