ಕರ್ನಾಟಕ ಸುದ್ದಿ

ತೈಲ ದರ ಏರಿಕೆ ವಿರೋಧಿಸಿ ಸೈಕಲ್ ಸವಾರಿ ಮಾಡಿದ ರಾಜ್ಯ ಕಾಂಗ್ರೆಸ್ ನಾಯಕರು

Posted By:Sirajuddin Bangar

Source:NS18

ಬೆಂಗಳೂರು: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿರುವ ಪೆಟ್ರೋಲ್ – ಡಿಸೇಲ್ ಬೆಲೆಯನ್ನು ಖಂಡಿಸಿ ಇಂದು ರಾಜ್ಯ ಕಾಂಗ್ರೆಸ್ ನಾಯಕರು ಇಂದು ಸೈಕಲ್ ಸವಾರಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಅನೇಕ ಶಾಸಕರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಅಭಿಮಾನಿಗಳು ಸೈಕಲ್ ತಂದು ಕೊಟ್ಟರು. ಶಿವಾನಂದ ಸರ್ಕಲ್ ನ ನಿವಾಸದಿಂದ ಕೆಪಿಸಿಸಿ ಕಚೇರಿ ಕಡೆಗೆ ಸಿದ್ದರಾಮಯ್ಯನವರು ಸೈಕಲ್ ನಲ್ಲಿ ಹೊರಟರು. ಮಾಜಿ ಸಚಿವರಾದ ಜಮೀರ್ ಅಹಮದ್ ಖಾನ್ ಮತ್ತು ಚೆಲುವರಾಯ ಸ್ವಾಮಿ ಸಾಥ್ ನೀಡಿದರು.

ನಂತರ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಮೀನ್ಸ್  ಸ್ಕ್ವೇರ್  ವೃತ್ತದಲ್ಲಿರುವ ಆದಾಯ ತೆರಿಗೆ ಕಟ್ಟಡದ ಕಡೆ ಹೊರಟ ಸೈಕಲ್ ರ್ಯಾಲಿಯಲ್ಲಿ ಹೊರಟಿತು.

Continue

Related Articles

Leave a Reply

Your email address will not be published. Required fields are marked *

Back to top button
Close
Close