ಕರ್ನಾಟಕ ಸುದ್ದಿ

Video : ‘ಅಚ್ಛಾ ಚಲ್ತಾ ಹುಂ ದುವಾ ಓ ಮೇ ಯಾದ ರಖನಾ’; ಸಾವಿನ ಮುಂಚೆ ಹಾಡು ಹಾಡಿದ ಯುವಕ, ಕಣ್ಣೀರಿಟ್ಟ ನೆಟ್ಟಿಗರು!

ಸೋಶಿಯಲ್ ಮಿಡಿಯಾದಲ್ಲಿ ಸದ್ಯಕ್ಕೆ ಆಸಾಮದಲ್ಲಿಯ ಒಂದು ಹುಡುಗನ ವೀಡಿಯೊ ತುಂಬಾ ತುಂಬಾ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡುವವರ ಕಣ್ಣಿಂದ ಕಣ್ಣೀರು ತಾನಾಗಿಯೇ ಹರಿಯುತ್ತಿವೆ. ಈ ವೀಡಿಯೋದಲ್ಲಿ ಹಾಡಿದ ಹುಡುಗ ರಿಷಬ್ ದತ್ತಾ ಈತನ ಕಂಠಕ್ಕೆ ನೇಟಿಜನ್ಸ್ ಮುಕ್ತ ಮನಸ್ಸಿನಿಂದ ಶಬ್ಬಾಸ್ ಎನ್ನುತ್ತಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಜುಲೈ 9 ರಂದು ಈತನ ನಿಧನವಾಯಿತು.

ಈತ ಹಾಡಿದ ಹಾಡಿನ ವೀಡಿಯೊ ನೇಟಿಜನ್ಸ್ ಗಳಿಗೆ ಇಷ್ಟ ಆದ ನಂತರ ಒಂದೇ ರಾತ್ರಿಯಲ್ಲಿ ಪ್ರಚಂಡ ವೈರಲ್ ಆಗಿದೆ. ಎರಡು ವರ್ಷಗಳ ಮೊದಲು ರಿಷಬ್ ಗೆ ಅಪ್ಲಾಸ್ಟಿಕ ಎನಿಮಿಯಾ ಈ ಅಪರೂಪದ ಕಾಯಿಲೆಯಾದದ್ದು ಗೊತ್ತಾಯಿತು. ದುರ್ದೈವದಿಂದ ಮುಂದೆ ಇದೇ ಕಾಯಿಲೆಯಿಂದ ಜುಲೈ 9 ರಂದು ಬೆಂಗಳೂರಲ್ಲಿ ಕೊನೆಯುಸಿರೆಳೆದನು.

ಈತನ ಸಾವಿನ ನಂತರ ರಿಷಬ್ ಹಾಡಿದ ಹಾಡು ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ಕೇಳಿ ನೇಟಿಜನ್ಸ್ ಗಳಿಗೆ ಅಶ್ರು ತಡೆದುಕೊಳ್ಳಲಿಕ್ಕೆ ಸಾಧ್ಯವಾಗ್ತಾ ಇಲ್ಲ. ಫೇಸ್ಬುಕ್ ಯೂಜರ್ ಮನಜೀತ್ ಗೋಗೋಯ್ ಇವರು ರಿಷಬ್ ಹಾಡಿದ ಎರಡು ಹಾಡುಗಳ ವಿಡಿಯೋ ಪೋಸ್ಟ್ ಮಾಡಿದ ನಂತರ ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋಗಳು ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತಿವೆ.

ಒಂದು ವೀಡಿಯೋದಲ್ಲಿ, ರಿಷಬ್ ಆಸ್ಪತ್ರೆಯಲ್ಲಿ ಗಿಟಾರ್ ಬಾರಿಸಿದ್ದಾನೆ. 2016 ರಲ್ಲಿ ರಣಬೀರ್ ಕಪೂರ್ ಅಭಿನಯದ ‘ಎ ದಿಲ್ ಹೈ ಮುಷ್ಕಿಲ್’ ಚಿತ್ರದ ‘ಚನ್ನಾ ಮೆರೆಯಾ…’ ಈ ಸೂಪರ್ ಹಿಟ್ ಹಾಡನ್ನು ಹಾಡಿದ್ದಾನೆ.

ಎರಡನೆಯ ಹಾಡಿನಲ್ಲಿ 2013 ರ ‘ಜವಾನಿ ಹೈ ದೀವಾನಿ’ ಈ ಹಾಡನ್ನು ಹಾಡಿದ್ದನು. ಆತ ಗಿಟಾರ್ ಮುಖಾಂತರ ಸಂಗೀತವನ್ನು ನೀಡುತ್ತ ತನ್ನ ಮಧುರ ಕಂಠದಿಂದ ಹಾಡಿದ್ದಾನೆ. ಹಾಡುವ ಸಮಯದಲ್ಲಿ ಆಸ್ಪತ್ರೆಯ ರೂಮಿನೊಳಗೆ ಆರೋಗ್ಯ ಸೇವಕರು ಮತ್ತು ನರ್ಸ್ ಗಳು ಉಪಸ್ಥಿತರಿದ್ದರು. ಜೊತೆಗೆ ರಿಷಬ್ ನನ್ನು ಪ್ರೋತ್ಸಾಹಿಸುತ್ತಿದ್ದರು.

ಈಗ ರಿಷಬ್ ನ ಈ ವಿಡಿಯೋಗಳಿಗೆ ಸಾವಿರಾರು ಲೈಕ್ಸ್ ಹಾಗೂ ಶೇರ್ ಬಂದಿವೆ. ಈ ವಿಡಿಯೊಗಳನ್ನು ನೋಡಿ ನೆಟ್ಟಿಗರು ತುಂಬಾ ಭಾವುಕರಾಗಿದ್ದಾರೆ.

ಒಬ್ಬ ಯೂಜರ್ ಹೀಗೆ ಬರೆದಿದ್ದಾನೆ, ನೀನು ನಿನ್ನ ಸಂಗೀತದಿಂದ ನಮಗೆ ತುಂಬಾ ಪ್ರೇರೇಪಿಸಿದ್ದಿಯಾ, ನೀನು ನಿಜಕ್ಕೂ ಅಮರವಾಗಿರುವೆ.

ಇನ್ನೊಬ್ಬ ಹೀಗೆ ಬರೆಯುತ್ತಾನೆ, ನೀನು ನನಗೆ ಅಳಿಸಿ ಬಿಟ್ಟೆ. ನೀನು ಎಲ್ಲಿದ್ದಿಯಾ ಅಲ್ಲಿ ಆನಂದವಾಗಿರು.

ರಿಷಬ್ ಈತ ಆಸಾಮದ ತಿನ್ಸುಕಿಯಾ ಜಿಲ್ಲೆಯ ಕಾಕೋಪೋಥರ್ ನಿವಾಸಿಯಾಗಿದ್ದಾನೆ. ಮೊದಲು ವೇಲೂರ್ ಆನಂತರ ಬೆಂಗಳೂರಿನ ಖಾಜಗಿ ಆಸ್ಪತ್ರೆಯಲ್ಲಿ ಉಪಚಾರ ನಡೆದಿತ್ತು.

Continue

Related Articles

Leave a Reply

Your email address will not be published. Required fields are marked *

Back to top button
Close
Close