ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಐದನೇ ದಿನವೂ ತುಟ್ಟಿ ಆದ ಪೆಟ್ರೋಲ್​, ಡೀಸೆಲ್​; ಇನ್ನೂ ಎಷ್ಟು ದಿನ ದರ ಏರಿಕೆ ಆಗಲಿದೆ ಗೊತ್ತಾ?

Posted By: Sirajuddin Bangar

Source: NS18

ಬೆಂಗಳೂರು (ಜೂ.11): ಅನ್​ಲಾಕ್​ ಪೂರ್ಣಗೊಳ್ಳುತ್ತಿದ್ದಂತೆ ಗ್ರಾಹಕರಿಗೆ ತೈಲ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪೆಟ್ರೋಲ್​-ಡೀಸೆಲ್ ದರ ಸತತ ಐದನೇ ದಿನವೂ ಏರಿಕೆ ಕಂಡಿದ್ದು, ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಸಾಮಾನ್ಯರು ಕಂಗಾಲಾಗಿದ್ದಾರೆ.

ಇಂದು ಪೆಟ್ರೋಲ್ ಹಾಗೂ ಡೀಸೆಲ್​​ ದರದಲ್ಲಿ 60 ಪೈಸೆ ಏರಿಕೆ ಕಂಡಿದೆ. ಈ ಮೂಲಕ ಬೆಂಗಳೂರಿನಲ್ಲಿ ಪೆಟ್ರೋಲ್​ ದರ 76.77 ರೂಪಾಯಿ ಆಗಿದೆ. ಡೀಸೆಲ್​ ದರ 68.66 ರೂಪಾಯಿ ಆಗಿದೆ. ಭಾನುವಾರ ಹಾಗೂ ಸೋಮವಾರ ಪೆಟ್ರೋಲ್​ ಹಾಗೂ ಡೀಸೆಲ್​ ದರ 60 ಪೈಸೆ ಏರಿಕೆ ಕಂಡಿತ್ತು. ಮಂಗಳವಾರ ಪೆಟ್ರೋಲ್​ ದರ 54 ಪೈಸೆ ಹಾಗೂ ಡೀಸೆಲ್​ ದರ 58 ಪೈಸೆ ಏರಿಕೆ ಕಂಡಿತ್ತು. ಬುಧವಾರ ಪೆಟ್ರೋಲ್​ ದರದಲ್ಲಿ 40 ಪೈಸೆ ಹಾಗೂ ಡೀಸೆಲ್​ ದರದಲ್ಲಿ 45 ಪೈಸೆ ಜಿಗಿತ ಕಂಡಿತ್ತು.

ಲಾಕ್‌ಡೌನ್ ನಡುವೆಯೇ ಕಚ್ಚಾತೈಲಗಳ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಏರಿಸಿತ್ತು. ಪೆಟ್ರೋಲ್‌ಗೆ ಲೀಟರ್‌ ಒಂದಕ್ಕೆ 10 ರೂ. ಹಾಗೂ ಡೀಸೆಲ್‌ಗೆ ಲೀಟರ್ ಒಂದಲ್ಕೆ 13 ರೂ ನಷ್ಟು ಅಬಕಾರಿ ಸುಂಕವನ್ನು ಏರಿಕೆ ಮಾಡಿ ಆದೇಶ ಹೊರಡಿಸಿತ್ತು ಕೇಂದ್ರ ಸರ್ಕಾರ. ಆದರೆ, ಇದರ ಪರಿಣಾಮ ಗ್ರಾಹಕರ ಮೇಲೆ ಉಂಟಾಗದಂತೆ ನೋಡಿಕೊಂಡಿತ್ತು.

ಮುಂದೆ ಕಾದಿದೆ ಭಾರೀ ಶಾಕ್​?:

ಲಾಕ್‌ಡೌನ್‌ ಸಡಿಲಿಕೆ ಆಗಿರುವ ಬೆನ್ನಿಗೆ ದೇಶದ ಎರಡು ಪ್ರಮುಖ ಪೆಟ್ರೋಲಿಯಂ ತೈಲ ಕಂಪೆನಿಗಳು ದರ ಪರಿಷ್ಕರಣೆಗೆ ಮುಂದಾಗಿದ್ದು, ಜೂನ್ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕನಿಷ್ಠ ಲೀಟರ್‌ಗೆ 4 ರಿಂದ 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಯಾರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

Continue

Related Articles

Leave a Reply

Your email address will not be published. Required fields are marked *

Back to top button
Close
Close