ರಾಯಚೂರು ಜಿಲ್ಲೆ ಸುದ್ದಿ

ಸಿರವಾರ: ಮಾಸ್ಕ್‌ ಕಡ್ಡಾಯ, ಇಲ್ದಿದ್ರೆ ಬೀಳುತ್ತೆ ದಂಡ!

ವರದಿ : ಸಿರಾಜುದ್ದೀನ್ ಬಂಗಾರ್,ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್, ಸಿರವಾರ

ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಸ್ಕ್ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುವ ಆದೇಶವನ್ನು ಸರ್ಕಾರ ಜಾರಿಗೆ ತಂದಿದೆ.

ಪುರಸಭೆ, ಮಾನವಿ,ದೇವದುರ್ಗ ಪಟ್ಟಣ ಪಂಚಾಯತ ಸಿರವಾರ, ಕವಿತಾಳ ಪಂಚಾಯತಗಳಿಗೆ, ಜಿಲ್ಲಾ ಸಹಾಯಕ ಆಯುಕ್ತರ ಕಾರ್ಯಾಲಯ ರಾಯಚೂರು ಉಪವಿಭಾಗದಿಂದ ಆದೇಶಪತ್ರವನ್ನು ಕಳುಹಿಸಲಾಗಿದೆ. ಕೋವಿಡ್-19 ಸಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಜರ್ ಬಳಸುವುದು ಸರ್ಕಾರದಿಂದ ಆದೇಶವಾಗಿರುವದರಿಂದ , ಮಾಸ್ಕ್ ಬಳಸದ ಜನರಿಗೆ ಪ್ರತಿ ದಿನ ಕಡ್ಡಾಯವಾಗಿ ಕನಿಷ್ಟ 100 ದಂಡ ವಿಧಿಸಲೇಬೇಕು ಎಂದು ಆದೇಶಿಸಲಾಗಿದೆ.

ಅಂಗಡಿಯಲ್ಲಿ ಮಾಸ್ಕ್ ಧರಿಸದ, ಸ್ಯಾನಿಟೈಜರ್ ಇಡದೇ ಇರುವ ಮತ್ತು ಸಾಮಾಜಿಕ ಅಂತರಕ್ಕಾಗಿ ಗುರುತು ಮಾಡದವರಿಗೆ ಕಡ್ಡಾಯವಾಗಿ ದಂಢವಿದಿಸಲೇಬೇಕು ಎಂದು ಮುಖ್ಯಾಧಿಕಾರಿಗಳಿಗೆ ಆದೇಶಪತ್ರದಲ್ಲಿ ಸೂಚಿಸಲಾಗಿದೆ.

ಒಂದು ವೇಳೆ ಮುಖ್ಯಾಧೀಕಾರಿಗಳು ಯಾವುದೇ ಶಿಸ್ತಿನ ಕ್ರಮ ಕೈಗೊಳ್ಳದಿದ್ದಲ್ಲಿ, ಮುಖ್ಯಾಧಿಕಾರಿಗಳು ದಂಡ ವಸೂಲಿ ಮಾಡದೇ ಇದ್ದರೆ ಮುಖ್ಯಾಧಿಕಾರಿಳ ವೇತನ ತಡೆ ಹಿಡಯಲಾಗುವುದು ಎಂದು ಆದೇಶ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close