ರಾಯಚೂರು ಜಿಲ್ಲೆ ಸುದ್ದಿಸಿರವಾರ

ಸಿರವಾರ: ಸಕಲ ಸಿದ್ದತೆಗಳೊಂದಿಗೆ ದ್ವಿತೀಯ ಪಿಯು ಇಂಗ್ಲೀಷ್ ಪರೀಕ್ಷೆ

ವರದಿ:ಸಿರಾಜುದ್ದೀನ್ ಬಂಗಾರ್ ಸಂಪಾದಕರು, ಕರ್ನಾಟಕ ಜ್ವಾಲೆ

ಸಿರವಾರ: ಲಾಕ್‌ಡೌನ್‌ ಜಾರಿಯಿಂದ ಬಾಕಿ ಉಳಿದುಕೊಂಡಿದ್ದ ದ್ವಿತೀಯ ಪಿಯು ಇಂಗ್ಲಿಷ್‌ ವಿಷಯದ ಪರೀಕ್ಷೆ ನಡೆಸಲು ಇಂದು ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳೊಂದಿಗೆ ಇಂದು ಪಿಯುಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಇಂದು ಸಿರವಾರ ಪಟ್ಟಣದಲ್ಲಿ ಒಟ್ಟು 580 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು ಈ ಪೈಕಿ ಒಟ್ಟು 545 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಮತ್ತು ಉಳಿದ 35 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಪರೀಕ್ಷೆ ಮುಖ್ಯಾಧಿಕಾರಿಗಳಾದ ಶ್ರೀ ನರಸಪ್ಪ ಭಂಡಾರಿ ತಿಳಿಸಿದರು.

ಪ್ರತೇಕವಾಗಿ ವಿದ್ಯಾರ್ಥಿಗಳನ್ನು ಒಬ್ಬೊಬ್ಬರಂತೆ ಆಸನಗಳ ವ್ಯವಸ್ಥೆ

ಸಿರವಾರ ಬಾಲಕರ ಪ್ರೌಢ ಶಾಲೆ ಮತ್ತು ಸರ್ಕಾರಿ ಪಿಯು ಕಾಲೇಜಿನಲ್ಲಿ ಒಟ್ಟು 450 ವಿದ್ಯಾರ್ಥಿಗಳು ಮತ್ತು ಸಿರವಾರ ಪಟ್ಟಣದ ಶ್ರೀ ಅಮರೇಗೌಡ ಬಯ್ಯಾಪೂರ ಕಾಲೇಜಿನಲ್ಲಿ ಒಟ್ಟು 130 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಒಳ ಪ್ರವೇಶಕ್ಕೆ ಮುನ್ನ ಸ್ಯಾನಿಟೈಜರ್ ಮತ್ತು ತರ್ಮಲ್ ಸ್ಕ್ಯಾನಿಂಗ್

ಪರೀಕ್ಷೆ ಪ್ರಾರಂಭಕ್ಕೂ ಮುನ್ನ ಸಾಂಕ್ರಮಿಕ ಕೊರೋನ ಮುನ್ನಚ್ಚರಿಕ ಕ್ರಮವಾಗಿ ವಿದ್ಯಾರ್ಥಿಗಳ ಒಳ ಪ್ರವೇಶಕ್ಕೆ ಮುನ್ನ ಸ್ಯಾನಿಟೈಜರ್ ಮತ್ತು ತರ್ಮಲ್ ಸ್ಕ್ಯಾನಿಂಗ್, ಕಡ್ಡಾಯ ಮಾಸ್ಕ್ ಮೂಲಕ ವಿದ್ಯಾರ್ಥಿಗಳಿಗೆ ಒಳ ಪ್ರವೇಶ ನೀಡಲಾಯಿತು. ವಿದ್ಯಾರ್ಥಿಗಳು ಸಹ ಸರಕಾರದ ನಿಯಮಾವಳಿಗೆ ಅನುಸಾರವಾಗಿ ಮಾಸ್ಕಗಳನ್ನು ಧರಿಸಿ ಬಂದಿದ್ದರು, ಮತ್ತು ಪ್ರತಿ ಪರೀಕ್ಷೆ ಕೊಠಡಿಯ ಒಳಭಾಗದಲ್ಲಿ ಒಬ್ಬೊಬ್ಬ ವಿದ್ಯಾರ್ಥಿಗಳಿಗೆ ಪ್ರತೇಕವಾಗಿ ಕುಳಿತುಕೊಳ್ಳುವಂತೆ ಆಸನಗಳನ್ನು ಸಿದ್ದಪಡಿಸಲಾಗಿತ್ತು.

ಒಟ್ಟಾರೆ ಲಾಕಡೌನ ನಡುವೆ ಸಿಕ್ಕಿಕೊಂಡಿದ್ದ ದ್ವೀತಿಯ ಪಿಯು ಆಂಗ್ಲ ಪರೀಕ್ಷೆ ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.

Continue

Related Articles

Leave a Reply

Your email address will not be published. Required fields are marked *

Back to top button
Close
Close