ಅಂತರಾಷ್ಟ್ರೀಯ

ಮಹಾರಾಷ್ಟ್ರದ ಬಳಿಕ ದೆಹಲಿಯಲ್ಲೇ ಅತಿಹೆಚ್ಚು ಆ್ಯಕ್ಟೀವ್ ಕೊರೋನಾ ಕೇಸ್; ಚಿಕಿತ್ಸೆಗೆ ಹೊಸ ನಿಯಮ ಜಾರಿ

— ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ಮುಂಬೈ ಬಳಿಕ‌ ಮಹಾಮಾರಿ ಕೊರೋನಾಗೆ ಅಕ್ಷರಶಃ ನಲುಗಿಹೋಗಿರುವ ದೇಶದ ಅತಿದೊಡ್ಡ ಇನ್ನೊಂದು ನಗರ ಎಂದರೆ ಅದು ರಾಷ್ಟ್ರ ರಾಜಧಾನಿ‌ ದೆಹಲಿ. ದೆಹಲಿಯಲ್ಲಿ ‌ಕೊರೋನಾ ಅಟ್ಟಹಾಸ ಮುಂದುವರೆದಿರುವುದರಿಂದ ಹೆಚ್ಚೆಚ್ಚು ಪರೀಕ್ಷೆ ನಡೆಸುವಂತೆ ಕೇಂದ್ರ ಸರ್ಕಾರ ದೆಹಲಿ ಸರ್ಕಾರಕ್ಕೆ ಸೂಚಿಸಿದೆ.

Posted by Classic Multimedia Computers Sirwawr on Wednesday, December 20, 2017

ಮಹಾರಾಷ್ಟ್ರ ಬಳಿಕ‌ ದೇಶದಲ್ಲೇ ಅತಿಹೆಚ್ಚು ಆ್ಯಕ್ಟೀವ್ ಕೇಸ್ ಇರುವುದು ಕೂಡ ದೆಹಲಿಯಲ್ಲೇ. ಇದು ಕೂಡ ದೆಹಲಿ ಸರ್ಕಾರವನ್ನು ಕಂಗಾಲಾಗಿಸಿದೆ. ಮೊನ್ನೆ ಒಂದೇ ದಿನ ದೆಹಲಿಯಲ್ಲಿ 1,513 ಪ್ರಕರಣಗಳು ಕಾಣಿಸಿಕೊಂಡಿವೆ. ಇದು‌ ದೆಹಲಿಯಲ್ಲಿ ‌ದಿನವೊಂದರಲ್ಲಿ ಅತಿಹೆಚ್ಚು ಪ್ರಕರಣಗಳು ಕಂಡುಬಂದ ದಾಖಲೆಯಾಗಿದೆ. ಇದರಿಂದ ದೆಹಲಿಯ ಕೊರೋನಾ ಸೋಂಕು ಪೀಡಿತರ ಸಂಖ್ಯೆ 25,000ವನ್ನು ದಾಟಿದೆ. ಅಲ್ಲದೆ ದೆಹಲಿಯಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 650 ದಾಟಿದೆ.

ಈ ಬೆಳವಣಿಗೆ ಆಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಡಾ.‌ ಹರ್ಷವರ್ಧನ್ ದೆಹಲಿ ಸರ್ಕಾರಕ್ಕೆ ಕೊರೋನಾ ಪರೀಕ್ಷೆಗಳನ್ನು ತೀವ್ರಗೊಳಿಸುವಂತೆ ತಿಳಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ‌ಅರವಿಂದ‌ ಕೇಜ್ರಿವಾಲ್ ಕೂಡಲೇ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ಸಭೆ ನಡೆಸಿ ಕೊರೋನಾ ಚಿಕಿತ್ಸೆ ಕೊಡುವ ವಿಷಯಕ್ಕೆ ಸಂಬಂಧಿಸಿಸಂತೆ ಹೊಸ ನಿಯಮಾವಳಿಗಳನ್ನು ರೂಪಿಸಿದ್ದಾರೆ.

ಗುಣಲಕ್ಷಣಗಳು ಅಥವಾ ಅದಕ್ಕೆ ಸಂಬಂಧಿಸಿದ ತೊಂದರೆಯುಳ್ಳವರು ಸಹಾಯವಾಣಿಗೆ ಕರೆಮಾಡಿದ ಹತ್ತಿರದ ಆಸ್ಪತ್ರೆಯು 15 ನಿಮಿಷದಲ್ಲಿ ಅವರ ಮನೆ ಬಳಿಗೆ ಆಂಬುಲೆನ್ಸ್ ಕಳುಹಿಸಬೇಕು. 1 ಗಂಟೆಯೊಳಗೆ ಪರೀಕ್ಷೆ ಮಾಡಿ ಚಿಕಿತ್ಸೆ ಆರಂಭಿಸಬೇಕು. ಅವರಿಗೆ ಅಗತ್ಯ ಇರುವ ಆಹಾರ, ನೀರು, ಔಷಧಿಗಳೆಲ್ಲವನ್ನೂ ಆಸ್ಪತ್ರೆಯೇ ಮಾಡಬೇಕು. ಒಂದೊಮ್ಮೆ ಹತ್ತಿರದ ಆಸ್ಪತ್ರೆಯಲ್ಲಿ ಬೆಡ್ ಇಲ್ಲದಿದ್ದರೆ ಇನ್ನೊಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವ್ಯವಸ್ಥೆ ಮಾಡುವುದು ಕೂಡ ಹತ್ತಿರದ ಆಸ್ಪತ್ರೆಯ ಕರ್ತವ್ಯವಾಗಿದೆ ಎಂದು ಹೊಸ ನಿಯಮ ಮಾಡಲಾಗಿದೆ.

ದೇಶದಲ್ಲೇ ಅತಿಹೆಚ್ಚು ಕೊರೋನಾ ಇರುವ ರಾಜ್ಯಗಳ ಪೈಕಿ ದೆಹಲಿ 4ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close