ರಾಯಚೂರು ಜಿಲ್ಲೆ ಸುದ್ದಿ

ರಾಯಚೂರಿನಿಂದ‌ ಮಂತ್ರಾಲಯಕ್ಕೆ ಬಸ್ ಸಂಚಾರ; ಕೊರೋನಾ ಭೀತಿಯಿಂದ ಪ್ರಯಾಣಿಸದ ಜನರು

ವರದಿ: ಸಿರಾಜುದ್ದೀನ್ ಬಂಗಾರ್

ರಾಯಚೂರು(ಜೂ.17): ಸುದೀರ್ಘ ಮೂರು ತಿಂಗಳ ನಂತರ ಆಂಧ್ರಪ್ರದೇಶದ ಮಂತ್ರಾಲಯಕ್ಕೆ ಇಂದು ಪ್ರಾಯೋಗಿಕವಾಗಿ ಎರಡು ಬಸ್ ಸಂಚಾರ ಆರಂಭಿಸಲಾಗಿದೆ. ಆದರೆ ಬಸ್ ಪ್ರಯಾಣಕ್ಕೆ ಜನರು ನಿರಾಸಕ್ತಿ ವಹಿಸಿದ್ದು ಕಂಡು ಬಂದಿತು.

ಕೋವಿಡ್ -19 ಲಾಕ್ ಡೌನ್ ಹಿನ್ನಲೆ ಮಂತ್ರಾಲಯಕ್ಕೆ ಸಾರಿಗೆ ಬಸ್ ಸಂಚಾರ ನಿಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಿ  ಅಂತರರಾಜ್ಯ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಮೂರು ತಿಂಗಳ ನಂತರ ರಾಯರ ಸನ್ನಿಧಾನಕ್ಕೆ ಬಸ್ ಸಂಚಾರ ಆರಂಭವಾಗಿವೆ. ಸೇವಾ ಸಿಂಧುವಿನಲ್ಲಿ ಅಪ್ಲೈ ಮಾಡಿದೋರಿಗಷ್ಟೇ ಅವಕಾಶ ಬಸ್ ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ.

ಬಸ್ ಸಂಚಾರ ಪ್ರಾರಂಭವಾಗಿದ್ದರೂ ಸಹ ಕೊರೋನಾ ಹರಡುವ ಭೀತಿಯಿಂದ ಪ್ರಯಾಣಿಕರು ಆಗಮಿಸುತ್ತಿಲ್ಲ. ಅಂತರಾಜ್ಯ ಪ್ರಯಾಣ ಆಗಿರುವುದರಿಂದ ಕ್ವಾರಂಟೈನ್ ಭಯಕ್ಕೆ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆಂಧ್ರಪ್ರದೇಶಕ್ಕೆ ಹೋಗಿ ಬರುವವರಿಗೆ 3 ದಿನ ಸಾಂಸ್ಥಿಕ  ಕ್ವಾರಂಟೈನ್, 11 ದಿನ ಹೋಂ‌ ಕ್ವಾರಂಟೈನ್​​​ಗೆ ಒಳಗಾಗಬೇಕು.  ಈ ಹಿನ್ನಲೆ ಅಂತರಾಜ್ಯ ಪ್ರಯಾಣಕ್ಕೆ ಜನರು ಹಿಂಜರಿಯುತ್ತಿದ್ದಾರೆ.

ಇಂದು ಮುಂಜಾನೆ 8 ಗಂಟೆಗೆ ಆರಂಭವಾದ ಬಸ್ ನಲ್ಲಿ ಮಂತ್ರಾಲಯಕ್ಕೆ ಹೋಗಲು ನಿರಾಸಕ್ತಿ ವಹಿಸಿದ್ದಾರೆ. ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠವು ಸಹ ಆರಂಭವಾಗದ ಹಿನ್ನೆಲೆ ಭಕ್ತರು ಹೋಗುತ್ತಿಲ್ಲ. ಚೆಕ್ ಪೋಸ್ಟ್ ಗಳಲ್ಲೇ ನೋಡಲ್ ಸಿಬ್ಬಂದಿಗಳನ್ನ ನೇಮಿಸಿರುವ ರಾಯಚೂರು ಜಿಲ್ಲಾಡಳಿತ ಅಂತರ್ ರಾಜ್ಯ ಪ್ರಯಾಣಿಕರ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ. ನೆಗೆಡಿ, ಕೆಮ್ಮು, ಜ್ವರ ಕಂಡು ಬಂದರೆ ಅಂತಹ ಪ್ರಯಾಣಿಕರನ್ನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಸ್ವ್ಯಾಬ್ ಪರೀಕ್ಷೆ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close