ಕರ್ನಾಟಕ ಸುದ್ದಿ

ಅವಘಡ; ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

–ಸಿರಾಜುದ್ದೀನ್ ಬಂಗಾರ್, ಸಂಪಾದಕರು ಸಿರವಾರ

ಸೆಪ್ಟಿಕ್ ಟ್ಯಾಂಕ್ಕೊಂದನ್ನು ಸ್ವಚ್ಛತೆಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಅಮಾಯಕರು ದಾರುಣವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ತಿರುಮಗೊಂಡನಹಳ್ಳಿ ಬಳಿಯ ಪಲೋಮಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ನಲ್ಲಿ ನಡೆದಿದೆ.

ವಿಧಿಯ ಆಟವೇ ಹಾಗೆ. ಅದು ಮನುಷ್ಯನ ಆಲೋಚನೆಗೆ ನಿಲುಕದ್ದು. ಹೌದು ಅಲ್ಲಿ ಬಹುತೇಕ ಕೆಲಸ ಮಗಿದಿತ್ತು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಆದ ಸಣ್ಣ ಎಡವಟ್ಟು ಎರಡು ಜೀವಗಳನ್ನು ಅನಾಯಾಸವಾಗಿ ಯಮಪುರಿಗಟ್ಟಿದೆ. ಮತ್ತೊರ್ವ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಸೆಪ್ಟಿಕ್ ಟ್ಯಾಂಕ್ಕೊಂದನ್ನು ಸ್ವಚ್ಛತೆಗೊಳಿಸುವ ವೇಳೆ ಉಸಿರುಗಟ್ಟಿ ಇಬ್ಬರು ಅಮಾಯಕರು ದಾರುಣವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ತಿರುಮಗೊಂಡನಹಳ್ಳಿ ಬಳಿಯ ಪಲೋಮಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ನಲ್ಲಿ ನಡೆದಿದೆ.

ತಮಿಳುನಾಡಿನ ಹೊಸೂರು ಮೂಲದ ಸೆಪ್ಟಿಕ್ ಟ್ಯಾಂಕ್ ಕ್ಲೀನರ್ ಜೇಮ್ಸ್ (25) ಹಾಗೂ ಆನೇಕಲ್ ತಾಲೂಕಿನ ಮಂಚನಹಳ್ಳಿ ವಾಸಿ ಪಲೋಮಾ ಕಂಪನಿಯ ಉದ್ಯೋಗಿ ಆನಂದ್(32) ಎಂದು ತಿಳಿದು ಬಂದಿದೆ. ಇಂದು ಪಲೋಮಾ ಕಂಪನಿಯ ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಲು ಜೆಟ್ಟಿಂಗ್ ಮಿಷನ್ ತರಿಸಲಾಗಿತ್ತು.

ಅದರ ಅಪರೇಟರ್ ಜೇಮ್ಸ್ ಕೂಡ ಜೆಟ್ಟಿಂಗ್ ಮಿಷನ್ ಮೂಲಕ ಬಹುತೇಕ ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸಿದ್ದ. ಆದ್ರೆ ಕೊನೆ ಗಳಿಗೆಯಲ್ಲಿ ಜೆಟ್ಟಿಂಗ್ ಮಿಷನ್ ಟೂಲ್ ಒಂದು ಸೆಪ್ಟಿಕ್ ಟ್ಯಾಂಕ್ ಒಳಗೆ ಬಿದ್ದಿದೆ. ಅದನ್ನು ತರಲು ಸೆಪ್ಟಿಕ್ ಟ್ಯಾಂಕ್ ಒಳಗೆ ಇಳಿದ ಜೇಮ್ಸ್ ಪ್ರಜ್ಞಾಹೀನನಾಗಿದ್ದಾನೆ. ಟ್ಯಾಂಕ್ ಒಳಗೆ ಇಳಿದ ಜೇಮ್ಸ್ ಹೊರ ಬಾರದಿದ್ದಾಗ ಪಲೋಮಾ ಕಂಪನಿ ನೌಕರ ಆನಂದ್ ಕೂಡಾ ಟ್ಯಾಂಕ್ ಒಳಗೆ ಇಳಿದಿದ್ದು, ಹೊರ ಬರಲಾಗದೆ ನೆರವಿಗಾಗಿ ಕೂಗಿಕೊಂಡಿದ್ದಾನೆ. ಇಬ್ಬರನ್ನು ರಕ್ಷಿಸಲು ಹೋದ ಕಂಪನಿ ಎಚ್ ಆರ್ ಸಿಬ್ಬಂದಿ ಚಂದ್ರಶೇಖರ್ ಸಹ ಸೆಪ್ಟಿಕ್ ಟ್ಯಾಂಕ್ ನಲ್ಲಿ ಪ್ರಜ್ಞಾಹೀನನಾಗಿದ್ದಾನೆ.

ಹೀಗೆ ಮೂರು ಮಂದಿ ಸೆಪ್ಟಿಕ್ ಟ್ಯಾಂಕ್‌ನಲ್ಲಿ  ಪ್ರಜ್ಞಾಹೀನಾ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬಗ್ಗೆ ಅಗ್ನಿಶಾಮಕ ದಳಕ್ಕೆ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ನಾಗರಾಜ್ ನೇತೃತ್ವದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳ ಕ್ಷಿಪ್ರ ಗತಿಯಲ್ಲಿ ಮೂರು ಮಂದಿಯನ್ನು ರಕ್ಷಣೆ ಮಾಡಿ ಅಂಬ್ಯುಲೆನ್ಸ್ ಮೂಲಕ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಜೆಟ್ಟಿಂಗ್ ಮಿಷನ್ ಅಪರೇಟರ್ ಜೇಮ್ಸ್ ಹಾಗೂ ಪಲೋಮಾ ಕಂಪನಿ ನೌಕರ ಆನಂದ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಎಚ್ ಆರ್ ಸಿಬ್ಬಂದಿ ಚಂದ್ರಶೇಖರ್‌ಗೆ ಚಿಕಿತ್ಸೆ ಮುಂದುವರಿದಿದೆ.

ಸದ್ಯ ಘಟನೆ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ. ಇದರ ನಡುವೆ ಮೃತರ ಸಂಬಂಧಿಕರು ಆಸ್ಪತ್ರೆ ಬಳಿ ಜಮಾಯಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಸ್ಥಳಕ್ಕಾಗಮಿಸಿದ ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ನಂಜುಂಡೇ ಗೌಡರು ಅಗತ್ಯ ಕ್ರಮಕೈಗೊಳ್ಳವ ಬರವಸೆ ನೀಡಿದ ಬಳಿಕ ವಾತವರಣ ತಿಳಿಯಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close