ಕರ್ನಾಟಕ ಸುದ್ದಿ

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್; ಯಾರ್‍ಯಾರಿಗೆ ಟಿಕೆಟ್‌ ನೀಡಲಾಗಿದೆ? ಇಲ್ಲಿದೆ ವಿವರ..

–ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ ಜ್ವಾಲೆ ನ್ಯೂಸ್

ಮೊದಲ ಆದ್ಯತೆ ಪ್ರಭಾಕರ್ ಕೋರೆ, ಎರಡನೇ ಆದ್ಯತೆ ಉದ್ಯಮಿ ಪ್ರಕಾಶ್ ಶೆಟ್ಟಿ ಎನ್ನಲಾಗಿದ್ದು, ಪ್ರಭಾಕರ್ ಕೋರೆ ಫೈನಲ್‌ ಆಗಿಲ್ಲ ಅಂದ್ರೆ ರಮೇಶ್ ಕತ್ತಿ ಹೆಸರು ಪರಿಗಣಿಸುವಂತೆ ಸಭೆ ಶಿಫಾರಸು ಮಾಡಿದೆ. ಇನ್ನೂ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿ ಗಳನ್ನು ಮಾತ್ರ ಕಣಕ್ಕಿಳಿಸಲು ಸಭೆ ತೀರ್ಮಾನ ಮಾಡಿದ್ದು, ಮೂರನೇ ಅಭ್ಯರ್ಥಿ ಯನ್ನು ಹಾಕುವ ಕುರಿತು ಯಾವುದೇ ನಿರ್ಣಯ ಮಾಡಿಲ್ಲ.

ಜೂನ್‌ 19 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಬಿಜೆಪಿ ಅದರಲ್ಲಿ ಇಬ್ಬರನ್ನು ಆಯ್ಕೆಯನ್ನು ಫೈನಲ್ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ಶಿಫಾರಸು ಮಾಡಲು ರಾಜ್ಯ ಬಿಜೆಪಿ ನಾಯಕರು ತೀರ್ಮಾನ ಮಾಡಿದ್ದಾರೆ.

ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬೆಳಗಾವಿ ಭಾಗದ ನಾಯಕ ಪ್ರಭಾಕರ್ ಕೋರೆ, ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಹಾಗೂ ಮಂಗಳೂರು ಭಾಗದ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರು ಫೈನಲ್ ಮಾಡಲಾಗಿದ್ದು, ಈ ಮೂವರಲ್ಲಿ ಇಬ್ಬರ ಹೆಸರನ್ನು ಪ್ರಕಟಿಸುವಂತೆ ಕೇಂದ್ರ ಚುನಾವಣಾ ಸಮಿತಿಗೆ ಸಭೆ ಮನವಿ ಮಾಡಿದೆ.

ಮೊದಲ ಆದ್ಯತೆ ಪ್ರಭಾಕರ್ ಕೋರೆ, ಎರಡನೇ ಆದ್ಯತೆ ಉದ್ಯಮಿ ಪ್ರಕಾಶ್ ಶೆಟ್ಟಿ ಎನ್ನಲಾಗಿದ್ದು, ಪ್ರಭಾಕರ್ ಕೋರೆ ಫೈನಲ್‌ ಆಗಿಲ್ಲ ಅಂದ್ರೆ ರಮೇಶ್ ಕತ್ತಿ ಹೆಸರು ಪರಿಗಣಿಸುವಂತೆ ಸಭೆ ಶಿಫಾರಸು ಮಾಡಿದೆ. ಇನ್ನೂ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿ ಗಳನ್ನು ಮಾತ್ರ ಕಣಕ್ಕಿಳಿಸಲು ಸಭೆ ತೀರ್ಮಾನ ಮಾಡಿದ್ದು, ಮೂರನೇ ಅಭ್ಯರ್ಥಿ ಯನ್ನು ಹಾಕುವ ಕುರಿತು ಯಾವುದೇ ನಿರ್ಣಯ ಮಾಡಿಲ್ಲ.

ಏಕೆಂದರೆ ಮೂರನೇ ಅಭ್ಯರ್ಥಿಗೆ ಆಗುವಷ್ಟು ಮತಗಳು ಇಲ್ಲದೆ ಇರುವುದರಿಂದ ಎರಡೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಭೆ ತೀರ್ಮಾನ ಮಾಡಿದೆ. ಇನ್ನೂ ಈ ಕುರಿತಂತೆ ಮಾತನಾಡಿರುವ ಅರವಿಂದ್ ಲಿಂಬಾವಳಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡಗೆ ಬೆಂಬಲ ನೀಡುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಆದರೆ ಎರಡು ಅಭ್ಯರ್ಥಿಗೆ ಹಾಕಿ ಉಳಿದ ಮತಗಳನ್ನು ಅದೇ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ಹಾಕಿಸುತ್ತೇವೆ ಹೊರತು ಬೇರೆ ಯಾರಿಗೂ ಬೆಂಬಲ ಕೊಡುವ ಬಗ್ಗೆ ಯಾವುದೇ ನಿರ್ಣಯ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಒಟ್ಟಾರೆ ರಾಜ್ಯಸಭೆ ಗೆ ಬಿಜೆಪಿಯಿಂದ ಮೂವರ ಹೆಸರನ್ನು ಕಳುಹಿಸಲಾಗಿದೆ. ಆದರೆ ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ. ಈಗಾಗಲೇ ಹೈಕಮಾಂಡ್ ಮಟ್ಟದಲ್ಲಿ ಇವರ ಹೆಸರುಗಳ ಹೊರತಾಗಿ ಆರ್ಥಿಕ ತಜ್ಞ ಕಾಮತ್, ಇನ್ಪೋಸಿಸ್ ನ ಸುಧಾಮೂರ್ತಿ ಸೇರಿದಂತೆ ಹಲವರ ಹೆಸರುಗಳು ಮುಂಚೂಣಿ ಯಲ್ಲಿವೆ. ಹೀಗಾಗಿ ಅಂತಿಮವಾಗಿ ರಾಜ್ಯ ಬಿಜೆಪಿ ಕಳುಹಿಸಿದ ಹೆಸರು ಬದಲು ಮುಂಚೂಣಿಯಲ್ಲಿರುವ ಈ ವ್ಯಕ್ತಿಗಳ ಹೆಸರು ಪ್ರಕಟ ಆದರೂ ಆಶ್ಚರ್ಯ ಪಡಬೇಕಿಲ್ಲ.

Continue

Related Articles

Leave a Reply

Your email address will not be published. Required fields are marked *

Back to top button
Close
Close