ಕರ್ನಾಟಕ ಸುದ್ದಿ

ಮುಡಿ ಹೆಸರಿನಲ್ಲಿ ಭಕ್ತರಿಗೆ ಹಾಡಹಗಲೇ ಪಂಗನಾಮ

–ಸಿರಾಜುದ್ದೀನ್ ಬಂಗಾರ್, ಸಂಪಾದಕರು

ಕೊರೋನಾ ಲಾಕ್​​ಡೌನ್ ಸಡಿಲಿಕೆ ನಂತರ ದೇಗುಲಗಳು ತೆರೆದಿದ್ದು, ಕೇವಲ ದೇವರ ದರ್ಶನಕ್ಕೆ ಮಾತ್ರ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಪಷ್ಟವಾಗಿ ದೇಗುಲದಲ್ಲಿ ಮುಡಿಕೊಡುವುದು, ಇತರೆ ಎಲ್ಲಾ ಸೇವೆಗಳಿಗೆ ಮುಜರಾಯಿ ಇಲಾಖೆ ನಿಷೇಧ ಹೇರಲಾಗಿದೆ. ಹೀಗಿದ್ದರೂ ಭಕ್ತರು ಮಾತ್ರ ಕೊರೋನಾ ವೇಳೆಯಲ್ಲು ಮುಡಿ ಕೊಡಲು ಮುಂದಾಗಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಪ್ರಸಿದ್ಧ ಚಿಕ್ಕತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಶನಿವಾರ ಪ್ರಯುಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಆದರೆ, ದೇಗುಲ ಪ್ರಾಂಗಣದ ಹೊರಗಿನ ರಸ್ತೆ, ಸಂದಿ ಗೊಂದಿ, ತೋಟದಲ್ಲಿ ಅಕ್ರಮವಾಗಿ ಮುಡಿ ಕೊಡೋ ಕೆಲಸ ಆರಂಭವಾಗಿದೆ. ನ್ಯೂಸ್-18  ಕನ್ನಡ ರಹಸ್ಯ ಕಾರ್ಯಾಚರಣೆಯಲ್ಲಿ ಇದು ಬೆಳಕಿಗೆ ಬಂದಿದೆ.

ಒಬ್ಬೊಬ್ಬರಿಹೆ ಮುಡಿ ಕೊಡಲು 200, 300, 500 ರೂಪಾಯಿಗಳನ್ನು ಖಾಸಗಿ ಕ್ಷೌರಿಕರು ತೆಗೆದುಕೊಳ್ತಿದ್ದಾರೆ. ದೇವರ ದರ್ಶನಕ್ಕು ಮುನ್ನ ತಮ್ಮ ಮಕ್ಕಳ ಹರಕೆಯನ್ನ ತೀರಿಸಲು, ದೇಗುಲ ಹೊರಗೆ ಮುಡಿ ಕೊಡಲು ಭಕ್ತರು ಹರಸಾಹಸ ಪಡುತ್ತಿದ್ದಾರೆ. ಇದಕ್ಕಾಗಿ ಮಕ್ಕಳನ್ನ ಹೊತ್ತು ತಂದು ಪೋಷಕರು ಮುಡಿ ಸಮರ್ಪಣೆ ಮಾಡುತ್ತಿದ್ದಾರೆ.

ಇತ್ತ  ಭಕ್ತರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಕ್ಷೌರಿಕರು ಹಗಲು ದರೋಡೆ ಮಾಡುತ್ತಿದ್ಧಾರೆ. ಮುಡಿಕೊಟ್ಟ ನಂತರ ಸ್ನಾನ ಮಾಡಲು ಸ್ಥಳೀಯರಿಂದಲೇ 30 ರೂ. ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಗಲು ಲೂಟಿಯನ್ನ ತಡೆಯಲು ಚಿಕ್ಕತಿರುಪತಿ ಪಂಚಾಯಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಆರೋಪಗಳು ಕೇಳಿಬಂದಿದೆ.

ಮುಜರಾಯಿ ಇಲಾಖೆ ಆದೇಶದಂತೆ ದೇಗುಲದಲ್ಲಿ ಮುಡಿ ಕೊಡುವುದು ನಿಷೇಧ ಮಾಡಿರುವ ಮಾಹಿತಿ ಎಲ್ಲರಿಗೂ ತಿಳಿದಿದೆ. ಆದರೂ, ಸಣ್ಣಪುಟ್ಟ ಮಕ್ಕಳನ್ನ ತಂದು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಪೋಷಕರು ಖಾಸಗಿ ಕ್ಷೌರಿಕರ ಬಳಿ ಮುಡಿ ಕೊಡಿಸುವ ಮೂಲಕ ಬೇಜವಬ್ದಾರಿ ಪ್ರದರ್ಶನ ಮಾಡಿದ್ದಾರೆ.

ಪ್ರಸಿದ್ದ ಕ್ಷೇತ್ರವಾದ್ದರಿಂದ ಬೆಂಗಳೂರು, ತಮಿಳುನಾಡು, ಆ‌ಂಧ್ರದಿಂದಲೂ ಭಕ್ತರು ಆಗಮಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಎಲ್ಲೆಂದರಲ್ಲಿ ಮುಡಿ ತೆಗೆಯುವ ಕಾರ್ಯಸಲ್ಲಿ ತೊಡಗಿದ್ದಾರೆ. ಇದಕ್ಕು ಮೊದಲು ದೇಗುಲ ಆವರಣದಲ್ಲಿ ಮುಡಿ ಕೊಡುವ ಕಾರ್ಯ ನಡೆದಿತ್ತು. ಆದರೆ ದೇಗುಲ ಅಧಿಕಾರಿಗಳು ಇದಕ್ಕೆ ಆಸ್ಪದ ಕೊಡದ ಹಿನ್ನಲೆಯಲ್ಲಿ ಇದೀಗ ದೇಗುಲ ಆವರಣದ ಹೊರಗೆ ತಮ್ಮ ಕೆಲಸ ನಡೆಸುತ್ತಿದ್ದಾರೆ.

ಹೀಗೆ ಸುರಕ್ಷತಾ ಕ್ರಮ ಕೈಗೊಳ್ಳದೆ ಕ್ಷೌರಿಕ ಕೆಲಸ ಮಾಡುತ್ತಿರುವರ ವಿರುದ್ದ ಚಿಕ್ಕ ತಿರುಪತಿ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಜಾಣಕುರುಡು ಪ್ರದರ್ಶನ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ದೇಗುಲ ಆಡಳಿತ ಮಂಡಳಿ ಅಧ್ಯಕ್ಷ್ಯ ನಂದನ್ ವಿ ಗೌಡ, ಭಕ್ತರ ಹರಕೆಯನ್ನ ಬಂಡವಾಳ ಮಾಡಿಕೊಂಡು ಕೆಲವರು ವಂಚನೆ ಮಾಡುತ್ತಿದ್ದಾರೆ. ಹೀಗೆ ಯಾರು ವಂಚನೆ ಮಾಡಬಾರದು. ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ

Continue

Related Articles

Leave a Reply

Your email address will not be published. Required fields are marked *

Back to top button
Close
Close