ಅಂತರಾಷ್ಟ್ರೀಯ

ತುರ್ತು ಪರಿಸ್ಥಿತಿಗೆ 45 ವರ್ಷ: ಅಧಿಕಾರಕ್ಕಾಗಿ ಪ್ರಜಾಪ್ರಭುತ್ವವನ್ನೇ ಕೊಂದ ಕಾಂಗ್ರೆಸ್ – ಅಮಿತ್​​ ಶಾ

Posted By: Sirajuddin Bangar

Source: NS18

ನವದೆಹಲಿ(ಜೂ.25): ಕಾಂಗ್ರೆಸ್​ ಪಕ್ಷವೂ ದೇಶದ ಮೇಲೆ ಕರಾಳ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 45 ವರ್ಷ. 1975ರ ಜೂನ್ 25ರಂದು ಇಂದಿರಾ ಗಾಂಧಿ ಅವರು ಈ ದೇಶದಲ್ಲಿ ತುರ್ತು ಸ್ಥಿತಿ ಜಾರಿಗೆ ತಂದಿದ್ದರು. ಹೆಚ್ಚೂಕಡಿಮೆ ಎರಡು ವರ್ಷಗಳ ಕಾಲವಿದ್ದ ಈ ಅವಧಿಯಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆಯಿಂದ ಹಿಡಿದು ಎಲ್ಲವನ್ನೂ ಇಂದಿರಾ ಗಾಂಧಿ ತಮ್ಮ ಸುಪರ್ದಿಗೆ ಇಟ್ಟುಕೊಂಡಿದ್ದರು. ತಮ್ಮ ರಾಜಕೀಯ ವಿರೋಧಿಗಳೆಲ್ಲರನ್ನೂ ಜೈಲಿಗೆ ಕಳುಹಿಸಿ ಸರ್ವಾಧಿಕಾರಿಯಾಗಿ ರಾಜ್ಯಭಾರ ಮಾಡಿದ್ದರು. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಭೂಗತರಾಗಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದರು. 1977ರ ಮಾರ್ಚ್ 21ರವರೆಗೆ ತುರ್ತು ಪರಿಸ್ಥಿತಿಯನ್ನು ಈ ದೇಶ ಅನುಭವಿಸಿತ್ತು.

ಆದರೀಗ, ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದ 45ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದಾರೆ. “1975ರ ಜೂನ್ 25-26ರ ಮಧ್ಯರಾತ್ರಿಯಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಅಂದು ಕಾಂಗ್ರೆಸ್​​ ದೇಶದ ತಳಸಮುದಾಯ ಮತ್ತು ಬಡವರ ಮೂಲಭೂತ ಹಕ್ಕುಗಳನ್ನು ದಮನಗೊಳಿಸಿತ್ತು. ಕಾಂಗ್ರೆಸ್​ ಪಕ್ಷವನ್ನು ವಿರೋಧಿಸಿದ್ದ ಟೀಕಾಕಾರರನ್ನು ಜೈಲಿಗಟ್ಟಲಾಗಿತ್ತು. ಇಲ್ಲಿನ ನ್ಯಾಯಾಂಗ, ಕಾರ್ಯಾಂಗ, ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆಲೆಯೇ ಇಲ್ಲದಂತಹಾ ಪರಿಸ್ಥಿತಿ ನಿರ್ಮಾಣವಾಗಿತ್ತು” ಎಂದು ಅಮಿತ್​ ಶಾ ಟ್ವೀಟ್​ ಮೂಲಕ ಕುಟುಕಿದ್ಧಾರೆ.

ದೇಶದ ಲಕ್ಷಾಂತರ ಜನರ ಹೋರಾಟದ ಫಲದಿಂದ ಈ ತುರ್ತು ಪರಿಸ್ಥಿತಿ ಕೊನೆಯಾಯ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಪುನಃಸ್ಥಾಪನೆಯಾಯ್ತು. ಆದರೆ, ಕಾಂಗ್ರೆಸ್​ನ ದರ್ಪ ಮಾತ್ರ ಕಡಿಮೆಯಾಗಲಿಲ್ಲ. ಒಂದು ಕುಟುಂಬದ ಹಿತಾಸಕ್ತಿಯೂ ರಾಷ್ಟ್ರ ಮತ್ತು ಪಕ್ಷದ ಹಿತಾಸಕ್ತಿ ಆಗಿತ್ತು. ಅಂದಿನಿಂದಲೂ ಇಂದಿನವರೆಗೂ ಕಾಂಗ್ರೆಸ್​ನಲ್ಲಿ ಈ ಕುಟುಂಬ ರಾಜಕಾರಣ ಹಾಗೆಯೇ ಇದೆ ಎಂದು ಅಮಿತ್​ ಶಾ ಮತ್ತೊಂದು ಟ್ವೀಟ್​ನಲ್ಲಿ ಕಿಡಿಕಾರಿದ್ಧಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close