ಕರ್ನಾಟಕ ಸುದ್ದಿ

KMF ಅಕ್ರಮದ ಕಾಟ; ಹಾಲು ಮಾರಲಾಗದೇ ಬೀದಿಗೆ ಬಂದಿವೆ ರೈತರ ಕುಟುಂಬಗಳು

— ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ ಜ್ವಾಲೆ ನ್ಯೂಸ್

ಇಷ್ಟು ದಿನ ಕೊರೋನಾ ಹಾವಳಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ರೈತರಿಗೆ ಈಗ ಹಾಲಿನ ಗುಣಮಟ್ಟದ ಹೆಸರಲ್ಲಿ ತೊಂದರೆ ಕೊಡಲಾಗುತ್ತಿದೆ. ಡೈರಿಯಲ್ಲಿ ನಡೆದ ಅಕ್ರಮ ಪ್ರೆಶ್ನೆ ಮಾಡಿದಕ್ಕೆ ಹಾಲು ಉತ್ಪಾದಕರ ಮೇಲೆಯೇ ಇಲ್ಲ ಸಲ್ಲದ ಆರೋಪ ಹೊರಿಸಿ ಕಳೆದ ಮೂರು ದಿನದಿಂದ ಡೈರಿ ಬಾಗಿಲು ಹಾಕಲಾಗಿದೆ. ಪರಿಣಾಮ ಸಾವಿರಾರು ಲೀಟರ್​ ಹಾಲನ್ನು ಡೈರಿಗೆ ಹಾಕಲಾಗದೆ ರೈತರು ಹಾಗೂ ರೈತ ಮಹಿಳೆಯರು ಸ್ಥಳದಲ್ಲೇ ರಾತ್ರಿ ಬೆಳಗ್ಗೆ ಧರಣಿ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಬಡವರನ್ನ ,ರೈತರನ್ನ ಕೊರೋನಾ ಹಾವಳಿ ಇನ್ನಿಲದಂತೆ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಇತ್ತ ಸರ್ಕಾರ ರೈತರಿಗೆ ನೆರವಾಗಬೇಕು ಅಂತ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ, ಹಾಸನ ಜಿಲ್ಲೆ  ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆ ಶಿವರ ಗ್ರಾಮದ ಕೆಎಮ್‌ಎಫ್ ಡೈರಿ ಇದಕ್ಕೆಲ್ಲಾ ತದ್ವಿರುದ್ದ.

ದಿನಕ್ಕೆ 2000ಕ್ಕೂ ಹೆಚ್ಚು ಲೀಟರ್​ ಹಾಲನ್ನ ರೈತರು ಈ ಡೈರಿಗೆ ಹಾಕುತ್ತಾರೆ. ಸಂತೆಶಿವರ ಡೈರಿ ವ್ಯಾಪ್ತಿಗೆ 8ಗ್ರಾಮ ಒಳಪಟ್ಟು ಸುಮಾರು 225 ಹಾಲು ಉತ್ಪಾದಕರನ್ನ ಒಳಗೊಡಿದೆ. ಆದರೆ, ಕಳೆದ 35 ವರ್ಷದಿಂದ ಈ ಡೈರಿಯಲ್ಲಿ ಕಾರ್ಯದರ್ಶಿಯಾಗಿರುವ ಚಕ್ರಪಾಣಿ ಎಂಬುವರು ಇಲ್ಲಿನ ಹಾಲು ಉತ್ಪಾದಕರಿಗೆ ನಿರಂತರ ವಂಚಿಸುತ್ತಾ ಬಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರೈತರು ಹಾಕೋ ಹಾಲು ಕಡಿಮೆ ಫ್ಯಾಟ್​ ಒಳಗೊಂಡಿದೆ ಎಂದು ಕಾರಣ ಹೇಳಿ ಹಾಲು ಉತ್ಪಾದಕರಿಗೆ ಕೇವಲ ಲೀಟರ್​ ಹಾಲಿಗೆ ಕೇವಲ 9 ರೂ  ಬೆಲೆ ನೀಡಲು ಮುಂದಾಗಿದ್ದಾರೆ. ಇದರಿಂದ ಕೆರಳಿದ ರೈತರು ಕೆಎಂಎಫ್ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಯಾವಾಗ ರೈತರು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರೋ ಆಗ ಅಧಿಕಾರಿಗಳು ನೀವು ಪೂರೈಕೆ ಮಾಡುತ್ತಿರುವ ಹಾಲೇ ಸರಿಯಿಲ್ಲ ಎಂದು ಹೇಳಿ ಡೈರಿಗೆ ಬೀಗ ಜಡಿದಿದ್ದು, ಹಾಲು ಕೊಳ್ಳುವವರಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೂರು ದಿನದಿಂದ 8 ಸಾವಿರ ಲೀಟರ್​ ಹಾಲು ಈ ಡೈರಿಗೆ ಸೇರಬೇಕಾದದ್ದು ರಸ್ತೆಗೆ ಸುರಿಯೋ ಹಂತಕ್ಕೆ ಇಲ್ಲಿನ ರೈತರು ತಲುಪಿದ್ದಾರೆ. ಈ ಹಿನ್ನಲೆ ನೆನ್ನೆ ರಾತ್ರಿಯಿಂದ ರೈತರು ಮಹಿಳೆಯರು ಇಲ್ಲಿ ನಿರಂತ ಧರಣಿ ಮಾಡಿದ್ದಾರೆ. ಇನ್ನೂ ಹಾಸನ ಕೆಎಮ್​ಎಫ್‌​ ಮಂಡಳಿ ಅಧಿಕಾರಿಗಳು ಕೂಡ ರೈತರ ಸಂಕಷ್ಟಕ್ಕೆ ಸರಿಯಾಗಿ ಸ್ಪಂದಿಸದಿರೋದು ಆತಂಕಕ್ಕೆ ಕಾರಣವಾಗಿದೆ.

ಹೀಗೆ ಇಡೀ ರಾಜ್ಯವೇ ಕರೋನಾ ಸಂಕಷ್ಟದಲ್ಲಿರುವಾಗ ಚನ್ನರಾಯಪಟ್ಟಣ ಸಂತೆ ಶಿವರ ಡೈರಿ ಸಿಬ್ಬಂದಿಗಳು ಗುಣಮಟ್ಟದ ನೆಪ ಹೇಳಿ ಡೈರಿಯನ್ನೆ ಬಾಗಿಲು ಮುಚ್ಚಿ ದರ್ಪ ತೋರುತ್ತಿದ್ದಾರೆ. ಇನ್ನು ರೈತರ ಬಗ್ಗೆ ಕಾಳಜಿ ಮಾತನಾಡೋ ಹಾಸನ ಮಾಜಿ ಸಚಿವ ಹಾಗೂ ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾದ ಹೆಚ್​ ಡಿ ರೇವಣ್ಣ ಮಧ್ಯ ಪ್ರವೇಶ ಮಾಡಿ ರೈತರ ನೋವಿಗೆ ಸ್ಪಂದಿಸಬೇಕಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close