ಕರ್ನಾಟಕ ಸುದ್ದಿ

ಕೊರೋನಾ ವೈರೆಸ್ ನಾಶಕ “ಮಂತ್ರ”ಹೇಳಿ, ರೋಗಿಯ ಗುಣಪಡಿಸಿದ ನಿತ್ಯಾನಂದ!?

Source : SN18

ಕೊರೋನಾ ವೈರಸ್‌ಗೆ ಔಷಧಿ ಕಂಡುಹಿಡಿಯಲು ಇಡೀ ವಿಶ್ವವೇ ತಲೆ ಕೆಡಿಸಿಕೊಂಡಿದೆ. ಆದರೆ, ತನ್ನದೇ ಆದ ‘ಕೈಲಾಸ ದೇಶ’ದಲ್ಲಿ ನೆಲೆಸಿದ್ದಾನೆ ಎನ್ನಲಾದ ಬಿಡದಿಯ ನಿತ್ಯಾನಂದ ಸ್ವಾಮೀಜಿ, ಕೊರೋನಾ ವೈರಸ್ ನಾಶಕ ಮಂತ್ರ ಕಂಡುಹಿಡಿದಿದ್ದಾನೆ.

ಅಷ್ಟೇ ಅಲ್ಲ ಈ ಮಂತ್ರದಿಂದ ತನ್ನ ಆಶ್ರಮದ ಕೊರೋನಾ ಸೋಂಕಿತರನ್ನು ಸಂಪೂರ್ಣ ಗುಣಪಡಿಸಿದ್ದಾನೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದಿರುವ ನಿತ್ಯಾನಂದ ತಾನು ಹೇಳುವ ಮಂತ್ರದಿಂದ ಕೊರೋನಾ ವೈರಸ್ ಗುಣವಾಗುತ್ತದೆ.

ಒಂದು ವೇಳೆ ಎಲ್ಲಾ ಕಡೆಯೂ ತನ್ನ ಮಂತ್ರವನ್ನು ಪ್ರಯೋಗಿಸಲು ಅನುಮತಿ ನೀಡಿದರೆ ಕೇವಲ ಒಂದು ತಿಂಗಳಿನಲ್ಲಿ ಇಡೀ ವಿಶ್ವವನ್ನು ಕೊರೋನಾದಿಂದ ಮುಕ್ತಗೊಳಿಸುವುದಾಗಿ ನಿತ್ಯಾನಂದ ಹೇಳಿಕೊಂಡಿದ್ದಾನೆ ಎಂದು ಬಿಡದಿ ಮಠದ ಸದಸ್ಯರೊಬ್ಬರು ಸುಳ್ ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close