ಕರ್ನಾಟಕ ಸುದ್ದಿ

ತಾನು ಶಿಫಾರಸು ಮಾಡಿದವರಿಗೆ ರಾಜ್ಯಸಭಾ ಟಿಕೆಟ್​ ನೀಡದ ಬಿಜೆಪಿ ಹೈಕಮಾಂಡ್​ – ವರಿಷ್ಠರ ಮೇಲೆ ಬಿಎಸ್​ವೈ ಮುನಿಸು

Posted by: Sirajuddin Bangar

Source:NS18

ಬೆಂಗಳೂರು(ಜೂ.08): ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್​ ಅಚ್ಚರಿಯ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಘಟಾನುಘಟಿಗಳ ತೀವ್ರ ಪೈಪೋಟಿ ನಡುವೆ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭಾ ಟಿಕೆಟ್​​ ಘೋಷಿಸಿದಂತೆ ಒಂದೆಡೆ ಪ್ರಂಶಸೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಬೇಸರ ಮಾಡಿಕೊಂಡಿದ್ದಾರೆ.

ಹೌದು, ತಾನು ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್​ ಘೋಷಿಸಿದ ಬಿಜೆಪಿ ಹೈಕಮಾಂಡ್​​ ಬಿ.ಎಸ್​ ಯಡಿಯೂರಪ್ಪ ಬೇಸರ ಮಾಡಿಕೊಂಡಿದ್ದಾರೆ. ಪ್ರಭಾವಿಗಳ ಒತ್ತಡವಿದ್ದರೂ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್‌ ನೀಡಿರುವ ಪಕ್ಷದ ಹೈಕಮಾಂಡ್‌ ಉದ್ದೇಶವೇನು? ತನ್ನ ಆಪ್ತರಿಗೆ ಯಾಕೇ ಟಿಕೆಟ್​ ನೀಡಲಿಲ್ಲ ಎಂದು ಯಡಿಯೂರಪ್ಪ ಯೋಚನೆ ಮಾಡುತ್ತಿದ್ಧಾರೆ. ಇವರ ನಡೆಗೆ ಬೇಸತ್ತು ಯಾರನ್ನು ಭೇಟಿ ಮಾಡದೇ ಬಿಎಸ್​ವೈ ಮನೆಯಲ್ಲೇ ಉಳಿದುಕೊಂಡಿದ್ದಾರೆ.

ನಾನು ಮಣೆ ಹಾಕಿದ ಅಭ್ಯರ್ಥಿಗಳಿಗೆ ಹೈಕಮಾಂಡ್​ ಯಾಕೇ ಟಿಕೆಟ್​ ನೀಡಲಿಲ್ಲ. ಹೀಗೆ ನನ್ನ ಆಪ್ತರಿಗೆ ಬಿಟ್ಟು ಬೇರೆ ಯಾರಿಗೋ ಟಿಕೆಟ್​ ನೀಡಿರುವುದು ಯಾಕೇ? ಇದರ ಹಿಂದಿನ ಕೈವಾಡ ಯಾರದ್ದು? ಎಂಬುದು ಸಿಎಂ ಆಲೋಚನೆಯಾಗಿದೆ. ಹೀಗಾಗಿಯೇ ಹೈಕಮಾಂಡ್​​ ರಾಜ್ಯಸಭಾ ಟಿಕೆಟ್​ ಘೋಷಿಸಿದರೂ ಯಡಿಯೂರಪ್ಪ ಟ್ವೀಟ್​​ ಅಥವಾ ಒಂದು ಮಾಧ್ಯಮ ಪ್ರಕಟಣೆ ಹೊರಡಿಸಲಿಲ್ಲ ಎಂಬುದು ಇದಕ್ಕೆ ಕಾರಣ.  ಈ ನೋವನ್ನು ಯಡಿಯೂರಪ್ಪ ತನ್ನ ಆಪ್ತರೊಂದಿಗೆ ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ನಾಲ್ಕು ಸ್ಥಾನಗಳಿಗೆ ಜೂನ್ 19ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ವಿಶೇಷ ಅಂದರೆ ಬಿಜೆಪಿ ಹೈಕಮಾಂಡ್ ಆಯ್ಕೆ ಕಂಡು ರಾಜ್ಯ ನಾಯಕರು ಅಚ್ಚರಿಗೊಂಡಿದ್ದಾರೆ.

ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಜೆಪಿ ಬೆಳಗಾವಿ ನಗರಾಧ್ಯಕ್ಷ ಅಶೋಕ್ ಗಸ್ತಿ ಹಾಗೂ ಬಿಜೆಪಿ ಬೆಳಗಾವಿ ನಗರಾಧ್ಯಕ್ಷ ಈರಣ್ಣ ಕಡಾಡಿ ಇವರನ್ನು ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ. ಇದರೊಂದಿಗೆ ರಾಜ್ಯ ಬಿಜೆಪಿ ಕಳಿಸಿದ ಲಿಸ್ಟ್ ಗೆ ಹೈಕಮಾಂಡ್ ತಿರಸ್ಕರಿಸಿ, ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಿದೆ.

ರಾಯಚೂರಿನವರಾದ ಅಶೋಕ್ ಗಸ್ತಿ ಸವಿತಾ ಸಮಾಜಕ್ಕೆ ಸೇರಿದವರು. ಹಾಗೂ ಬೆಳಗಾವಿಯವರಾದ ಈರಣ್ಣ ಕಡಾಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿಶೇಷ ಅಂದರೆ ಇವರಿಬ್ಬರು ಉತ್ತರ ಕರ್ನಾಟಕಕ್ಕೆ ಸೇರಿದವರು.

ರಾಜ್ಯಸಭೆ ಟಿಕೆಟ್‌ಗಾಗಿ ಪ್ರಭಾಕರ್‌ ಕೋರೆ, ರಮೇಶ್ ಕತ್ತಿ, ಪ್ರಕಾಶ್ ಶೆಟ್ಟಿ ಹೆಸರು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಜತೆಗೆ ತೇಜಸ್ವಿನಿ ಅನಂತ್ ಕುಮಾರ್, ಮುರುಳೀಧರ್ ರಾವ್, ಸುಧಾಮೂರ್ತಿ ಹೆಸರುಗಳು ಕೇಳಿ ಬಂದಿದ್ದವು. ಈ ನಡುವೆ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ರಾಜ್ಯಸಭೆ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸಿದ್ದರು. ಇದಕ್ಕಾಗಿ ಪ್ರತ್ಯೇಕ ಸಭೆ ನಡೆಸಿದ್ದು, ಬಂಡಾಯವೆದ್ದಿದ್ದರು. ಈ ಬೆಳವಣಿಗೆಯಲ್ಲಿ ರಮೇಶ್ ಕತ್ತಿಗೆ ಟಿಕೆಟ್ ನೀಡುವ ಭರವಸೆಯನ್ನು ಸಿಎಂ ಬಿ.ಎಸ್‌ ಯಡಿಯೂರಪ್ಪ ನೀಡಿದ್ದರು. ಆದರೀಗ ಹೈಕಮಾಂಡ್​​ ಬೇರರಯವರಿಗೆ ಮಣೆ ಹಾಕಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close