Uncategorized

ಹುಟ್ಟು ಹಬ್ಬ ಕೈಬಿಟ್ಟು ಸೊಂಕಿತರ ನೆರವಿಗೆ ಮುಂದಾದ ಕೈ ನಾಯಕ

ವರದಿ : ಸಿರಾಜುದ್ದೀನ್ ಬಂಗಾರ್ ಸಿರವಾರ

ಮಲ್ಲಿಕಾರ್ಜುನ ಖರ್ಗೆಯವರಿಂದ 650 ಬೆಡ್ ಗಳ ದೇಣಿಗೆ 100 ಬೆಡ್ ರಾಯಚೂರಿಗೆ ಹಾಗೂ ಕಲಬುರ್ಗಿಗೆ 550  ದೇಣಿಗೆ

ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಯಲ್ಲಿ ಸೋಂಕು ದಿನೇ ದಿನೇ ವ್ಯಾಪಕಗೊಳ್ಳಲಾರಂಭಿಸಿದೆ. ಜಿಲ್ಲೆಯಲ್ಲಿ ಸುಮಾರು ಸಾವಿರ ಆ್ಯಕ್ಟಿವ್ ಕೇಸ್ ಗಳಿದ್ದು, ನಿಗದಿತ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುವಂತಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿ ಹೌಸ್, ಸ್ಪಂ ಬೋರ್ಡ್, ಕೆಸರಟಗಿ ಆಶ್ರಯ ಮನೆ ಸೇರಿದಂತೆ ಹಲವೆಡೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಲ್ಲಿಯೂ ಬೆಡ್ ಸೇರಿದಂತೆ ಸಮರ್ಪಕ ವ್ಯವಸ್ಥೆ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸೋಂಕಿತರ ನೆರವಿಗೆ ಸಹಾಯಹಸ್ತ ಚಾಚಿದ್ದಾರೆ. 

ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟು ಹಬ್ಬ ಜುಲೈ 21ಕ್ಕೆ ಇದೆ. ಈ ಬಾರಿ ಕೊರೋನಾ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ತಮ್ಮ ಅಭಿಮಾನಿಗಳಿಗೂ ಜನುಮದಿನ ಆಚರಿಸದಂತೆ ಮನವಿ ಮಾಡಿದ್ದಾರೆ.

ಮತ್ತೊಂದೆಡೆ ಕೊರೋನಾ ಸಂಕಷ್ಟಕ್ಕೆ ಗುರಿಯಾಗಿರುವ ಸೋಂಕಿತರಿಗೆ ನೆರವಾಗಲು ಖರ್ಗೆ ಮುಂದಾಗಿದ್ದಾರೆ. ಕಲಬುರ್ಗಿಯಲ್ಲಿ ದಿನೇ ದಿನೇ ಸೋಂಕು ವ್ಯಾಪಕಗೊಳ್ಳಲಾರಂಭಿಸಿದೆ. ಕೆಲವೆಡೆ ಸರಿಯಾದ ಬೆಡ್ ಸಿಗದೆ ಪರದಾಟ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಜೊತೆಗೂಡಿ 550 ಹಾಸಿಗೆಗಳನ್ನು ಕಲಬುರ್ಗಿ ಜಿಲ್ಲೆಗೆ 550 ದೇಣಿಗೆಯಾಗಿ ನೀಡಿದ್ದಾರೆ.

ಕಲಬುರ್ಗಿಯ ಜಿಮ್ಸ್ ಹಾಗೂ ಇ.ಎಸ್.ಐ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿದ್ದು, ಬೇರೆ ಕಟ್ಟಡಗಳಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಅನುಕೂಲವಾಗಲೆಂದು ಹಾಸಿಗೆ ದೇಣಿಗೆಯಾಗಿ ನೀಡಲಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗಲೆಂದು ಹಾಸಿಗೆ ವ್ಯವಸ್ಥೆ ಮಾಡಿದ್ದು, ಒಟ್ಟು 650 ಹಾಸಿಗೆಗಳು ದೇಣಿಗೆಯಾಗಿ ನೀಡಲಾಗಿದೆ. ಕಲಬುರ್ಗಿಗೆ 550 ಹಾಗೂ ರಾಯಚೂರಿಗೆ 100 ಹಾಸಿಗೆ ದೇಣಿಗೆ ನೀಡಲಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close