ರಾಯಚೂರು ಜಿಲ್ಲೆ ಸುದ್ದಿ

Breaking news : ಸಾರ್ವಜನಿಕರ ಕೆಲಸಗಳಿಗೆ ಲಂಚ ಸ್ವೀಕಾರ ಆರೋಪ: ಸಿಂಧನೂರು ನಗರಸಭೆ ಮೇಲೆ ಎಸಿಬಿ ದಾಳಿ

— ಸಿರಾಜುದ್ದೀನ್ ಬಂಗಾರ್ ‌ಸಂಪಾದಕರು, ಸಿರವಾರ

ಸಿಂಧನೂರು ಜೂ.30: ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ಅನಗತ್ಯ ವಿಳಂಬ ಮಾಡುವುದರ ಜತೆಗೆ ಹಣ ಪಡೆದು ಕೆಲಸ ಮಾಡುತ್ತಿರುವ ಆರೋಪದಡಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನಗರಸಭೆ ಕಚೇರಿ ಸಿಬ್ಬಂದಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸುಮಾರು 40 ಜನರ ತಂಡ ಕಚೇರಿಗೆ ದಾಂಗುಡಿ ಇಟ್ಟಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಯ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಸಣ್ಣ ಕೆಲಸ ಮಾಡಿಕೊಡಲು ಪೀಡಿಸುವುದು, ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು ದಾಳಿ ನಡೆಸಲಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಲಂಚ ಹಾವಳಿ ಬಗ್ಗೆ ಎಸಿಬಿಗೆ ದೂರುಗಳು ಸಲ್ಲಿಕೆಯಾಗಿದ್ದವು ಎಂದು ತಿಳಿದು ಬಂದಿದೆ. ಡಿಎಸ್ಪಿ ಸಂತೋಷ ಬನಹಟ್ಟಿ ನೇತೃತ್ವದಲ್ಲಿ 10 ಜನ ಪಿಎಸ್ಐ 40 ಜನ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಶೋಧ ಕಾರ್ಯ ಮುಂದುವರಿದಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close