ರಾಯಚೂರು ಜಿಲ್ಲೆ ಸುದ್ದಿ

ರಾಯಚೂರು: 8 ಜನ ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೋನ ಸೊಂಕು

ಕೊರೋನಾ ನಿಯಂತ್ರಿಸಲು ಹಗಲು ರಾತ್ರಿಯೆನ್ನದೇ ಹೋರಾಟ ಮಾಡುತ್ತಿರುವ ವಾರಿಯರ್ಸ್​ಗೆ ಸೋಂಕು ತಗುಲಿದೆ. ರಿಮ್ಸ್​ನ 8 ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿರುವುದು  ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಹೀಗಾಗಿ ಇವರಿಗೆ ಹೀಗೆ ಸೋಂಕು ಬಂತು? ಎಂದು ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವರು ಸೂಚಿಸಿದ್ಧಾರೆ.

ರಾಯಚೂರಿನಲ್ಲಿ ಇಲ್ಲಿಯವರೆಗೂ 378 ಜನರಿಗೆ ಕೊರೋನಾ ಬಂದಿದೆ. ಇದರಲ್ಲಿ 4 ಮಂದಿ ಪೊಲೀಸರು ಮತ್ತು ಓರ್ವ ಆಶಾ ಕಾರ್ಯಕರ್ತೆಯೊಂದಿಗೆ ಪೋಸ್ಟ್​ ಮ್ಯಾನ್​ ಕೂಡ ಇದ್ದಾರೆ.  ಈ ನಡುವೆಯೇ ಕೋವಿಡ್​​-19 ಆಸ್ಪತ್ರೆಯಲ್ಲಿ ಕೆಲಸ ಮಾಡುವ 8 ಮಂದಿ ಕೊರೋನಾ ವಾರಿಯರ್ಸ್​ಗೆ ಸೋಂಕು ತಗುಲಿದೆ.

ಇನ್ನೂ, 8 ಮಂದಿಗೆ ಪ್ರತ್ಯೇಕ ಕೊಠಡಿಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ರಿಮ್ಸ್ ಆಸ್ಪತ್ರೆಗೆ ಬಂದೋಗುವ ಎಲ್ಲರಿಗೂ ಭೀತಿ ಶುರುವಾಗಿದೆ.  ರಾಯಚೂರಿಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವರಿಗೂ ಈ ಭಯ ಕಾಡಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿಯೇ ವೈದ್ಯಕೀಯ ಶಿಕ್ಷಣ ಸಚಿವ ತಮ್ಮ ಪ್ರೀಪ್ಲಾನ್ಡ್​ ರಿಮ್ಸ್ ಭೇಟಿ ಕಾರ್ಯಕ್ರಮ ರದ್ದು ಮಾಡಿದ್ದರು. ಇಲ್ಲಿ ನಡೆಸಬೇಕಾದ ಸಭೆಯನ್ನು ಸರ್ಕ್ಯೂಟ್ ಹೌಸ್​ನಲ್ಲಿ ನಡೆಸಿದರು. ಜತೆಗೆ ರಿಮ್ಸ್​ ಆಸ್ಪತ್ರೆ ಸಿಬ್ಬಂದಿ ವೇತನ ಸಮಸ್ಯೆ ಆಲಿಸಿದ ಸಚಿವರು, ಸದ್ಯದಲ್ಲೇ ಬಗೆಹರಿಸುವ ಭರವಸೆ ನೀಡಿದರು.

ಇದೇ ವೇಳೆ ರಿಮ್ಸ್ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು ಹೇಗೆ ಬಂತು? ಇಲ್ಲಿ ಸುರಕ್ಷಿತ ಕ್ರಮ‌ ಯಾಕೇ ಕೈಗೊಂಡಿರಲಿಲ್ಲ ಎಂಬ ವರದಿ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಹೀಗೆ ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಬಂದಿರುವುದು ರಾಜ್ಯದಲ್ಲೇ ಮೊದಲು. ಇದರ ಬಗ್ಗೆ ಮುಂಜಾಗೃತವಹಿಸಿ ಎಂದು ಹಿರಿಯ ಅಧಿಕಾರಿಗಳಿಗೆ ಆದೇಶಿಸಿದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close