ಸಿರವಾರ

ಸಿರವಾರ; ಸಿರವಾರ ಹಾಗೂ ಬಲ್ಲಟಗಿ ಪತ್ತಿನ ಸಹಕಾರ ಸೌಹಾರ್ದ ಸಂಘಗಳಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ

ವರದಿ: ಸಿರಾಜುದ್ದೀನ್ ಬಂಗಾರ್

ಸಿರವಾರ: ಕೋವಿಡ್ -19 ತಡೆಯಲು ಅವಿರತ ಪರಿಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಲ್ಲಿ ಆತ್ಮಸ್ಥೆತ್ರೖರ್ಯ ತುಂಬಲು  ಸಿರವಾರ ಹಾಗೂ ಬಲ್ಲಟಗಿ ಪತ್ತಿನ ಸಹಕಾರ ಸೌಹಾರ್ದ ಸಂಘಗಳಿಂದ 16 ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.

ಪಟ್ಟಣದ ಲಿಂಗಸ್ಗೂರು ರಸ್ತೆಯಲ್ಲಿರುವ ವಿದ್ಯಾವಾಹಿನಿ ವಸತಿ ಶಾಲೆಯ ಸಭಾಂಗಣದಲ್ಲಿ ತಹಸೀಲ್ದಾರ ಕೆ. ಶೃತಿ ಅವರು ಚಾಲನೆ ನೀಡಿದರು.

ಕೊರೋನಾ ಸೊಂಕು ನಿಯಂತ್ರಣದಲ್ಲಿ ಜೀವನದ ಹಂಗು ತೊರೆದು ಕಾರ್ಯನಿರ್ವಹಿಸಿರುವ ಆಶಾ ಕಾರ್ಯಕರ್ತೆಯರ ಶ್ರಮ ಅಧಿಕವಾಗಿದೆ, ಜನರು ಸಹ ಇಂತವರನ್ನು ಗುರುತಿಸಿ ಗೌರವಿಸಿದಾಗ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ, ಸಹಕಾರಿ ಪತ್ತಿನ ಸಂಘದವರು ಆ ಕೆಲಸ ಮಾಡಿದ್ದಾರೆ ಎಂದು ಸಿರವಾರ ತಹಸೀಲ್ದಾರ ಕೆ.ಶೃತಿ ಹೇಳಿದರು.

ಸಹಕಾರಿ ಸಪ್ತಾಹದ ಮುಖ್ಯಾಧಿಕಾರಿ ವಿಜಯಕುಮಾರ ಉತ್ನಾಳ ಅವರು ಮಾತನಾಡಿ ಜಾತಿ-ಮತ, ಮೇಲು-ಕೀಳು ಎನ್ನದೆ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಯನ್ನು ಎಷ್ಟು ಶ್ಲ್ಯಾಘಿಸಿದರೂ ಕಡಿಮೆಯೇ ಎಂದರು.

ಪ.ಪಂ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ ಅವರು ಮಾತನಾಡಿ ಜಿಲ್ಲೆಯಲ್ಲಿ ಕಳೆದ 2 ತಿಂಗಳ ಕಾಲ ತಮ್ಮ ಯೋಗಕ್ಷೇಮ ಮರೆತು ಮನೆ-ಮನೆಗೆ ಭೇಟಿ ಮಾಡಿ ಕುಟುಂಬ ಸದಸ್ಯರ ಆರೋಗ್ಯ ಸಮೀಕ್ಷೆ ನಡೆಸಿ ಪ್ರತಿಯೊಬ್ಬರ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ನೀಡಿದ್ದಾರೆ ಎಂದರು.

ನಂತರ ಮಾತನಾಡಿದ ಶ್ರೀಶಾಂಭವಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಜಿ.ಲೋಕರೆಡ್ಡಿ ಅವರು ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಮನುಷ್ಯರಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಇಂತಹ ಮಹಾನ್ ಕಾರ್ಯದಲ್ಲಿ ಆಶಾ ಕಾರ್ಯಕರ್ತೆಯರು ಶ್ರಮಿಸಿರುವುದು ಶ್ಲಾಘನೀಯ. ಪತ್ತಿನ ಸಹಕಾರ ಸೌಹಾರ್ದ ಸಂಘಗಳಿಂದ ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಹೇಳಿದರು.

ನಂತರ ಮಾತನಾಡಿದ ಜಂಬಲದಿನ್ನಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಟಿ.ಬಸವರಾಜ ಅವರು, ಕೋವಿಡ್ 19 ಪ್ರಂಟ್ ಲೈನ್ ವಾರಿಯರ್ ಗಳಾಗಿ ಕಳೆದ ಮೂರು ತಿಂಗಳಿಂದ ಕರ್ತವ್ಯ ನಿರತ ಆಶಾ ಸಹೋದರಿಯರ ಕೆಲಸ ಬೆಲೆಕಟ್ಟಲು ಆಗದಂತಹುದು ಆದ್ದರಿಂದಲೇ ಚಿಕ್ಕ ಧನಸಹಾಯವನ್ನು ಸಿರವಾರ ಹಾಗೂ ಬಲ್ಲಟಗಿ ಪತ್ತಿನ ಸಹಕಾರ ಸೌಹಾರ್ದ ಸಂಘಗಳಿಂದ ಚೆಕ್ ವಿತರಣೆ ಮಾಡಲಾಯಿತು.

ಕೋವಿಡ್‌ 19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಮೆಚ್ಚುವಂತದ್ದು ಎಂದು ಸಿರಿ ಸಂಜೀವಿನಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ ಅವರು ತಿಳಿಸಿದರು.

ಈ ಸಂಧರ್ಭದಲ್ಲಿ ಸಿರವಾರ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಎನ್.ಉದಯಕುಮಾರ, ಡಾ. ಶರಣಪ್ಪ ಬಲ್ಲಟಗಿ, ವೆಂಕಟೇಶ ವಕೀಲ್ ಜಾಲಾಪೂರು, ಹಾಜಿಮಲ್ಲಂಗ್, ಆಶಾ ಕಾರ್ಯಕರ್ತೆ ಸಂಘದ ಅದ್ಯಕ್ಷೆ ಟಿ.ರಾಧ, ವಿವಿದ ಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕ, ನಿರ್ಧೇಶಕರು ಸೇರಿದಂತೆ ಇನ್ನಿತರರು ಇದ್ದರು.

 

Continue

Related Articles

Leave a Reply

Your email address will not be published. Required fields are marked *

Back to top button
Close
Close