ಸಿರವಾರ

ಸಿರವಾರ; ನೂತನ ಸರಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಶಂಕು ಸ್ಥಾಪನೆ ಶಾಸಕ – ಆರ್ ವಿ ಎನ್

ವರದಿ: ಸಿರಾಜುದ್ದೀನ್ ಬಂಗಾರ್

ಸಿರವಾರ; ನೂತನ ಸರಕಾರಿ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕೆ 4 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ, ಎಂದು ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದ ಹೊರವಲಯದ ಲಿಂಗಸಗೂರು ರಸ್ತೆಯ ಪಕ್ಕದಲ್ಲಿ ಪದವಿ ಕಾಲೇಜು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು, ನಂತರ ಮಾತನಾಡಿದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಈಗ 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ನಂತರ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ಅನುದಾನವನ್ನು ಕಾಲೇಜು ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಲಿದೆ.

ನಂತರ ಮಾತನಾಡಿದ ಜೆಡಿಎಸ್ ಯುವ ಮುಖಂಡರಾದ ರಾಜಾರಾಮಚಂದ್ರ ನಾಯಕ ಅವರು ಸಿರವಾರ ಪಟ್ಟಣದ ಸುತ್ತಮುತ್ತಲಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ  ಬಹುದಿನಗಳ ಬೇಡಿಕೆಯ ಪದವಿ ಕಾಲೇಜಿಗೆ ಭುನಾದಿ ಹಾಕಲಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇದಿಂದ ಸಕಲ ವ್ಯವಸ್ಥೆಯನ್ನು ಒಳಗೊಂಡಿರುವ ಮಾದರಿ ಕಾಲೇಜು ಇದಾಗಲಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೇಲ ಬಲ್ಲಟಿಗಿ, ಜೆಡಿಎಸ್ ಹಿರಿಯ ಮುಂ ಜಿ ಲೋಕರೆಡ್ಡಿ ಸಿರವಾರ, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಷೀ , ಸರಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯರಾದ ಪಾಂಡು,ಸಿರವಾರ ಪಟ್ಟಣ ಜೆಡಿಎಸ್ ಅಧ್ಯಕ್ಷ ನಾಗರಾಜ್ ಗೌಡ ಡಿಎನ್ ವೈ, ಈಶಪ್ಪ ಹೂಗಾರ್, ಎಂ. ಪ್ರಕಾಶಪ್ಪ, ಪ.ಪಂ ಸದ್ಯಸರಾದ ಇಮಾಮ ಸಿರವಾರ, ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close