ಕರ್ನಾಟಕ ಸುದ್ದಿ

ಎಸ್​ಎಸ್​​ಸಿ ಪರೀಕ್ಷೆ ರದ್ದು; ಕೊರೋನಾ ಹಿನ್ನೆಲೆ ಎಲ್ಲ ವಿದ್ಯಾರ್ಥಿಗಳೂ ಪಾಸ್!

–ಸಿರಾಜುದ್ದೀನ್ ಬಂಗಾರ್, ಸಂಪಾದಕರು ಸಿರವಾರ

ತೆಲಂಗಾಣದ ಎಲ್ಲ 10ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ತೇರ್ಗಡೆ ಮಾಡಲಾಗಿದೆ. ತೆಲಂಗಾಣದಲ್ಲಿ ಈ ವರ್ಷ 5,34,903 ವಿದ್ಯಾರ್ಥಿಗಳು ಎಸ್​ಎಸ್​ಸಿ ಪರೀಕ್ಷೆ ಬರೆಯುವವರಿದ್ದರು.

ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಇದರ ಪರಿಣಾಮ ಎಲ್ಲ ವಲಯದ ಮೇಲೂ ಬೀರಿದೆ. ಕರ್ನಾಟಕದಲ್ಲಿ ಜೂನ್ 25ರಿಂದ ಜುಲೈ 4ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸುವುದಾಗಿ ಘೋಷಿಸಲಾಗಿದೆ. ಆದರೆ, ತೆಲಂಗಾಣದಲ್ಲಿ 10ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್​ ಮಾಡಲಾಗಿದೆ.

ತೆಲಂಗಾಣ ಸರ್ಕಾರ ಇಂದು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ಕೊರೋನಾ ಕೇಸುಗಳು ಹೆಚ್ಚುತ್ತಲೇ ಇರುವುದರಿಂದ ತೆಲಂಗಾಣದಲ್ಲಿ ಎಸ್​ಎಸ್​​ಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೂ ಕೊರೋನಾ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಈ ಬಗ್ಗೆ ಇಂದು ಉನ್ನತ ಮಟ್ಟದ ಸಭೆ ನಡೆಸಿ, ಆದೇಶ ಹೊರಡಿಸಿದ್ದಾರೆ.

ತೆಲಂಗಾಣದ ಎಲ್ಲ 10ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ತೇರ್ಗಡೆ ಮಾಡಲಾಗಿದೆ. ಇಂಟರ್ನಲ್ ಅಂಕಗಳ ಆಧಾರದಲ್ಲಿ ಮಕ್ಕಳಿಗೆ ಗ್ರೇಡ್​ಗಳನ್ನು ನೀಡಲಾಗುವುದ. ತೆಲಂಗಾಣದಲ್ಲಿ ಈ ವರ್ಷ 5,34,903 ವಿದ್ಯಾರ್ಥಿಗಳು ಎಸ್​ಎಸ್​​ಸಿ ಪರೀಕ್ಷೆ ಬರೆಯುವವರಿದ್ದರು. ಲಾಕ್​ಡೌನ್​ನಿಂದ ಮುಂದೂಡಲಾಗಿದ್ದ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close