ಕರ್ನಾಟಕ ಸುದ್ದಿ

ನರೇಗಾ ಕೂಲಿ ಕೆಲಸ ಮಾಡುತ್ತಿರುವ ಎಂ.ಎಸ್ಸಿ ವಿದ್ಯಾರ್ಥಿನಿ; ಯುವತಿಯ ಕಾರ್ಯಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಮೆಚ್ಚುಗೆ

Posted by: Sirajuddin Bangar

Source: NS18

ಬೆಂಗಳೂರು(ಏ.14): ಕೊರೋನಾ ಸಂಕಷ್ಟದಲ್ಲಿ ತಂದೆ ತಾಯಿಗೆ ನೆರವಾಗಲು ಎಂ.ಎಸ್ಸಿ, ಪದವಿ ವಿದ್ಯಾರ್ಥಿನಿ ಚಿತ್ರದುರ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿನಿ ಕೂಲಿ ಕೆಸದ ವಿಷಯ ತಿಳಿದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಂಜಾನಾಪುರ ಗ್ರಾಮದ ಚಂದ್ರಶೇಖರಪ್ಪ ಹಾಗೂ ಶಕುಂತಲಮ್ಮ ದಂಪತಿಗಳ ಪುತ್ರಿ ದೀಪಾಶ್ರೀ ದಾವಣಗೆರೆ ವಿಶ್ವವಿದ್ಯಾಲಯದ ದ್ವಿತೀಯ ಬಿಎಸ್ಸಿ ಓದುತ್ತಿದ್ದು, ಕೋರೋನಾ ಇರುವ ಕಾರಣಕ್ಕೆ ಲಾಕ್​ಡೌನ್ ಸಮಯದಲ್ಲಿ ಸ್ವಗ್ರಾಮಕ್ಕೆ ಬಂದಿದ್ದಾರೆ.

ಈ ವೇಳೆ ಚಿತ್ರದುರ್ಗ ಜಿಲ್ಲೆ ಅಂತರ್ಜಲ ಹೆಚ್ಚಿಸುವ ನಿಟ್ಡಿನಲ್ಲಿ ಜಿಲ್ಲಾ ಪಂಚಾಯ್ತ್ NREGA ಮೂಲಕ ಜನರಿಗೆ ಕೆಲಸ ಕೊಡುತ್ತಿದೆ. ಇದರಿಂದ ಜನರು ಅವರವರ ಜಮೀನಿನಲ್ಲಿ  ಬದು ನಿರ್ಮಾಣ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಅಂಜನಾಪುರ ಗ್ರಾಮದ ದೀಪಾಶ್ರೀ ತಂದೆ ತಾಯಿಗಳಿಗೆ ಆಶ್ರಯವಾಗಲು ಕಳೆದ ಒಂದು ವಾರದಿಂದ  NREGA ಕೂಲಿ ಕೆಲಸ ಮಾಡುತ್ತಿದ್ದಾರೆ.

ಇನ್ನು, ನಿನ್ನೆ ಗ್ರಾಮೀಣಾಭಿವೃದ್ಧಿ ಸಚಿವ  ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿ ಕಾಮಗಾರಿಗಳ ವೀಕ್ಷಣೆ ಮಾಡಿದರು. ಈ ವೇಳೆ ಎಂಎಸ್ಸಿ ವಿದ್ಯಾರ್ಥಿನಿ NREGA ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು, ವಿದ್ಯಾರ್ಥಿನಿ ದೀಪಾಶ್ರೀ ಜೊತೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆ ವಿದ್ಯಾರ್ಥಿನಿಯ ವಿದ್ಯಾಭ್ಯಾಸ ಮುಗಿದ ಬಳಿಕ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.

ಆದರೆ ದೇಶಕ್ಕೆ  ಕೊರೋನಾ ವೈರಸ್ ಸೃಷ್ಟಿಸಿರುವ ಸಂಕಷ್ಟದಲ್ಲಿ ಕೂಲಿ ಮಾಡಿ ತಂದೆ ತಾಯಿಗಳಿಗೆ ನೆರವಾಗುತ್ತಿದ್ದು, ವಿದ್ಯಾಭ್ಯಾಸ ಮುಗಿಸಿ ನಿರುದ್ಯೋಗಿಗಳಾಗಿರುವ ಯುವ ಸಮೂಹಕ್ಕೆ ಈಕೆ ಮಾದರಿಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ ದೀಪಾಶ್ರೀ ನಾನು ದಾವಣಗೆರೆ ವಿಶ್ವ ವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಓದುತ್ತಿದ್ದೇನೆ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಊರಿಗೆ ಬಂದಾಗ ಊರಲ್ಲಿ ಎಲ್ಲರೂ NREGA ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅದರಿಂದ ಅವರಿಗೆ ಸಹಾಯ ಆಗುತ್ತಿತ್ತು. ಹಾಗೆಯೇ ನಮ್ಮ ತಂದೆ ತಾಯಿಯೂ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಅವರಿಗೆ ಸಹಾಯ ಆಗುವ ಉದ್ದೇಶದಿಂದ ನಾನೂ ಕೂಡಾ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದಿದ್ದಾರೆ.

ಇನ್ನು, ಈ ವಿದ್ಯಾರ್ಥಿನಿ  ಕೂಲಿ ಕೆಲಸ ಮಾಡುತ್ತಿರುವುದನ್ನ ಮೊದಲೇ ವೀಕ್ಷಿಸಿದ್ದ ಚಿತ್ರದುರ್ಗ ಜಿಲ್ಲಾ ಪಂಚಾಯ್ತ್ ಸಿಇಒ ಯೋಗೀಶ್, ಈ ಯುವತಿಯ ಕೂಲಿ ಕಾಯಕದ ವಿಷಯವನ್ನ ಸಚಿವ ಈಶ್ವರಪ್ಪ ಅವರಿಗೆ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸುವಂತೆ ಮಾಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close