ಕರ್ನಾಟಕ ಸುದ್ದಿ

10ನೇ ತರಗತಿ ಪರೀಕ್ಷೆ ಬರೆಯಬೇಕಾದವಳು ಹುಡುಗನೊಂದಿಗೆ ಪರಾರಿ; ಮಗಳಿಗಾಗಿ ಪೋಷಕರ ಗೋಳಾಟ

ಸಂಪಾದಕೀಯ ; ಸಿರಾಜುದ್ದೀನ್ ಬಂಗಾರ್ ಸಿರವಾರ

ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯೋದು ಬಿಟ್ಟು 16ನೇ ವಯಸ್ಸಿಗೆ ಪ್ರಿಯಕರನೊಂದಿಗೆ ಹೋದ ಮಗಳನ್ನು ಅಪ್ಪ, ಅವನ ಜೊತೆಯೇ ಮದುವೆ ಮಾಡುತ್ತೇನೆ, ಮೊದಲು ಪರೀಕ್ಷೆ ಬರೆಯಮ್ಮ ಅಂತ ಬೇಡಿಕೊಳ್ಳುತ್ತಿದ್ದಾರೆ. ಇದು ಶಿಕ್ಷಣದ ಮಹತ್ವ ಅರಿತಿರುವ ಮಲೆನಾಡ ಅಪ್ಪನ ಕಥೆ. ಕಣ್ಣೀರಿನ ವ್ಯಥೆ.

ಮಗಳೇ…. ಎಲ್ಲಿದ್ದೀಯಮ್ಮ…. ಎಲ್ಲೇ ಇದ್ದರೂ ಬಾರಮ್ಮ…. ಮೊದಲು ಎಸ್​ಎಸ್​ಎಲ್​ಸಿ  ಪರೀಕ್ಷೆ ಮುಗಿಸಿ, ಓದು ಮುಂದುವರೆಸು. ನಿನಗೆ 18 ತುಂಬುತ್ತಿದ್ದಂತೆ ನೀನಿಷ್ಟ ಪಟ್ಟ ಹುಡುಗನೊಂದಿಗೆ ನಿನ್ನ ಮದುವೆ ಮಾಡುತ್ತೇನೆ ಎಂದು ಚಿಕ್ಕಮಗಳೂರಿನ ಅಪ್ಪನೊಬ್ಬರು ತಾನೇ ಹೆತ್ತ ಮಗಳ ಬಳಿ ಬೇಡಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈತನ ಹೆಸರು ತಮಿಳ್ ಸೆಲ್ವ. ಮೂಲತಃ ತಮಿಳುನಾಡಿನವರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸದ ಟೀ ಎಸ್ಟೇಟ್​ನಲ್ಲಿ ಬದುಕು ಕಟ್ಟಿಕೊಂಡಿದ್ದರು.

10ನೇ ತರಗತಿ ಓದುತ್ತಿದ್ದ ಇವರ 16 ವರ್ಷದ ಮಗಳು ಏಪ್ರಿಲ್ 6ರಂದು ಕಾಣೆಯಾಗಿದ್ದಾಳೆ. ಕಾಣೆ ಅಂದರೆ ಆಕೆ ಎಲ್ಲಿಗೆ-ಯಾರ ಜೊತೆ ಹೋಗಿದ್ದಾಳೆಂದು ಅಪ್ಪನಿಗೂ ಗೊತ್ತಿದೆ. ಅಂದೇ  ಕಾಣೆಯಾಗಿರುವ ಬಗ್ಗೆ ದೂರನ್ನೂ ನೀಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಮತ್ತೆಲ್ಲೋ ಬದುಕು ಕಟ್ಟಿಕೊಂಡಿರೋ ಈತನಿಗೆ ಶಿಕ್ಷಣದ ಶಕ್ತಿಯ ಅರಿವಿದೆ. ಆದ್ದರಿಂದ ಇಂದು ತನ್ನ ಮಗಳಿಗೆ, ಎಲ್ಲೇ ಇದ್ದರೂ ಮನೆಗೆ ಬಾ. ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು, ಓದು ಮುಂದುವರೆಸು. ನಿನಗೆ 18 ವರ್ಷ ತುಂಬುತ್ತಿದ್ದಂತೆ ನಾನೇ ನೀನಿಷ್ಟ ಪಟ್ಟವನೊಂದಿಗೆ ಮದುವೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಏಕೆಂದರೆ, ಇವರು ತಮಿಳುನಾಡಿನವರಾದರೂ ಇವರದ್ದು ಬೆಂಗಳೂರಿನ ಗಾರ್ಮೆಂಟ್ಸ್​ನಲ್ಲಿ  ಟೈಲರ್ ಕೆಲಸ. ಇವರ ಹೆಂಡತಿ 400 ಕಿ.ಮೀ. ದೂರದ ಕಳಸದಲ್ಲಿ ಟೀ ಸೊಪ್ಪನ್ನ ಕೊಯ್ದು ಬದುಕುತ್ತಿದ್ದಾರೆ. ನಮ್ಮ ಮಕ್ಕಳು ಹೀಗಾಗೋದು ಬೇಡವೆಂದು ಅಪ್ಪನೇ ಮಗಳಿಗೆ ಕೈ ಮುಗಿದು ಬೇಡಿಕೊಳ್ತಿದ್ದಾರೆ.  ಮಗಳು ಹಾವೇರಿ ಮೂಲದ ಆಟೋ ಡ್ರೈವರ್ ಪ್ರೀತಿಯ ಬಲೆಯಲ್ಲಿ ಬಿದ್ದಾಗ ಬುದ್ಧಿ ಹೇಳಿದ್ದ ಅಪ್ಪ ಆಟೋ ಡ್ರೈವರ್ ಕೊಡಿಸಿದ್ದ ಮೊಬೈಲನ್ನು ಕಿತ್ತಿಟ್ಟಿದ್ದರು. ಆದರೂ ಮಗಳನ್ನು ತಡೆಯಲಾಗಲಿಲ್ಲ. ಆಕೆ ಏಪ್ರಿಲ್ 6ರಂದೇ ನಾಪತ್ತೆಯಾಗಿದ್ದಾಳೆಂದು ಕಳಸ ಠಾಣೆಯಲ್ಲಿ ದೂರು ನೀಡಿದ್ದರೂ ಉಪಯೋಗವಾಗಲಿಲ್ಲ. ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆಂಬ ವಿಷಯ ಕೇಳಿ ಸಂಬಂಧವನ್ನ ಕಳೆದುಕೊಳ್ಳೋ ಅಪ್ಪಂದಿರ ಮಧ್ಯೆ, ಆ ನೋವಿನಲ್ಲೂ ನನ್ನ ಮಗಳು ನನ್ನಂತೆ ಆಗೋದು ಬೇಡವೆಂದು ಮನೆಗೆ ಕರೆಯುತ್ತಿರುವ ಅಪ್ಪನ ನಡೆಗೆ ಹ್ಯಾಟ್ಸಾಫ್ ಹೇಳಲೇ ಬೇಕು.

Continue

Related Articles

Leave a Reply

Your email address will not be published. Required fields are marked *

Back to top button
Close
Close