ಅಂತರಾಷ್ಟ್ರೀಯ

CORONA: 89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!

–ಸಿರಾಜುದ್ದೀನ್ ಬಂಗಾರ್ ಸಂಪಾದಕರು ಸಿರವಾರ

ಮಹಾಮಾರಿ ಕೊರೊನಾ ವೈರಸ್ ಹರಡುವುದುನ್ನು ನಿಯಂತ್ರಿಸಲು ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಇದೀಗ ವ್ಯಕ್ತಿಯೊಬ್ಬರು ಲಕ್ಷ ಬೆಲೆ ಬಾಳುವ ಮಾಸ್ಕ್ ತಯಾರಿಸಿ ಅದನ್ನು ಧರಿಸುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ಮೌಲ್ಯದ ಮಾಸ್ಕ್ ತಯಾರಿಸಿದ್ದಾರೆ. ಸದ್ಯ ಶಂಕರ್ ಚಿನ್ನದ ಮಾಸ್ಕ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಶಂಕರ್, ಈ ಮಾಸ್ಕ್ ತೆಳುವಾಗಿದ್ದು, ಗಾಳಿ ಒಳಕ್ಕೆ ಹಾಗೂ ಹೊರ ಹೋಗಲೆಂದೇ ಸಣ್ಣ ಸಣ್ಣ ರಂಧ್ರಗಳನ್ನು ಮಾಡಲಾಗಿದೆ. ಹೀಗಾಗಿ ಉಸಿರಾಡಲು ಯಾವುದೇ ತೊಂದರೆಯಾಗಲ್ಲ. ಆದರೆ ಈ ಮಾಸ್ಕ್ ಎಷ್ಟು ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಪಿಂಪ್ರಿ ಚಿಂಚ್ವಾಡ್ ನಲ್ಲಿ ಜುಲೈ 1ರವರೆಗೆ ಸುಮಾರು 3,284 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲದೆ 47 ಮಂದಿ ಕೋವಿಡ್ 19ಗೆ ಬಲಿಯಾಗಿದ್ದರು.

Continue

Related Articles

One Comment

Leave a Reply

Your email address will not be published. Required fields are marked *

Back to top button
Close
Close