ಮಾನವಿ

ಹಿರೆಕೊಟ್ನೆಕಲ್ ಪಂಚಾಯತಿ 24/7 ಬಂದ್; ಕೆಲಸಕ್ಕೆ ಬಾರದ ಸಿಬ್ಬಂಧಿಗಳು

ಮಾನ್ವಿ ಜೂ.19 : ಮಾನ್ವಿ ಪಟ್ಟಣಕ್ಕೆ ಸಮೀಪವಿರುವ ಹಿರೆಕೊಟ್ನೆಕಲ್ ಪಂಚಾಯತಿ ಕೇವಲ ನಾಮಕೆವಾಸ್ತೆ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿಗಳು ಕೇವಲ ಬೆಳಗ್ಗೆ ಧ್ವಜರೋಹಣ ಮಾಡಲು ಮತ್ತು ಸಾಯಂಕಾಲ ಇಳಿಸಲು ಮಾತ್ರ ಬರುತ್ತಿದ್ದಾರೆ ಎಂಬುದು ಗ್ರಾಮಸ್ತರ ಹೇಳಿಕೆಯಾಗಿದೆ.

ಈ ಕುರಿತು ಹಲವಾರು ಭಾರಿ ಸೂಕ್ತ ಕ್ರಮವಹಿಸುವಂತೆ ಮನವಿ ಮಾಡಿದ್ದರು ಪಂಚಾಯತಿಯ ಕೆಲಸಗಳೆಲ್ಲ ಪಂಚಾಯತಿಯಲ್ಲಿಯೆ ಮಾಡದೆ ಮಾನ್ವಿಯಲ್ಲಿ ಮಾಡುತ್ತಿದ್ದಾರೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ಪಂಚಾಯತಿಯ ಸಿಬ್ಬಂದಿಗಳನ್ನು ಹುಡಿಕಿಕೊಂಡು ಹೋಗಿ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಗ್ರಾಮಸ್ಥರ ಹೇಳಿಕೆ.

ಈ ಕುರಿತು ಹಿರೆಕೊಟ್ನೆಕಲ್ ಪಿಡಿಓ ರಂಗನಾಥ ಅವರನ್ನು ವಿಷಯ ತಿಳಿಸಿದಾಗ ಮಾತ್ರ ಕೆಲಸಗಳು ಇಲ್ಲಿ ನಡೆಯುತ್ತವೆ ವಿನಃ ಬಾಕಿ ಎಲ್ಲಾ ದಿನಗಳಲ್ಲಿ ಇಲ್ಲಿ ಯಾವುದೇ ಕೆಲಸ ಕಾರ್ಯ ನಡೆಯುವುದಿಲ್ಲ, ಇಲ್ಲಿನ ಪಂಚಾಯತಿಯ ಆಪರೇಟರಗಳಾದ ಗೋವಿಂದರಾಜ್,ನಾಗನಗೌಡ ಪಂಚಾಯತಿಯ ಯಾವುದೇ ಕೆಲಸ ನಿರ್ವಹಿಸುವುದಿಲ್ಲ ಎಂಬುದು ಗ್ರಾಮಸ್ಥರಾದ ಮಹಮ್ಮದ್ ಪಾಷ, ವೀರೇಶ ನಾಯಕ, ಹನುಮೇಶ ನಾಯಕ,ಬಸವರಾಜ ನಾಯಕ, ಮಹೇಶ ಚಲವಾದಿ,ಅಯ್ಯಪ್ಪ ಚಲವಾದಿ,ಈರಣ್ಣ ಚಲವಾದಿ ಇವರ ಹೇಳಿಕರಯಾಗಿದೆ.

ತಕ್ಷಣ ನಿರ್ಲಕ್ಷವಹಿಸುತ್ತಿರುವ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಸರ್ಕಾರದ ಸೌಲಭ್ಯಗಳ ಕೆಲಸ ಕಾರ್ಯಗಳನ್ನು ಪಂಚಾಯತಿಯಲ್ಲಿಯೆ ಜರುಗುವಂತೆ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಒಂದು ವೇಳೆ ನಿರ್ಲಕ್ಷ್ಯವಹಿಸಿದಲ್ಲಿ ಪಂಚಾಯತಿ ಮುಂಭಾಗ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close