ಕರ್ನಾಟಕ ಸುದ್ದಿ

ಡಿಕೆ ಶಿವಕುಮಾರ್ ಎಷ್ಟು ಗಂಡಸು ಎಂದು ನನಗೊತ್ತು: ರಮೇಶ್ ಜಾರಕಿಹೊಳಿ

Posted by :Sirajuddin Bangar

Source:NS18

ಬೀದರ್: ಬಿಜೆಪಿ ಮುಕ್ತ ಕರ್ನಾಟಕ ಘೋಷಣೆ ಮಾಡಿರುವ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಎಷ್ಟು ಗಂಡಸು ಅಂತ ಗೊತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿ ಕಾರಂಜಾ ಜಲಾಶಯ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಯಾವುದೇ ಪಕ್ಷದಲ್ಲಿದ್ದರೂ ಮಾಜಿ ಸಿಎಂ ಸಿದ್ಧರಾಮಯ್ಯ ಅವರೇ ನಮ್ಮ ನಾಯಕರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಶಾಸಕರ ಅನುದಾನ ಬಿಡುಗಡೆಗೆ ಪರ್ಸಂಟೇಜ್ ಪಡೆಯಲಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಗೋದಾವರಿ ಬೇಸ್ ನ ತನ್ನ ಪಾಲಿನ ನೀರು ಸದ್ಬಳಕೆಗಾಗಿ ಬೀದರ ಜಿಲ್ಲೆಯಲ್ಲಿ ಹೊಸದಾಗಿ ಬಾಂದಾರ ಸೇತುವೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ.‌ ಈಗಾಗಲೇ ನಿರ್ಮಿಸಿರುವ ಬ್ಯಾರೇಜ್ ಗಳನ್ನು ಸರಿಪಡಿಸಲಾಗಿದ್ದು, ಈಗ ನೀರು ಸಂಗ್ರಹ ಆಗಲಿದೆ ಎಂದು ಜಾರಕಿಹೊಳಿ ಹೇಳಿದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close