ಅಂತರಾಷ್ಟ್ರೀಯ

ಬ್ರೆಕೀಂಗ್ ನ್ಯೂಸ್ ; ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಸ್ಪೇನ್​ ಹಿಂದಿಕ್ಕಿದ ಭಾರತ; ವಿಶ್ವಮಟ್ಟದಲ್ಲಿ ನಮ್ಮ ದೇಶಕ್ಕೆ ಐದನೇ ಸ್ಥಾನ

Posted By : Sirajuddin Bangar

Source: NS18

ನವದೆಹಲಿ (ಜೂ 7): ಕೊರೋನಾ ವೈರಸ್​ ಹೆಚ್ಚುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಅನ್​ಲಾಕ್​ 2.0 ಘೋಷಣೆ ಮಾಡಿದೆ. ಪರಿಣಾಮ, ದೇಶದಲ್ಲಿ ಕೊರೋನಾ ವೈರಸ್​ ಮಿತಿ ಮೀರಿ ಹಬ್ಬುತ್ತಿದೆ. ಶನಿವಾರ ಒಂದೇ ದಿನ ಸುಮಾರು 10 ಸಾವಿರ ಪ್ರಕರಣಗಳು ಪತ್ತೆಯಾಗಿದ್ದವು. ಪರಿಣಾಮ ವಿಶ್ವದ ಅತಿ ಹೆಚ್ಚು ಕೊರೋನಾ ಪೀಡಿತರ ಸಾಲಿನಲ್ಲಿ ಸ್ಪೇನ್​ ಹಿಂದಿಕ್ಕುವ ಮೂಲಕ ಭಾರತ ಐದನೇ ಸ್ಥಾನಕ್ಕೆ ಜಿಗಿದಿದೆ.

ಶುಕ್ರವಾರ ಒಟ್ಟು 9,887 ಕೊರೋನಾ ಪ್ರಕರಣಗಳು ಬೆಳಕಿಬಂದಿದ್ದವು ಎಂದು ಆರೋಗ್ಯ ಇಲಾಖೆ ಶನಿವಾರದ ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಿತ್ತು. ಈ ಮೂಲಕ ಕೊರೋನಾ ಪ್ರಕರಣ ಸಂಖ್ಯೆ 2.44 ಲಕ್ಷ ಆಗಿತ್ತು.  ಇನ್ನು, 24 ಗಂಟೆಯಲ್ಲಿ 294 ಜನರು ಕೊರೋನಾ ವೈರಸ್​ಗೆ ಮೃತಪಟ್ಟಿದ್ದರು. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಭಾರೀ ಆತಂಕ ಸೃಷ್ಟಿಸಿದೆ. ಸದ್ಯ, ಸ್ಪೇನ್​ನಲ್ಲಿ 2.40 ಲಕ್ಷ ಜನರಿಗೆ ಕೊರೋನಾ ವೈರಸ್​ ಇದೆ.

ತಿಂಗಳ ಹಿಂದೆ ಇಟಲಿಯಲ್ಲಿ ಕೊರೋನಾ ವೈರಸ್​ ಭಾರೀ ಅಟ್ಟಹಾಸ ಮೆರೆದಿತ್ತು. ಈಗ ಆ ರಾಷ್ಟ್ರವನ್ನೇ ಭಾರತ ಹಿಂದಿಕ್ಕಿ ಬಿಟ್ಟಿದೆ. ಶುಕ್ರವಾರ ಕೊರೋನಾ ಪ್ರಕರಣದಲ್ಲಿ ಗಣನೀಯ ಏರಿಕೆ ಕಂಡಿದ್ದರಿಂದ ಇಟಲಿಯನ್ನು ಭಾರತ ಹಿಂದಿಕ್ಕಿತ್ತು. ಇಂಗ್ಲೆಂಡ್​, ರಷ್ಯಾ, ಬ್ರೇಜಿಲ್​ ಹಾಗೂ ಅಮೆರಿಕ ಕೊರೋನಾ ವೈರಸ್​ನಲ್ಲಿ ನಮಗಿಂತ ಮುಂದಿವೆ.

ಮೇ 1ರಿಂದ ಕೇಂದ್ರ ಸರ್ಕಾರ ಅನ್​ಲಾಕ್​ ಜಾರಿಗೆ ತಂದಿದೆ. ಪರಿಣಾಮ ಕೊರೋನಾ ವೈರಸ್​ ಮಿತಿ ಮೀರಿ ಹರಡುತ್ತಿದೆ. ನಿತ್ಯ 9 ಸಾವಿರಕ್ಕೂ ಅಧಿಕ ಕೇಸ್​ಗಳು ಪತ್ತೆ ಆಗುತ್ತಿವೆ

Continue

Related Articles

Leave a Reply

Your email address will not be published. Required fields are marked *

Back to top button
Close
Close