Uncategorizedಸಿರವಾರ

ಸಿರವಾರ : ಮಳೆಗೆ ಹೊಳೆಯಂತಾದ ರಸ್ತೆ, ಮನೆಗಳಿಗೆ ನುಗ್ಗಿದ ನೀರು

ವರದಿ : ವಿಜಯಕುಮಾರ್. ಎ.ಸರೋದೆ ಪತ್ರಕರ್ತರು ಸಿರವಾರ

ಸಿರವಾರ, ಜು17: ಇಂದು ಸುರಿದ ಭಾರಿ ಮಳೆಗೆ ಪಟ್ಟಣದ ಕುರುಬರ ಓಣಿ ರಸ್ತೆ(ವಾರ್ಡ್ ಸಂಖ್ಯೆ 17) ಸಂಪೂರ್ಣ ಹೊಳೆಯಾಗಿ ಮಾರ್ಪಟ್ಟಿತ್ತು. ರಸ್ತೆ ತುಂಬಿ ನೀರು ಹರಿದಿದ್ದರಿಂದ ಪಕ್ಕದ ಅನೇಕ ಮನೆಗಳೊಳಗೆ ನೀರು ನುಗ್ಗಿ, ಸ್ಥಳೀಯರು ಪರದಾಡುವಂತಾಯಿತು.
ಕಳೆದ ವರ್ಷ ರಸ್ತೆಗೆ ಸಂಪರ್ಕಿಸುವ ಆಚೀಚಿನ ರಸ್ತೆಗಳನ್ನು ಎತ್ತರಗೊಳಿಸಿ ಸಿಸಿ ರಸ್ತೆ ನಿರ್ಮಿಸಿರುವುದರಿಂದ, ಮಧ್ಯದ ರಸ್ತೆ ತಗ್ಗಾಗಿ ಮಾರ್ಪಟ್ಟಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಸ್ಥಳೀಯರು ಅಧಿಕಾರಿಗಳ ನಿರ್ಲಕ್ಷ ಹಾಗೂ ವಾರ್ಡ್ ಸದಸ್ಯರ ನಿಷ್ಕಾಳಜಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕೆಲ ಮನೆಗಳಲ್ಲಿ ಮಕ್ಕಳು-ವೃದ್ಧರು ಇದ್ದು, ಸ್ವಲ್ಪ ದೊಡ್ಡದಾಗಿ ಮಳೆ ಸುರಿದರೂ ಮನೆಗಳಿಗೆ ನೀರು ಹೊಕ್ಕುತ್ತಿರುವುದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಅವೈಜ್ಞಾನಿಕವಾಗಿ ಆಚೀಚಿನ ರಸ್ತೆ ಎತ್ತರ ಮಾಡಿ, ನಡುವಿನ ರಸ್ತೆ ತಗ್ಗಾಗುವಂತೆ ಮಾಡಿರುವುದರಿಂದ ಕಾಮಗಾರಿ ಮಾಡಿರುವವರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಮಳೆಯಾದಾಗಲೆಲ್ಲಾ ಮನೆಯಲ್ಲಿ ನೀರು ಹೊಕ್ಕಿಕೊಳ್ಳುತ್ತಿದೆ. ಹೋದ ಮಳೆಗಾಲದಲ್ಲಿ ಅತೀವೃಷ್ಟಿಯಾಗಿದ್ದರಿಂದ ಸಾಕಷ್ಟು ಪರದಾಡುವಂತಾಗಿತ್ತು. ಆ ಬಳಿದ ದೂರು ನೀಡಿ, ಸಮಸ್ಯೆ ಗಮನಕ್ಕೆ ತಂದಿದ್ದರೂ ಪಟ್ಟಣ ಪಂಚಾಯಿತಿಯವರು ಕ್ರಮ ಕೈಗೊಂಡಿಲ್ಲ.

  • ಬಿಚ್ಚಾಲಿ ಯಲ್ಲಪ್ಪ, ಸ್ಥಳೀಯ ನಿವಾಸಿ

Continue

Related Articles

Leave a Reply

Your email address will not be published. Required fields are marked *

Back to top button
Close
Close