ಕರ್ನಾಟಕ ಸುದ್ದಿ

SSLC ಪರೀಕ್ಷೆ: ಮೊದಲ ದಿನ 10 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ತೃಪ್ತಿ ವ್ಯಕ್ತಪಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

Posted By: Sirajuddin Bangar

Source:NS18

ಬೆಂಗಳೂರು(ಜೂನ್ 25): ಕೊರೋನಾ ಮಹಾಮಾರಿ ಆರ್ಭಟದ ಮಧ್ಯೆ ಅಂತೂ ಇಂತೂ ಇವತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭಗೊಂಡಿವೆ. ಮೊದಲ ದಿನ ಯಾವುದೇ ಹಿನ್ನಡೆಯಾಗುವಂತಹ ಘಟನೆ ನಡೆದಿಲ್ಲದಿರುವುದು ಸರ್ಕಾರದ ಮರ್ಯಾದೆಯನ್ನ ಉಳಿಸಿದೆ. ಮೊದಲ ದಿನದ ಪರೀಕ್ಷೆ ನೆರವೇರಿದ ರೀತಿ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತೃಪ್ತಿ ಮತ್ತು ಸಂತೋಷ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಚಿವರು ಇಂದು ಮೊದಲ ಪರೀಕ್ಷಾ ದಿನದಂದು ಬಸವರೇಶ್ವರದ ಫ್ಲಾರೆನ್ಸ್ ಪ್ರೌಢಶಾಲೆ, ರಾಜಾಜಿನಗರದ ಸೇಂಟ್ ಆನ್ಸ್ ಪ್ರೌಢಶಾಲೆ ಮತ್ತು ಎಸ್.ಜೆ.ಆರ್. ಪ್ರೌಢಶಾಲೆ, ಸಾರಕ್ಕಿ ಮತ್ತು ಉತ್ತರಹಳ್ಳಿಯ ಕೆಪಿಎಸ್ ಪ್ರೌಢಶಾಲೆ ಸೇರಿದಂತೆ ಬೆಂಗಳೂರಿನ 10 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅವಲೋಕನ ನಡೆಸಿದರು. ಪರೀಕ್ಷಾ ಕೇಂದ್ರಗಳಲ್ಲಿನ ಸ್ವಚ್ಛತೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನ ಪರಿಶೀಲಿಸಿದರು. ವಿದ್ಯಾರ್ಥಿಗಳ ಜೊತೆ ಮಾತನಾಡಿ ಚೆನ್ನಾಗಿ ಪರೀಕ್ಷೆ ಬರೆಯುವಂತೆ ಹಾರೈಸಿದರು.

ನಂತರ ಮಾತನಾಡಿದ ಸಚಿವರು, SSLC ಪರೀಕ್ಷೆ ಬಗ್ಗೆ ಇದ್ದ ಒಂದಷ್ಟು ಆತಂಕ ಈಗ ದೂರವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿದ್ದು ಸಂತೋಷ ತಂದಿದೆ. ಒಂದೆರಡು ಕಡೆ ಸಣ್ಣಪುಟ್ಟ ಅಡಚಣೆ ಬಿಟ್ಟರೆ ಎಲ್ಲಾ ಕಡೆ ಪರೀಕ್ಷೆ ಚೆನ್ನಾಗಿ ನಡೆದಿದೆ ಎಂದು ಸಮಾಧಾನಪಟ್ಟರು.

ಇವತ್ತು ಪರೀಕ್ಷೆ ಯಶಸ್ವಿಯಾಗಲು ಮುಖ್ಯವಾಗಿ ವಿದ್ಯಾರ್ಥಿಗಳು ಕಾರಣ. ಹಾಗಾಗಿ ಮಕ್ಕಳಿಗೆ ಮೊದಲು ಅಭಿನಂದನೆ ಸಲ್ಲಬೇಕು. ರಾಜ್ಯದ ಬೇರೆಬೇರೆ ಭಾಗಗಳಿದ ಮಾಹಿತಿ ತರಸಿಕೊಂಡಿದ್ದೇನೆ. ಒಂದೆರಡು ಕಡೆ ಸಣ್ಣಪುಟ್ಟ ಸಮಸ್ಯೆ ಬಿಟ್ರೆ ಎಲ್ಲೆಡೆಯೂ ಪರೀಕ್ಷೆ ಚೆನ್ನಾಗಿ ನಡೆದಿದೆ. ಕೊಪ್ಪಳದ ಪರೀಕ್ಷಾ ಕೇಂದದಲ್ಲಿ ವಿದ್ಯಾರ್ಥಿಗಳಿಗೆ ಗಾರ್ಡ್ ಆಫ್ ಅನರ್ ರೀತಿಯಲ್ಲಿ ಸ್ವಾಗತ ಕೋರಿದ್ದು ಅದ್ಭುತ ಕಾರ್ಯ ಎಂದು ಶಿಕ್ಷಣ ಸಚಿವರು ಹೇಳಿದರು.

ಕೇರಳ ಸೇರಿದಂತೆ ರಾಜ್ಯದಗಡಿ ಭಾಗದಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿದ್ದು ಸಂತೋಷ ತಂದಿದೆ ಎಂದ ಸುರೇಶ್ ಕುಮಾರ್, ತಾನು ಇಂದು ಬೆಂಗಳೂರಿನ ಹಲವು ಕಡೆ ಪರೀಕ್ಷೆ ಕೇಂದ್ರಗಳಿಗೆ ಹೋಗಿದ್ದಾಗಿಯೂ, ‌ಮುಂದೆ ರಾಜ್ಯದ ಬೇರೆಬೇರೆ ಭಾಗಗಳಿಗೆ ಹೋಗಿ ಪರಿಶೀಲನೆ ಮಾಡುವುದಾಗಿಯೂ ತಿಳಿಸಿದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close