ಕರ್ನಾಟಕ ಸುದ್ದಿ

ಕೊರೋನ ಸೊಂಕು ತಡೆಗೆ ಮತ್ತೆ ಲಾಕಡೌನ-ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ

ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ

ಕರ್ನಾಟಕದಲ್ಲಿ ಮಾರಕ ಕೊರೋನಾ ವೈರಸ್ ಅಟ್ಟಹಾಸ ಮುಂದುವರಿದಿದೆ.​​​​ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಂತೂ ಕೋವಿಡ್​​-19 ಪಾಸಿಟಿವ್​​ ಕೇಸುಗಳು ದಿನೇದಿನೇ ಏರುತ್ತಲೇ ಇವೆ. ಹೀಗಿರುವಾಗ ಬೆಂಗಳೂರಿನಲ್ಲಿ ತೀವ್ರಗೊಳ್ಳುತ್ತಿರುವ ಕೊರೋನಾ ವೈರಸ್​ ಬಗ್ಗೆ ಸ್ಥಳೀಯ ಶಾಸಕರು ಆತಂಕಗೊಂಡಿದ್ದಾರೆ. ಇನ್ನೊಮ್ಮೆ ಬೆಂಗಳೂರು ಸಂಪೂರ್ಣ ಲಾಕ್​ಡೌನ್​​ ಮಾಡಿ ಎಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ಮತ್ತೊಮ್ಮೆ ಬೆಂಗಳೂರಿನಲ್ಲಿ ಲಾಕ್​ಡೌನ್​​ ಜಾರಿ ಮಾಡಬೇಕೋ ಬೇಡವೋ ಎಂಬ ಬಗ್ಗೆ ಸರ್ಕಾರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿರುವ ಕೊರೋನಾ ಸೋಂಕು ತಡೆಗೆ ಮುಂದೇನು ಮಾಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ಹೀಗಾಗಿಯೇ ಇಂದು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಇಲ್ಲಿನ ಪುನಃ ಲಾಕ್​ಡೌನ್​​ ಜಾರಿಗೊಳಿಸಬೇಕೇ ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ.

ಕಂಪ್ಯೂಟರ್ ತರಬೇತಿ ಪಡೆಯಿರಿ ಉದ್ಯೋಗಗಳಿಸಿರಿ

ಬೆಳ್ಳಗೆ 11 ಗಂಟೆಗೆ ಸಭೆ ಆರಂಭವಾಗಲಿದ್ದು, ಕೆಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಈಗಾಗಲೇ ರಾಜ್ಯದ ಕೋವಿಡ್​-19 ಟಾಸ್ಕ್​​​ ಫೋರ್ಸ್​​ ತಜ್ಞರಿಂದಲೂ ಕೊರೋನಾ ವೈರಸ್​​ ಬಗ್ಗೆ ಆತಂಕದ ವರದಿ ಸಿಕ್ಕಿದೆ. ಸಮುದಾಯಕ್ಕೆ ಈಗಾಗಲೇ ಕೊರೋನಾ ಹರಡಿರುವ ಸಾಧ್ಯತೆ ಇದೆ. ಈ ಎಲ್ಲದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಸರ್ಕಾರ ಒಂದು ನಿರ್ಧಾರಕ್ಕೆ ಬರಲಿದೆ.

ಇದಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಕೊವೀಡ್-19 ವೈರಸ್​ಗೆ ಚಿಕಿತ್ಸೆ, ದರ ನಿಗದಿ, ಆಸ್ಪತ್ರೆಗಳಿಗೆ ಬೆಡ್ ಒದಗಿಸುವುದು, ಕೊರೋನಾ ತಡೆಗೆ ಅಗತ್ಯ ಕ್ರಮಕೈಗೊಳ್ಳುವುದು, ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ತಡೆಯಲು ಮತ್ತಷ್ಟು ಬಿಗಿ ಕ್ರಮಕೈಗೊಳ್ಳುವ ಕುರಿತು ಮಾತುಕತೆ ಆಗಲಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close