ದೇಶದ-ವಿದೇಶ

ಇಂಗ್ಲೆಂಡಿನಲ್ಲಿ ಗಾಂಧಿ ಪ್ರತಿಮೆ ಉರುಳಿಸಲು ಮುಂದಾದ ಪ್ರತಿಭಟನೆಕಾರರು; ಮಿಶ್ರ ಪ್ರತಿಕ್ರಿಯೆ ವ್ಯಕ್ತ

ಸಂಪಾದಕೀಯ : ಸಿರಾಜುದ್ದೀನ್ ಬಂಗಾರ್ ಸಿರವಾರ

ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್​ರನ್ನು ಪೊಲೀಸರು ಸಾಯಿಸಿದ ಪ್ರಕರಣ ಇದೀಗ ವಿಶ್ವಾದ್ಯಂತ ಕಪ್ಪು ವರ್ಣೀಯರ ಸ್ವಾಭಿಮಾನದ ಹೋರಾಟಕ್ಕೆ ಎಡೆ ಮಾಡಿಕೊಟ್ಟಿದೆ. “Black Lives Matter” (ಕಪ್ಪು ಜನರ ಜೀವವೂ ಅಮೂಲ್ಯ) ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಜಾತಿವಾದಿ ಅಥವಾ ಜನಾಂಗೀಯವಾದಿ (Racist) ಎನಿಸಿರುವ ನಾಯಕರ ಪ್ರತಿಮೆಗಳನ್ನು ಕಿತ್ತುಹಾಕುವ ಟ್ರೆಂಡ್ ಶುರುವಾಗಿದೆ. 17ನೇ ಶತಮಾನದ ಸ್ಲೇವ್ ಟ್ರೇಡರ್ (ಗುಲಾಮರ ವ್ಯಾಪಾರಿ) ಎಡ್ವರ್ಡ್ ಕಾಲ್ಸ್​ಟನ್ ಅವರ ಪ್ರತಿಮೆಯನ್ನ ಕಿತ್ತುಹಾಕಲಾಗಿದೆ. ಹಾಗೆಯೇ, ಲಂಡನ್​ನ ಡಾಕ್​ಲ್ಯಾಂಡ್ಸ್ ಮ್ಯೂಸಿಯಮ್​ನ ಹೊರಗೆ ಮತ್ತೊಬ್ಬ ಸ್ಲೇವ್ ಟ್ರೇಡರ್ ರಾಬರ್ಟ್ ಮಿಲಿಗನ್ ಅವರ ಪ್ರತಿಮೆಯನ್ನ ತೆಗೆಯಲಾಗಿದೆ. ಖ್ಯಾತ ಮುಖಂಡ ವಿನ್​ಸ್ಟನ್ ಚರ್ಚಿಲ್ ಅವರ ಪ್ರತಿಮೆಗೆ ಪ್ರತಿಭಟನಾಕಾರರು ಮಸಿಬಳಿದಿದ್ದಾರೆ. ಆಕ್ಸ್​ಫರ್ಡ್​ನ ಓರಿಯೆಲ್ ಕಾಲೇಜಿನಿಂದ ಸೆಸಿಲ್ ರೋಡ್ಸ್ ಪ್ರತಿಮೆಯನ್ನ ತೆಗೆಯಲು ಯೋಜಿಸಲಾಗಿದೆ. ಅದರ ಬೆನ್ನಲ್ಲೇ ಈಗ ಲೇಸಿಸ್ಟರ್​ಶೈರ್​ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಮೇಲೆ ಪ್ರತಿಭಟನಾಕಾರರ ಕಣ್ಣು ಬಿದ್ದಿದೆ.

