ಕರ್ನಾಟಕ ಸುದ್ದಿ

ಕ್ರೈಂ ನ್ಯೂಸ್; ಅನೈತಿಕ ಸಂಬಂಧ: ಗಂಡ, ನಾದಿನಿ ಮೇಲೆ ಪ್ರಿಯಕರನ ಜೊತೆಗೂಡಿ ಕೆಮಿಕಲ್ ಅಟ್ಯಾಕ್ ನಡೆಸಿದ ಪಾಪಿ ಪತ್ನಿ

–ಸಿರಾಜುದ್ದೀನ್ ಬಂಗಾರ್ ಸಂಪಾದಕರು ಸಿರವಾರ

ಸಾಮಾನ್ಯವಾಗಿ ಪತಿ ಪತ್ನಿಯ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸುವುದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ಘಟನೆ ಉಲ್ಟಾ ಪಲ್ಟಾ ಆಗಿದೆ. ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆಂದು ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿ ಮತ್ತು ಆತನ ತಂಗಿಯ ಮೇಲೆ ಕೆಮಿಕಲ್ ಅಟ್ಯಾಕ್ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬಿ ಹೊಸಹಳ್ಳಿ ಬಳಿ ನಡೆದಿದೆ. ವಿಶ್ವನಾಥ್ ಮತ್ತು ನಿರ್ಮಲಾ ದಾಳಿಗೆ ಒಳಗಾದವರು ಅಣ್ಣ ಮತ್ತು ತಂಗಿ. ಲಕ್ಷ್ಮಿ ಎಂಬಾಕೆ ಪತಿ ಮತ್ತು ಆತನ ತಂಗಿಯ ಮೇಲೆ ಕೆಮಿಕಲ್ ಅಟ್ಯಾಕ್ ನಡೆಸಿದ ಪಾಪಿ ಪತ್ನಿ.

Advertisement : classic multimedia computers sirwar.

ಮೂಲತಃ ಕೋಲಾರದ ಹೆಬ್ಬಣಿಯವರಾದ ವಿಶ್ವನಾಥ್ ಕಳೆದ ಹತ್ತು ವರ್ಷಗಳ ಹಿಂದೆ ಲಕ್ಷ್ಮಿಯನ್ನು ವಿವಾಹವಾಗಿದ್ದರು. ಪ್ರಾರಂಭದಲ್ಲಿ ಸುಮ್ಮನಿದ್ದ ಲಕ್ಷ್ಮಿ ಬರುಬರುತ್ತಾ ತನ್ನ ವರಸೆ ಬದಲಿಸಿದ್ದಳು. ಇಬ್ಬರಿಗೂ ಸರಿ ಹೊಂದದೇ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಆದರೂ ಪದೇ ಪದೇ ಖ್ಯಾತೆ ಮಾತ್ರ ನಿಂತಿರಲಿಲ್ಲ. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯ್ತಿ ನಡೆದು ಇನ್ನೂ ಹದಿನೈದು ದಿನ ಕಳೆದಿರಲಿಲ್ಲ. ಇದರ ನಡುವೆ ಇಂದು ಪತಿ ವಿಶ್ವನಾಥ್ ಮತ್ತು ಆಕೆಯ ತಂಗಿಯ ಮೇಲೆ ಲಕ್ಷ್ಮಿ ಮತ್ತು ಆಕೆಯ ಪ್ರಿಯಕರ ಸೇರಿ ಟಾಯ್ಲೆಟ್ ಕ್ಲೀನ್ ಮಾಡುವ ಕೆಮಿಕಲ್ ಎರಚಿ ಪರಾರಿಯಾಗಿದ್ದಾರೆ.

ಇನ್ನು, ಚಂದಾಪುರದಲ್ಲಿ ವಾಸವಾಗಿದ್ದ ಅಣ್ಣ ತಂಗಿ ಲಿಫ್ಟ್​​ಗಳನ್ನು ಬೇರೆ ಕಡೆಯಿಂದ ತರಿಸಿ, ಅಳವಡಿಸುವ ವ್ಯವಹಾರ ನಡೆಸುತ್ತಿದೆ. ಇಂದು ಸಹ ಸರ್ಜಾಪುರ ಬಳಿಯ ಅಪಾರ್ಟ್ಮೆಂಟ್ ಒಂದರ ಲಿಫ್ಟ್ ರಿಪೇರಿ ಮಾಡಿಸಿ ಮರಳುತಿದ್ದಾಗ ಬಿ ಹೊಸಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಹೊಂಚು ಹಾಕಿ ಕುಳಿತಿದ್ದ ಲಕ್ಷ್ಮಿ ಮತ್ತು ಪ್ರಿಯಕರ ಕೆಮಿಕಲ್ ಎರಚಿ ಪರಾರಿಯಾಗಿದ್ದಾರೆ. ತಲೆಗೆ ಹೆಲ್ಮೆಟ್ ಧರಿಸಿದ್ದರಿಂದ ಮುಖ ಮತ್ತು ಕಣ್ಣಿಗೆ ಯಾವುದೇ ಹಾನಿಯಾಗಿಲ್ಲ.

ಆದರೆ ವಿಶ್ವನಾಥ್ ಬಲ ಎದೆ ಮತ್ತು ತೋಳಿಗೆ ಬೊಬ್ಬೆಗಳಾಗಿದ್ದರೆ, ತಂಗಿ ನಿರ್ಮಲ ಕೈ ಮತ್ತು ಕಾಲಿನ ಮೇಲೆ ಬೊಬ್ಬೆಗಳಾಗಿವೆ. ಸರ್ಜಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರಿಸಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close