ಸಿರವಾರ

ಸಿರವಾರ; ಮೋದಿ ಸಾಧನೆ ಮನೆ ಮನೆಗೂ ತಲುಪಿಸಿ…

ವರದಿ: ಸಿರಾಜುದ್ದೀನ್ ಬಂಗಾರ

ಸಿರವಾರ; ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶದ ಜನರಿಗೆ ಬರೆದಿರುವ “ನೀವು ಪ್ರೇರಕರು ನಾನು ಸೇವಕ” ಎಂಬ ಪತ್ರದ ಸಾರಾಂಶ ಹಾಗೂ ಒಂದು ವರ್ಷದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಮಾನ್ವಿ ತಾಲೂಕ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಮಲ್ಲಿಕಾರ್ಜುನ ಜಕ್ಕಲದಿನ್ನಿ ಅವರು ಕೋವಿಡ್ 19ನಿಂದ ದೇಶ ಸಂಕಷ್ಟದಲ್ಲಿದ್ದರೂ ಆರ್ಥಿಕವಾಗಿ ಮೇಲೆತ್ತುವಲ್ಲಿ ಸರಕಾರದ ಕಾರ್ಯ ವಿಶೇಷವಾದದ್ದು. ಲಾಕ್ ಡೌನ್ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀ ಕರೆಗೆ ಭಾರತೀಯರು ಸ್ಪಂದಿಸಿದ ರೀತಿ ಜನರಿಗೆ ಸರಕಾರದ ಮೇಲಿರುವ ನಂಬಿಕೆಯ ಪ್ರತೀಕವಾಗಿದೆ. ಕಳೆದ ಒಂದು ವರ್ಷದ ಸಾಧನೆಯ ಕುರಿತು ಹಾಗೂ ದೇಶದ ಜನರಿಗೆ ಪ್ರಧಾನಮಂತ್ರಿಗಳು ಬರೆದಿರುವ ಪತ್ರದ ಸಾರಾಂಶವನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಂತರ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ನರಸಿಂಹರಾವ್ ಕುಲಕರ್ಣಿ ಅವರು ಭಾರತ, ಸ್ವಾವಲಂಬಿ, ಸದೃಢ, ಸಶಕ್ತ ದೇಶವಾಗಿ ಭಾರತ ಹೊರಹೊಮ್ಮಲಿದೆ. ಆರ್ಟಿಕಲ್‌ 370 ರದ್ದತಿ, ಪೌರತ್ವ ತಿದ್ದು ಪಡಿ ವಿಧೇಯಕ 2019, ರಾಮಮಂದಿರ ನಿರ್ಮಾಣಕ್ಕೆ ತೊಡಕು ನಿವಾರಣೆ,  ತ್ರಿವಳಿ ತಲಾಖ್‌ನಿಂದ ಮುಕ್ತಿ, ಆಯುಷಾನ್‌ ಭಾರತ ಯೋಜನೆಯಡಿ 1 ಕೋಟಿಗೂ ಹೆಚ್ಚು ಫ‌ಲಾನುಭವಿಗಳು, ಕಿಸಾನ್‌ ಸಮ್ಮಾನ್‌ ನಿಧಿ, ಕೋವಿಡ್‌-19 ಸಂಕಷ್ಟ ನಿರ್ವಹಣೆಗೆ ಮಹತ್ತರ ನಿರ್ಧಾರಗಳು ಭಾರತವನ್ನು ಸಶಕ್ತಗೊಳಿಸುತ್ತಿದೆ  ಎಂದರು.

ನಂತರ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಜೆ.ಶರಣಪ್ಪ ಗೌಡ ಮಾತನಾಡಿ ಸ್ವಚ್ಛ ಭಾರತ್ ಅಭಿಯಾನ್, ಬೇಟಿ ಪಡಾವೋ, ಬೇಟಿ ಬಚಾವೋ ಕಾರ್ಯಕ್ರಮ, ಜನ್ ಧನ್ ಯೋಜನೆ ಮೊದಲ ಅವಧಿಯಲ್ಲಿನ ಜನಪ್ರಿಯ ಯೋಜನೆಯಾಗಿದ್ದವು. ಬಿಜೆಪಿ ಸರಕಾರವು ಇಬ್ಬರೂ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ರಾಜ್ಯಸಭೆಗೆ ಕಳುಹಿಸಿದ ಕೀರ್ತಿ ಬಿಜೆಪಿ ಪಕ್ಷದ್ದಾಗಿದೆ.

ಈ ಸಂದರ್ಭದಲ್ಲಿ ವಿರೇಶ ಬೆಟ್ಟದೂರು, ರಮೇಶ ಚಿಂಚರಕಿ, ಎಂ. ನಾಗರಾಜಗೌಡ, ಪ.ಪಂ. ಸದಸ್ಯರಾದ ಕೃಷ್ಣ ನಾಯಕ, ಮಲ್ಲಪ್ಪ ಕಜ್ಜಿ, ಚನ್ನೂರು ಚನ್ನಪ್ಪ ನಾಯಕ, ರಾಯಚೂರು ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕೃಷ್ಣಾ ರೆಡ್ಡಿ, ರಾಯಚೂರು ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಮಿಥುನ್ ಚ್ಯಾಗಿ, ತಾಯಣ್ಣ ನೀಲಗಲ್, ಬಸನಗೌಡ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close