ಕರ್ನಾಟಕ ಸುದ್ದಿ

ದ್ವೇಷದ ರಾಜಕಾರಣ ಮಾಡಿದರೇ ಎದುರಿಸುವ ಶಕ್ತಿ ನಮಗಿದ್ದು, ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ; ರೇವಣ್ಣ ಎಚ್ಚರಿಕೆ

ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ

ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡಿದರೇ ಎದುರಿಸುವ ಶಕ್ತಿ ನಮಗಿದ್ದು, ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ. ನಾನೇನು ಸುಮ್ಮನೆ ಕೂತಿದ್ದೀನಾ? ಸಿಎಂ ಬಿಎಸ್ ಯಡಿಯೂರಪ್ಪ ಅವರು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತಾರಾ ? ನಾನು ಬದುಕಿದ್ದಾಗಲೇ ಹಾಸನದಲ್ಲಿ ತೋಟಗಾರಿಕೆ ಕಾಲೇಜು ತಂದೇ ತರುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು. 

ಎರಡೂವರೆ ಲಕ್ಷ ಹಣದ ಕಾಮಗಾರಿ ಕೆಲಸ ಮಾಡಿಸಲು ಚೀಫ್ ಇಂಜಿನಿಯರ್ ಮಾಹಿತಿ ನೀಡಬೇಕು ಅವರಿಗೂ ಹಣ ಕೊಡಬೇಕಾದ ಪರಿಸ್ಥಿತಿ ಜಿಲ್ಲೆಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ಭೂಮಿ ಬಗ್ಗೆ ಸರ್ಕಾರ ತಂದಿರುವ ನೀತಿ ವಿಚಾರ ಮಾತನಾಡಿದ ಅವರು, ಸರ್ಕಾರ ರೈತರನ್ನ ಒಕ್ಕಲೆಬ್ಬಿಸುವ ನೀತಿ ಇದಾಗಿದ್ದು, ಸರ್ಕಾರ ಲ್ಯಾಂಡ್ ಮಾಫಿಯಾ ಜೊತೆ ಸೇರಿದೆ. ಇವೆಲ್ಲದರ ಬಗ್ಗೆ ಗಮನ ನೀಡದ ಪ್ರಧಾನಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದು, ಈಗ ಬರೀ ಪಾಕಿಸ್ತಾನ ಲಡಾಕ್ ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

​ಹಾಸನ ಜಿಲ್ಲಾ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ ಕರೆಯಿರಿ ಎಂದು ಹೇಳಿದರೇ ಕರೆಯಲು ಮುಂದಾಗುತ್ತಿಲ್ಲ. ಕೆಲ ದಿನಗಳ ನೋಡಿ ನಂತರ 22 ಜನ ಸದಸ್ಯರು ಧರಣಿ ಮಾಡುತ್ತಾರೆ. ಲಾಕ್ ಡೌನ್ ವೇಳೆ ಹೂವಿನ ಬೆಳೆ ನಷ್ಟ ಸೇರಿ ಇತರೆ ಪರಿಹಾರದ ಹಣ ಸರಕಾರದಿಂದ ರೈತರಿಗೆ ಇನ್ನು ಬಂದಿಲ್ಲ. ಹಾಸನ ತಾಲೂಕಿನ ಕೃಷಿ ಕಾಲೇಜನ್ನು ಸರ್ಕಾರ ರದ್ದು ಪಡಿಸಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ಸೇರಿದ ಗುತ್ತಿಗೆದಾರರ ನೂರಾರು ಕೋಟಿ ಹಣ ತಡೆಹಿಡಿಯಲಾಗಿದ್ದು, ಸಣ್ಣ ಗುತ್ತಿಗೆದಾರರ ಹಣ ತಡೆ ಹಿಡಿಯಲಾಗಿದೆ. ಗುತ್ತಿಗೆದಾರರು ತಮ್ಮ ಮನೆಯ ಒಡವೆ ಹಾಗೂ ಇತರೆ ಆಸ್ತಿಯನ್ನು ಅಡವಿಟ್ಟಿದ್ದು, ಕೆಲ ದಿನಗಳಲ್ಲಿ ಬೀದಿಗೆ ಬರಬಹುದು. ಜಿಲ್ಲೆಯಲ್ಲಿ  ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದರು.

ನಮ್ಮ ಪಕ್ಷದ ಶಾಸಕರಾದ ಬಾಲಕೃಷ್ಣ, ಶಿವಲಿಂಗೇಗೌಡ ಕಡೆಯವರು ದುಡ್ಡು ಕೊಟ್ಟು ಕಾಮಗಾರಿ ಮಂಜೂರು ಮಾಡಿಸಿಕೊಂಡು ಬಂದರು ಯಾವ ಪ್ರಯೋಜನವಾಗಲಿಲ್ಲ. ಈಗ ತಮ್ಮ ಪಕ್ಷದ ಶಾಸಕರ ಕಡೆಯವರೇ ಹಣ ನೀಡಿ ಕಾಮಗಾರಿ ಮಂಜೂರು ಮಾಡಿಸಿಕೊಂಡಿದ್ದಾರೆ. ಹೇಮಾವತಿ ನೀರಾವರಿಯ ಕಾಮಗಾರಿಯಲ್ಲಿ ಶೇಕಡ 8ರಷ್ಟು ಹಣ ನೀಡಿದವರಿಗೆ ಮಾತ್ರ ಗುತ್ತಿಗೆ ನೀಡಲಾಗುತ್ತಿದೆ ಎಂದು ದೂರಿದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close