ಕರ್ನಾಟಕ ಸುದ್ದಿ

ಇವತ್ತು ರಾತ್ರಿಯಿಂದಲೇ ಕರ್ನಾಟಕ ಕಂಪ್ಲೀಟ್ ಲಾಕ್ ಡೌನ್…. ಏನಿರುತ್ತೆ… ಏನಿರಲ್ಲ?

ವರದಿ:ಸಿರಾಜುದ್ದೀನ್ ಬಂಗಾರ್ ಸಂಪಾದಕರು, ಕರ್ನಾಟಕ ಜ್ವಾಲೆ

ಬೆಂಗಳೂರು: ಅಬ್ಬಾ ವೀಕೆಂಡ್ ಬಂತಪ್ಪಾ ಅಂತಾ ಹೊರೆಗೆ ಹೋಗುವ ಪ್ಲ್ಯಾನ್ ಇದ್ರೆ ಸ್ವಲ್ಪ ಎಚ್ಚರ. ಯಾಕಂದ್ರೆ ಇವತ್ತು ಸಂಜೆಯಿಂದಲೇ ಕರುನಾಡಿಗೆ ಕರುಡನಾಡೇ ಕಂಪ್ಲೀಟ್ ಬಂದ್ ಆಗಲಿದೆ. ಒಂದಲ್ಲ, ಎರಡಲ್ಲ ಸತತ 33 ಗಂಟೆಗಳ ಕಾಲ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುತ್ತೆ. ಸೋಮವಾರ ಬೆಳಗ್ಗೆಯ ತನಕ ಯಾರು ಹೋರಗೆ ಹೆಜ್ಜೆ ಇಂಡಗಿಲ್ಲ. ಇವತ್ತು ರಾತ್ರಿಯಿಂದಲ್ಲೇ ಲಾಕ್ ಡೌನ್ ಜಾರಿಗೆ ಬರಲಿದೆ.

ಇಂದು ಸಂಜೆಯಿಂದಲೇ ಕರ್ನಾಟಕ ಕಂಪ್ಲೀಟ್ ಲಾಕ್…!

ಕರುನಾಡಲ್ಲಿ ಕೊರೋನಾ ದಾಪುಗಾಲಿಡುತ್ತಾ ಮುಂದೆ ಸಾಗಿದೆ. ಹಾಗಾಗಿ ರಾಜ್ಯದಲ್ಲಿ ರಣಕೇಕೆ ಹಾಕ್ತಿರೋ ಹೆಮ್ಮಾರಿಯ ಕಟ್ಟಿ ಹಾಕೋಕೆ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದೆ. ಇಂದು ಸಂಜೆಯಿಂದಲೇ ರಾಜ್ಯದ ಪ್ರತಿಯೋಂದು ಜಿಲ್ಲೆ, ನಗರ, ಹಳ್ಳಿ ಹಳ್ಳಿಯಲ್ಲೂ ಸೆಕ್ಷನ್ 144 ಜಾರಿಯಾಗಲಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಕರುನಾಡು ಸಂಪೂರ್ಣ ಸ್ತಬ್ಧವಾಗಲಿದೆ.

ಲಾಕ್ ಡೌನ್ ವೇಳೆ ಏನು ಸಿಗಲ್ಲ..?

ಲಾಕ್ ಡೌನ್ ಇವತ್ತು ರಾತ್ರಿಯಿಂದಲೇ ಜಾರಿಗೆ ಬರುತ್ತಿರೋದ್ರಿಂದ ಅತ್ಯಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗೆ ಬ್ರೇಕ್ ಬೀಳಲಿದೆ. ಹೀಗಾಗಿ ಈ ಕೆಳಗಿನ ಸೇವೆಗಳು ಲಭ್ಯವಿರೋದಿಲ್ಲ.

