ಕರ್ನಾಟಕ ಸುದ್ದಿ

ಬ್ರೇಕಿಂಗ್‌ ನ್ಯೂಸ್: ಕೊರೋನ ಹಾಟಸ್ಪಾಟ್ ನಿಂದ ಇಂದು ರಾಜ್ಯಕ್ಕೆ ಬರಲಿದ್ದಾರೆ 450ಕ್ಕೂ ಅಧಿಕ ಜನ

ಸಂಪಾದಕೀಯ: ಸಿರಾಜುದ್ದೀನ್ ಬಂಗಾರ್, ಸಿರವಾರ

ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿದ್ದು, ಇಂದು ಸಹ ನಗರಕ್ಕೆ ಉದ್ಯಾನ್​ ಎಕ್ಸ್​ಪ್ರೆಸ್ ರೈಲು ಬರುತ್ತಿದೆ. ಇದರಲ್ಲಿ ಸುಮಾರು 450ಕ್ಕೂ ಅಧಿಕ ಪ್ರಯಾಣಿಕರು ಬರುತ್ತಿದ್ದಾರೆ.

ಈಗಾಗಲೇ ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಲ್ಲಿ ಬಹುತೇಕರಲ್ಲಿ ಸೊಂಕು ಪತ್ತೆಯಾಗಿದೆ. ಪ್ರತಿನಿತ್ಯವೂ ನೂರಾರು ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಜನರು ಬರುತ್ತಿದ್ದು, ಇದೀಗ ಮತ್ತೆ 450ಕ್ಕೂ ಅಧಿಕ ಮಂದಿ ಬರುತ್ತಿದ್ದಾರೆ.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ 8.50ಕ್ಕೆ ಉದ್ಯಾನ್ ಎಕ್ಸ್​ಪ್ರೆಸ್ ರೈಲು ಆಗಮಿಸಲಿದೆ. ಬಂದ ಪ್ರತಿಯೊಬ್ಬ ಪ್ರಯಾಣಿಕರನ್ನು ಬಿಬಿಎಂಪಿ ಸಿಬ್ಬಂದಿ ಕ್ವಾರೆಂಟೈನ್ ಮಾಡಲದ್ದಾರೆ. ಯಾವುದೇ ರೋಗ ಲಕ್ಷಣಗಳು ಇಲ್ಲದೆಯೇ ಮಹಾರಾಷ್ಟ್ರದಿಂದ ಬಂದೋರಲ್ಲಿ ಸೋಂಕು ಪತ್ತೆಯಾದ ಪ್ರಕರಣಗಳು ವರದಿಯಾಗಿವೆ

ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲು  ಈಗಾಗಲೇ ಬಿಎಂಟಿಸಿ ಬಸ್​ಗಳು ರೈಲ್ವೆ ನಿಲ್ದಾಣಕ್ಕೆ ಬಂದಿವೆ. ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಬಳಿಕ ಕ್ವಾರೆಂಟೈನ್​ಗೆ ಕರೆದೊಯ್ಯಲಾಗುತ್ತದೆ. ನಿನ್ನೆಯೂ ಕೆಲವರು ಕ್ವಾರೆಂಟೈನ್ ಗೆ ಹೋಗೋದಿಲ್ಲ ಎಂದು ಪಟ್ಟುಹಿಡಿದಿದ್ದರು. ಆದರೂ ಬಿಡದೆ ಪ್ರತಿಯೊಬ್ಬ ಪ್ರಯಾಣಿಕರನ್ನು ಕ್ವಾರೆಂಟೈನ್​ಗೆ ಕಳುಹಿಸಲಾಗಿತ್ತು. ಅಷ್ಟೇ ಅಲ್ಲದೇ ದಿನೇ ದಿನೇ ಕ್ವಾರೆಂಟೈನ್ ಆಗಲ್ಲ ಎಂದು ಪ್ರಯಾಣಿಕರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸುತ್ತಿರುವುದರಿಂದ ಇಂದು ಹೆಚ್ಚುವರಿಯಾಗಿ 50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close