ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ;ಮತ್ತೆ ಏರಿಕೆ ಕಂಡ ಪೆಟ್ರೋಲ್​, ಡೀಸೆಲ್​; ಯಾವ ಯಾವ ನಗರಗಳಲ್ಲಿ ಎಷ್ಟಿದೆ ದರ?

Posted By: Sirajuddin Bangar

Source: NS18

ನವದೆಹಲಿ (ಜೂ 9): ಲಾಕ್​ಡೌನ್​ ಸಡಿಲಿಕೆ ಮಾಡಿದ ಬೆನ್ನಲ್ಲೇ ಭಾನುವಾರ ಪೆಟ್ರೋಲ್​ ದರದಲ್ಲಿ 60 ಪೈಸೆ ಏರಿಕೆ ಕಂಡಿತ್ತು. ಈಗ ಸೋಮವಾರ ಕೂಡ ಪೆಟ್ರೋಲ್​ ದರದಲ್ಲಿ ಮತ್ತೆ ಏರಿಕೆ ಕಂಡಿದೆ. ಈ ಮೂಲಕ ಸತತ ಎರಡನೇ ದಿನವೂ ಪೆಟ್ರೋಲ್​ ದರ ಜಿಗಿತ ಕಂಡಿದೆ. 

ಲಾಕ್​ಡೌನ್​ ಇರುವ ಕಾರಣ ಪೆಟ್ರೋಲ್​ ಹಾಗೂ ಡೀಸೆಲ್​ಗೆ ಬೇಡಿಕೆ ಕುಸಿದಿತ್ತು. ಆದರೆ, ಈಗ ಅನ್​ಲಾಕ್​ ಆದ ನಂತರ ಪೆಟ್ರೋಲ್​-ಡೀಸೆಲ್​​ಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ, ಸೋಮವಾರ ದೇಶಾದ್ಯಂತ ಪೆಟ್ರೋಲ್​-ಡೀಸೆಲ್​ ದರದಲ್ಲಿ 60 ಪೈಸೆ ಏರಿಕೆ ಕಂಡಿದೆ. ಈ ಮೊದಲು ಮಾರ್ಚ್​ 16ರಂದು ಪೆಟ್ರೋಲ್​ ದರ ಕೊನೆಯದಾಗಿ ಏರಿಕೆ ಕಂಡಿತ್ತು. ಅದಾದ ನಂತರ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಭಾನುವಾರವೇ ಏರಿಕೆ ಕಂಡಿತ್ತು.  ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ಗೆ 74.79 ರೂಪಾಯಿ ಇದೆ. ಇನ್ನು ಡೀಸೆಲ್​ ದರ 67.14 ರೂಪಾಯಿ ಇದೆ.

ಪೆಟ್ರೋಲ್​ ದರ ರೂಪಾಯಿಗಳಲ್ಲಿ:

ಹೈದರಾಬಾದ್: 75.22
ದೆಹಲಿ: 72.46
ಚೆನ್ನೈ: 76.60
ಮುಂಬೈ: 79.49ಮೈಸೂರು: 74.43
ನೋಯ್ಡಾ: 74.97

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಆಗುತ್ತಲೇ ಇದೆ. ಅಮೆರಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೈಲ ಬೆಲೆ ಪಾತಾಳಕ್ಕೆ ಕುಸಿದಿದೆ. ಆದಾಗ್ಯೂ ಕೇಂದ್ರ ಸರ್ಕಾರ ಈ ಲಾಭವನ್ನು ಜನರಿಗೆ ವರ್ಗಾಣೆ ಮಾಡುತ್ತಿಲ್ಲ.

ಲಾಕ್‌ಡೌನ್ ನಡುವೆಯೇ ಕಚ್ಚಾತೈಲಗಳ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಏರಿಸಿತ್ತು. ಪೆಟ್ರೋಲ್‌ಗೆ ಲೀಟರ್‌ ಒಂದಕ್ಕೆ 10 ರೂ. ಹಾಗೂ ಡೀಸೆಲ್‌ಗೆ ಲೀಟರ್ ಒಂದಲ್ಕೆ 13 ರೂ ನಷ್ಟು ಅಬಕಾರಿ ಸುಂಕವನ್ನು ಏರಿಕೆ ಮಾಡಿ ಆದೇಶ ಹೊರಡಿಸಿತ್ತು ಕೇಂದ್ರ ಸರ್ಕಾರ. ಆದರೆ, ಇದರ ಪರಿಣಾಮ ಗ್ರಾಹಕರ ಮೇಲೆ ಉಂಟಾಗದಂತೆ ನೋಡಿಕೊಂಡಿತ್ತು.

ಲಾಕ್‌ಡೌನ್‌ ಸಡಿಲಿಕೆ ಆಗಿರುವ ಬೆನ್ನಿಗೆ ದೇಶದ ಎರಡು ಪ್ರಮುಖ ಪೆಟ್ರೋಲಿಯಂ ತೈಲ ಕಂಪೆನಿಗಳು ದರ ಪರಿಷ್ಕರಣೆಗೆ ಮುಂದಾಗಿದ್ದು, ಜೂನ್ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕನಿಷ್ಠ ಲೀಟರ್‌ಗೆ 4 ರಿಂದ 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಯಾರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

Continue

Related Articles

Leave a Reply

Your email address will not be published. Required fields are marked *

Back to top button
Close
Close