 1. ಸರ್ಕಾರಿ ಬಸ್ ಗಳು ರಸ್ತಗಿಳಿಯಲ್ಲ
 2. ಆಟೋ, ಟ್ಯಾಕ್ಸಿ ಸೇವೆ ಇರಲ್ಲ.
 3. ಯಾವುದೇ ಅಂಗಡಿ ಮುಂಗಟ್ಟುಗಳು ಓಪನ್ ಆಗಲ್ಲ
 4. ಶಾಪಿಂಗ್ ಮಾಲ್ ಗಳು ಕಂಪ್ಲೀಟ್ ಕ್ಲೋಸ್
 5. ಹೋಟೆಲ್, ರೆಸ್ಟೋರೆಂಟ್ ಮತ್ತು ಪಬ್ ಮುಚ್ಚಿರಲಿವೆ.
 6. ಮಸೀದಿ, ಚರ್ಚ್ ಮತ್ತು ದೇವಸ್ಥಾನಗಳು ತೆರೆಯಲು ಅನುಮತಿ ಇಲ್ಲ.
 7. APMC ಮಾರುಕಟ್ಟೆಗಳು ಇಂದು ಸಂಜೆಯಿಂದಲೇ ಬಂದ್ ಆಗಲಿದೆ.
 8. ಬೀದಿಬದಿಯ ವ್ಯಾಪಾರಕ್ಕೂ ಅನುಮತಿ ಇಲ್ಲ.
 9. ಖಾಸಗಿ ವಾಹನ ಮತ್ತು ಬೈಕ್ ಗಳಲ್ಲಿ ಯಾರು ಓಡಾಡುವಂತಿಲ್ಲ
 10. ಅಂತರ್ ಜಿಲ್ಲೆ, ಅಂತರ್ ರಾಜ್ಯ ಪ್ರವಾಸಕ್ಕೆ ಅನುಮತಿಯಿಲ್ಲ.
 11. ವಾಕಿಂಗ್, ಪಾರ್ಕ್ ನಲ್ಲಿ ವಿಹಾರದ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಲಾಕ್ ಡೌನ್ ವೇಳೆ ಏನು ಸಿಗುತ್ತೆ:-

ಲಾಕ್ ಡೌನ್ ಕರ್ಫ್ಯೂ ವೇಳೆ ಖಡಕ್ ರೂಲ್ಸ್ ಜಾರಿಯಲ್ಲಿರುತ್ತೆ. ಹೀಗಾಗಿ, ಕೆಲವೋಂದು ಸೇವೆಗಳು ಮಾತ್ರ ಲಭ್ಯವಿರುತ್ತೆ.

 1. ಹಾಲು, ಮೊಸರು, ತರಕಾರಿ, ಪೇಪರ್ ಎಂದಿನಂತೆ ಸಿಗಲಿದೆ
 2. ದಿನಸಿ ವಸ್ತುಗಳು ಲಾಕ್ ಡೌನ್ ವೇಳೆಯೂ ಲಭ್ಯವಿರಲಿದೆ
 3. ಔಷಧಿ ಅಂಗಡಿ, ಆ್ಯಂಬುಲೆನ್ಸ್, ವೈದ್ಯಕೀಯ ಸೇವೆ ಇರಲಿವೆ
 4. ಡಾಕ್ಟರ್, ನರ್ಸ್ ಹಾಗೂ ತುರ್ತು ವಾಹನ ಓಡಾಟಕ್ಕೆ ಮಾತ್ರ ಅವಕಾಶ

ಹಾಗಾಗಿ ಏನಾದ್ರೂ ಪ್ಲ್ಯಾನ್ ಇದ್ರೆ ಚೇಂಜ್ ಮಾಡ್ಕೋಳ್ಳಿ. ಇಂದು ಎಲ್ಲೆ ಇದ್ರೂ ಸಂಜೆಯೊಳಗೆ ಮನೆ ಸೇರಿಕೊಳ್ಳಿ. ಯಾಕಂದ್ರೆ ಇವತ್ತು ಸಂಜೆಯಿಂದಲೇ ಲಾಕ್ ಡೌನ್ ಜಾರಿ.

Continue

Related Articles

Leave a Reply

Your email address will not be published. Required fields are marked *

Back to top button
Close
Close