ಸಿರವಾರ

ಸಿರವಾರ; ಮಳೆ ಬಂದರೆ ಕೆರೆಯಾಗುವ ಸಿರವಾರ ಬಸ್ ನಿಲ್ದಾಣ !

ವರದಿ: ಸಿರಾಜುದ್ದೀನ್ ಬಂಗಾರ್

ಸಿರವಾರ: ಸಿರವಾರ ನೂತನ ತಾಲೂಕು ಇಲ್ಲಿನ ಬಸ್‌ ನಿಲ್ದಾಣ ಮೂಲ ಸೌಕರ್ಯಗಳು ಇಲ್ಲದೇ ಸಾರ್ವಜನಿಕರು ಪ್ರತಿನಿತ್ಯ ಪರದಾಡುವಂತಾಗಿದೆ. ಇದು ಯಾವುದೇ ವಾರ್ಡ್ ಸಮಸ್ಯೆಯ ಚಿತ್ರಣವಲ್ಲ. ಸಿರವಾರ ಬಸ್ ನಿಲ್ದಾಣದ ಸ್ಥೂಲ ಪರಿಚಯ. ಪ್ರತಿನಿತ್ಯ 60ಕ್ಕೂ ಹೆಚ್ಚು ಬಸ್‌ಗಳು ನಿಲ್ದಾಣಕ್ಕೆ ಬಂದರೂ ಅಗತ್ಯ ಸೌಲಭ್ಯಗಳಿಲ್ಲದೇ ಪ್ರಯಾಣಿಕರು ಪರಿತಪಿಸುವಂತಾಗಿದೆ.

ಹೈದರಾಬಾದ್ ದಿಂದ ಬೆಳಗಾವಿ ಹೆದ್ದಾರಿಯಲ್ಲಿ ಇರುವ ಸಿರಿವಾರ ತಾಲ್ಲೂಕು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದು ವಿಷಾದನೀಯ ಸಂಗತಿಯಾಗಿದೆ.ಪ್ರತಿನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಿರುತ್ತಾರೆ. ಆದರೆ ಇಲ್ಲಿ ಎಸ್​ಟಿಡಿ ಬೂತ್ ನಂತಿರುವ ಶೆಡ್ ಬಿಟ್ಟರೆ ಜನರಿಗೆ ನಿಂತುಕೊಳ್ಳಲು ಒಂದು ಸರಿಯಾದ ಬಸ್ ತಂಗುದಾಣವಿಲ್ಲ. ಬಿಸಿಲು ಮಳೆ ಎನ್ನದೇ ಪ್ರಯಾಣಿಕರು ರಸ್ತೆ ಮಧ್ಯೆ ನಿಂತು ಬಸ್ಸು ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲ ದಿನಗಳ ಹಿಂದೆಷ್ಟೇ ವಿಧ್ಯಾರ್ಥಿಯ ಮೇಲೆ ಬಸ್ ನಿಲ್ದಾಣದ ಮೇಲ್ಚಾವಣಿ ಏಕಾಏಕಿಯಾಗಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಣಪಯದಿಂದ ಪರಾಗಿದ್ದಾನೆ. 

ಸಿರವಾರ ಪಟ್ಟಣ ಪ್ರಯಾಣಿಕರಿಗೆ ಕೂರುವುದಕ್ಕೆ, ನಿಲ್ಲುವುದಕ್ಕೆ ನಿಲ್ದಾಣವಿಲ್ಲ. ಇದ್ದರು ಸ್ವಚ್ಛತೆ ಇಲ್ಲ. ವೃದ್ಧರು, ಮಕ್ಕಳು ,ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ.ಪ್ರತಿಸಲ ಮಳೆ ಬಂದಾಗ ಬಸ್ ನಿಲ್ದಾಣ ಕೊಳಚೆ ನೀರಿನಿಂದ ಜಲಾವೃತವಾಗುತ್ತದೆ ಈ ವೇಳೆ ಪರದಾಡುವ ಸ್ಥಿತಿ ಇಲ್ಲಿಗೆ ಬಸ್‍ಗಾಗಿ ಬರುವ ಪ್ರಯಾಣಿಕರದ್ದಾಗಿದೆ. ವಿಪರ್ಯಾಸವೆಂದರೆ ಇಲ್ಲಿ ಪ್ರಯಾಣಿಕರಿಗೆ ಸುಸಜ್ಜಿತ ಬಸ್ ನಿಲ್ದಾಣವಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿ, ಬೇಕಾಬಿಟ್ಟಿಯಾಗಿ ಎಲ್ಲಿಬೇಕೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಜನ, ಅಗತ್ಯ ಮೂಲ ಸೌಕರ್ಯ ವಿಲ್ಲದೇ ನಿತ್ಯ ಗೋಳಾಡುತ್ತಿರುವ ಸಾರ್ವಜನಿಕರು. ನೀರಿನ ವ್ಯವಸ್ಥೆ ಇಲ್ಲ, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ಸಿರವಾರ ಬಸ್ ನಿಲ್ದಾಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿ ಮಾದರಿ ಬಸ್ ನಿಲ್ದಾಣವನ್ನಾಗಿ ಮಾಡಬೇಕಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close