ಕಪ್ಪು ವರ್ಣೀಯರ ಬಗ್ಗೆ ಗಾಂಧೀಜಿ ತಾತ್ಸಾರ ಮನೋಭಾವ ಹೊಂದಿದ್ದರು ಎಂಬ ಭಾವನೆ ಇದೆ. ಇದೇ ಕಾರಣಕ್ಕೆ ಅವರನ್ನ ಜನಾಂಗೀಯವಾದಿ ಎಂದು ಹಲವರು ಬಣ್ಣಿಸಿದ್ದಾರೆ. ಲೇಸಿಸ್ಟರ್​ನಲ್ಲಿರುವ ಅವರ ಪ್ರತಿಮೆಯನ್ನು ತೆಗೆದುಹಾಕಲು ಆನ್​ಲೈನ್ ಪೆಟಿಶನ್ ನಡೆದಿದೆ. ಈಗಾಗಲೇ 5 ಸಾವಿರಕ್ಕೂ ಹೆಚ್ಚು ಜನರು ಈ ಆನ್​ಲೈನ್ ಪೆಟಿಶನ್​ಗೆ ಸಹಿ ಹಾಕಿದ್ದಾರೆ. ಮೋಹನ್ ದಾಸ್ ಕರಮ್​ಚಂದ್ ಗಾಂಧಿ ಒಬ್ಬ ಫ್ಯಾಸಿಸ್ಟ್, ರೇಸಿಸ್ಟ್ ಮತ್ತು ಲೈಂಗಿಕ ಅಪರಾಧಿ ಎಂದು ಈ ಪೆಟಿಶನ್ ಆರೋಪಿಸಿದೆ. ಈ ಆನ್​ಲೈನ್ ಪೆಟಿಶನ್ ಅನ್ನು ಇನ್ನೂ ಅಧಿಕೃತವಾಗಿ ತಮಗೆ ಸಲ್ಲಿಕೆಯಾಗಿಲ್ಲ ಎಂದು ಲೈಸಿಸ್ಟರ್ ಸಿಟಿ ಕೌನ್ಸಿಲ್ ಆಡಳಿತ ಸ್ಪಷ್ಟಪಡಿಸಿದೆ.

ಕಳೆದ ವರ್ಷವೇ ಇದೇ ಕಾರಣಕ್ಕೆ ಮ್ಯಾಂಚೆಸ್ಟರ್​ನಲ್ಲಿ ಗಾಂಧಿ ಪ್ರತಿಮೆಯನ್ನು ತೆಗೆಯಲು ಆ ನಗರದ ವಿದ್ಯಾರ್ಥಿಗಳು ಕರೆಕೊಟ್ಟಿದ್ದರು. ಅಷ್ಟಕ್ಕೂ ಗಾಂಧೀಜಿ ಕಪ್ಪು ವರ್ಣೀಯರ ಮೇಲೆ ಅಂಥ ಅಪರಾಧ ಎಸಗಿದ್ದು ನಿಜವೇ? ಈ ಬಗ್ಗೆ ಇತಿಹಾಸಕಾರರು ಮಿಶ್ರ ಅಭಿಪ್ರಾಯಗಳನ್ನ ನೀಡುತ್ತಾರೆ.

ಗಾಂಧಿಜಿ ದಕ್ಷಿಣ ಆಫ್ರಿಕಾದಲ್ಲಿದ್ಧಾಗ ಅಲ್ಲಿನ ಸ್ಥಳೀಯ ಜನಾಂಗಗಳ ಬಗ್ಗೆ ಕೆಟ್ಟ ಭಾವನೆ ಹೊಂದಿದ್ದರು. ಬಹಳ ತುಚ್ಛವಾಗಿ ಕಾಣುತ್ತಿದ್ದರು ಎಂದು ಕೆಲ ಇತಿಹಾಸಜ್ಞರು ಹೇಳುತ್ತಾರೆ. ಆದರೆ, ನಮ್ಮೆಲ್ಲರಿಗೂ ಗೊತ್ತಿರುವಂತೆ ಮಹಾತ್ಮ ಗಾಂಧಿ ತಮ್ಮ ಹಲವು ಕೊರತೆಗಳನ್ನ ಮತ್ತು ನ್ಯೂನತೆಗಳನ್ನ ಬಹಿರಂಗವಾಗಿ ಒಪ್ಪಿಕೊಂಡಿದ್ಧಾರೆ. ಗಾಂಧೀಜಿಯ ಮೊಮ್ಮಗ ರಾಜಮೋಹನ್ ಗಾಂಧಿ ಕೂಡ, ತನ್ನ ತಾತ ದಕ್ಷಿಣ ಆಫ್ರಿಕಾದ ಕಪ್ಪು ವರ್ಣೀಯರ ಬಗ್ಗೆ ಕೆಲವೊಮ್ಮೆ ತಪ್ಪು ಅಭಿಪ್ರಾಯಗಳನ್ನ ಹೊಂದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close