ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್; ಇಂದಿನಿಂದ ರಾಜ್ಯ ಪ್ರವಾಸ ರದ್ದು; ಆನ್​​ಲೈನ್​​​ ಮೂಲಕವೇ ಕಾಮಗಾರಿಗಳಿಗೆ ಚಾಲನೆ ನೀಡಲಿರುವ ಸಿಎಂ

Posted By: Sirajuddin Bangar

Source: NS18

ಬೆಂಗಳೂರು(ಜೂ.15): ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್​​ ಆರ್ಭಟ ಹೆಚ್ಚಾಗುತ್ತಿದ್ದಂತೆಯೇ ಸಿಎಂ ಬಿ.ಎಸ್​​ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಬಿಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಬೇಕಿತ್ತು. ಆದರೀಗ, ಕೊರೋನಾ ವೈರಸ್​ ಭೀತಿಯಿಂದಾಗಿ ಬೆಂಗಳೂರಿನಿಂದಲೇ ಆನ್​​ಲೈನ್​​ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.

ಇಂದು ಬಿ.ಎಸ್​ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಕಾಮರಿಗಳಿಗೆ ಚಾಲನೆ ನೀಡುವ ಸಲುವಾಗಿ ಹೋಗಬೇಕಿತ್ತು. ಆದರೀಗ, ಕೊರೋನಾ ವೈರಸ್​ ಕಾರಣದಿಂದ ತನ್ನ ಬೆಂಗಳೂರಿನ ಕಚೇರಿಯಲ್ಲೇ ಕುಳಿತು ಆನ್​ಲೈನ್​ ಮೂಲಕ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಆನ್​ಲೈನ್​​​ ಮೂಲಕ ಭೂಮಿ‌ ಪೂಜೆ ನೆರವೇರಿಸಲಿದ್ಧಾರೆ.

ಬೆಳಿಗ್ಗೆ 11 ಗಂಟೆಯಿಂದಲೇ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್​ ಯಡಿಯೂರಪ್ಪ ಪೂಜೆ ನೆರವೇರಿಸಲಿದ್ದಾರೆ.  ಕೊರೋನಾ ಸಮಸ್ಯೆ ಇಲ್ಲದಿದ್ದರೇ ಸ್ಥಳಕ್ಕೆ ಹೋಗಿ ಕಾಮಗಾರಿಗೆ ಚಾಲನೆ ನೀಡಬಹುದಿತ್ತು. ಸದ್ಯ ಕೋವಿಡ್​​-19 ತೀವ್ರಗೊಂಡ ಕಾರಣ ಹೀಗೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನು, ಶಿವಮೊಗ್ಗಂದತೆಯೇ ಹಲವು ಜಿಲ್ಲೆಗಳಿಗೆ ಯಡಿಯೂರಪ್ಪ ಪ್ರವಾಸ ಮಾಡಬೇಕಿತ್ತು. ಇದೀಗ ರಾಜ್ಯ ಪ್ರವಾಸ ರದ್ದು ಮಾಡಿರುವ ಯಡಿಯೂರಪ್ಪ ಇಂದಿನಿಂದ ತನ್ನ ಕಚೇರಿಯಲ್ಲೇ ಕೂತು ಬೇರೆ ಜಿಲ್ಲೆಗಳ ವಿವಿಧ ಕಾಮಗಾರಿಗಳಿಗೆ ಆನ್​​ಲೈನ್​​ ಮೂಲಕ ಚಾಲನೆ ನೀಡಲಿದ್ಧಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close