Uncategorizedಸಿರವಾರ

ಭಾನುವಾರದ ಲಾಕ್ ಡೌನ್ ಗೆ ಸಿರವಾರ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ.

ವರದಿ: ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ ಜ್ವಾಲೆ

ಸಿರವಾರ: ಕೋವಿಡ್ ಸೋಂಕಿತರ ಪ್ರಮಾಣ ಗಣನೀಯವಾಗಿ ಹೆಚ್ವುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಜಾರಿಗೊಳಿಸಿರುವ ಭಾನುವಾರ ಲಾಕ್ ಡೌನ್ ಗೆ ಸಿರವಾರ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ವಾಣಿಜ್ಯ ಮಳಿಗೆಗಳು ಸಹ ಸಂಪೂರ್ಣ ಬಂದ್ ಮಾಡಿ ಲಾಕ್ ಡೌನ್ ಗೆ ಸಹಕಾರ ನೀಡಲಾಗಿದೆ.

ಹಾಲು, ಮೆಡಿಕಲ್, ಪೇಪರ್ ಮುಂತಾದ ಅಗತ್ಯ ವಸ್ತುಗಳಿಗೆ, ಅಗತ್ಯ ಸರಂಜಾಮು ಸಾಗಿಸಲು ಮಾತ್ರ ಇಂದು ಅವಕಾಶವಿದೆ. ಹೂವು, ಹಣ್ಣು, ತರಕಾರಿ ಮಾರುಕಟ್ಟೆ, ಕಿರಾಣಿ ಅಂಗಡಿ, ಮಾಂಸದ ಅಂಗಡಿ ಸೇರಿ ಇತರೆ ಅಗತ್ಯ ವಸ್ತುಗಳ ಮಳಿಗೆಗಳು ಹೊರತುಪಡಿಸಿ ಇನ್ನುಳಿದ ಮದ್ಯದ ಅಂಗಡಿ ಸೇರಿ ಎಲ್ಲ ರೀತಿಯ ಮಳಿಗೆಗಳು ಬಂದ್ ಆಗಿವೆ.

ಪ್ರಯಾಣಿಕ ಆಟೋಗಳು ಆಲ್ಲೊಂದು, ಇಲ್ಲೊಂದು ಸಂಚರಿಸುತ್ತಿರುವುದು ಬಿಟ್ಟರೆ ಎಲ್ಲ ರೀತಿಯ ಪ್ರಯಾಣಿಕ ವಾಹನಗಳು ಸ್ಥಗಿತಗೊಂಡಿವೆ. ಸಾರಿಗೆ ಬಸ್ ಗಳು ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗಿ ಸಂಚಾರ ಸ್ಥಗಿತಗೊಳಿಸಿವೆ.

Continue

Related Articles

2 Comments

Leave a Reply

Your email address will not be published. Required fields are marked *

Back to top button
Close
Close