ಸಿರವಾರ

ಸಿರವಾರ; ತಹಶೀಲ್ದಾರ್ ಕಾರ್ಯಾಲಯ ಬೇರೆಡೆಗೆ ಸ್ಥಳಾಂತರ

ವರದಿ: ಸಿರಾಜುದ್ದೀನ್ ಬಂಗಾರ್

ರಾಯಚುರು ಜಿಲ್ಲೆ ಸಿರವಾರ ನೂತನ ತಾಲೂಕ ಘೋಷಣೆಯಾಗಿ ಈಗಾಗಲೇ 2 ವರ್ಷಗಳಾಗಿರುತ್ತದೆ. ತಹಶೀಲ್ದಾರ್ ಕಾರ್ಯಾಲಯವನ್ನು ಹಿಂದೆ ಇರುವ ನಾಡಕಚೇರಿಯಲ್ಲಿಯೇ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಸದರಿ ನಾಡಕಛೇರಿ ಹಳೆಯದಾಗಿರುವದರಿಂದ ಮೇಲ್ಟಾವಣೆ ಶಿಥಿಲಾವಸ್ಥೆಲ್ಲಿದ್ದು ಮಳೆಗಾಲದಲ್ಲಿ ನೀರು ಸೋರಿಕೆ ಯಾಗುತ್ತಿದ್ದು ಇದರಿಂದಾಗಿ ಕಛೇರಿ ಕಾರ್ಯವನ್ನು ನಿರ್ವಹಿಸುದಕ್ಕೆ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದ್ದು.

ಹಾಗೂ ಭೂಮಿ ಕೇಂದ್ರ ಮಾನ್ವಿ ತಾಲೂಕು ಕಛೇರಿಯಲ್ಲಿ ಮುಂದುವರೆದಿದ್ದು, ಇದರಿಂದ ಸಾರ್ವಜನಿಕರು ಮಾನ್ವಿ ತಾಲೂಕಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದ್ದು ಸಾರ್ವಜನಿಕರಲ್ಲಿ ಅಸಹನೆ ಮೂಡಿಸುವಂತಾಗಿದೆ. ಪ್ರಸ್ತುತ ಕೊರೋನಾ ಸಾಂಕ್ರಮೀಕ ರೋಗ ನಿಂಯತ್ರಣ ಹಾಗೂ ಮುಂಜಾಗೃತ ಕ್ರಮಗಳನ್ನು ವಹಿಸಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿರವಾರ ತಹಶೀಲ್ದಾರ್ ಕಾರ್ಯಾಲಯ ಕಟ್ಟಡವು ಚಿಕ್ಕದಾಗಿರುವುದರಿಂದ ಸಿಬ್ಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಸಭೆಗಳನ್ನುನಡೆಸಲು ತೊಂದರೆ ಉಂಟಾಗುತ್ತಿತ್ತು.

ಸಿರವಾರ ತಾಲೂಕಿನಲ್ಲಿ ಪ್ರಸ್ತುತ ಖಾಲಿ ಇರುವ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ನಿಗಮ ಮಂಡಳಿ, ಸಿರವಾರ ವಸತಿಗೃಹ ಕಟ್ಟಡದಲ್ಲಿ ತಹಶೀಲ್ದಾರ್ ಕಾರ್ಯಾಲಯವನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ರಾದ ಕೆ. ಶೃತಿ, ಸಿರವಾರ ಠಾಣೆ ಪಿ ಎಸ್ ಐ ಸುಜಾತ ನಾಯಕ, ಸಿರವಾರ ಪ.ಪಂ ಮುಖ್ಯಾಧಿಕಾರಿಗಳಾದ ಕೆ.ಮುನಿಸ್ವಾಮೀ, ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಮತ್ತು ಊರಿನ ಮುಂಖಡರು ಉಪಸ್ಥೀತರಿದ್ದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close