ಕರ್ನಾಟಕ ಸುದ್ದಿ

ಲಾರಿ ಮಾರಿ ಕೊರೋನಾ ಸಂತ್ರಸ್ತರಿಗೆ ನೆರವಾದ ವ್ಯಕ್ತಿ; ಸಾವಿರಾರು ಜನರಿಗೆ ಆಹಾರ ವಿತರಿಸಿ ಹಸಿವು ನೀಗಿಸಿದ ಲಾರಿ ಮಾಲೀಕ

–ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಲಾರಿ‌ ಮಾಲೀಕನೋರ್ವ ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಬಡ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಸಮಾಜ ಸೇವೆಗಾಗಿ ತನ್ನದೆ ಆದ  ಅಭಿಮಾನಿ ಬಳಗವನ್ನು ಸಜ್ಜುಗೊಳಿಸಿಕೊಂಡು ಸಂಕಷ್ಟದಲ್ಲಿರುವ ಜನರ ನೋವಿಗೆ ಮಿಡಿಯುತ್ತಿದ್ದಾರೆ. ಇನ್ನೊಂದು ಅಚ್ಚರಿಯ ವಿಷಯ ಏನೆಂದರೆ,  ಜನರ ಕಷ್ಟಕ್ಕಾಗಿ ಮಿಡಿದ ಇವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಲಾರಿಯನ್ನು ಕೂಡ ಮಾರಿ ಜನ ಸೇವೆಗೆ ಮುಂದಾಗಿದ್ದಾರೆ.

ಅಂದ ಹಾಗೆ, ಇವರ ಹೆಸರು ಬಿ.ರೇವಣ್ಣ ಅಂತ. ಇವರು ಪಾಂಡವಪುರ ತಾಲೂಕಿನ ಲಕ್ಷ್ಮಿಸಾಗರದ ಗ್ರಾಮದವರು. ಚಿಕ್ಕ ವಯಸ್ಸಿನಿಂದಲೇ ಲಾರಿಯಲ್ಲಿ ಕಲ್ಲು ಮರಳು ಸಾಗಾಟ ಮಾಡುತ್ತಾ ದುಡಿದು ಮೇಲೆ ಬಂದ ವ್ಯಕ್ತಿಯಾಗಿದ್ದಾರೆ. ಆ ಕಾರಣದಿಂದಲೇ ಇಂದು ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷರಾಗಿದ್ದಾರೆ. ತಮ್ಮ ತಾಲೂಕಿನ ಮೇಲಿನ‌ ಅಭಿಮಾನದ ಕಾರಣದಿಂದ ಕೊರೋನಾ ಸಂಕಷ್ಟದ ವೇಳೆ ಇವರು ಕೋಟ್ಯಾಂತರ ರೂ ಖರ್ಚು ಮಾಡಿ ತಾಲೂಕಿನಲ್ಲಿ ಕೊರೋನಾ ಸಂಕಷ್ಟದಲ್ಲಿರುವ  ಬಡವರ ಸೇವೆಗೆ ಮುಂದಾಗಿದ್ದಾರೆ

ಇವರು ತಾಲೂಕಿನಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಕಟ್ಟಿ ಕೊಂಡು ಕ್ಷೇತ್ರದಾದ್ಯಂತ ಬಡ ಜನರಿಗೆ, ಶ್ರಮಿಕ ವರ್ಗದವರಿಗೆ, ಆಶಾ ಕಾರ್ಯಕರ್ತೆಯರು ಸೇರಿದಂತೆ ಅಂಗವಿಕಲರು ಹಾಗೂ ಇನ್ನಿತರ ಕಷ್ಟದಲ್ಲಿರುವ ಜನರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

30 ಸಾವಿರ ಬಡ ಜನರಿಗೆ ಇದುವರೆಗೂ ಫುಡ್ ಕಿಟ್ ವಿತರಣೆ ಮಾಡಿದ್ದು,  ತಾಲೂಕಿನ 1 ಲಕ್ಷ ಜನರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದ್ದಾರೆ. ಇದಲ್ಲದೇ ತಾಲೂಕಿನ ಆಶಾ ಕಾರ್ಯಕರ್ತೆಯರು ಸೇರಿದಂತೆ ತಾಲೂಕಿನ ಕೊರೋನಾ ವಾರಿಯರ್ಸ್ ಗಳ ಸೇವೆಯನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಸೇವೆಯನ್ನು ಶ್ಲಾಘಿಸಿರುವುದರ ಜೊತೆಗೆ ಅವರಿಗೂ ಕೂಡ ಕೈಲಾದ ಕೈಲಾದ ಸಹಾಯ ಮಾಡಿದ್ದಾರೆ. ಕಷ್ಟದಿಂದಲೇ ಬೆಳೆದ ಈ ವ್ಯಕ್ತಿ ಇಂದು ಸಂಕ ಷ್ಟಕ್ಕೆ ನೆರವಾಗುವ ಮಟ್ಟಿಗೂ ಬೆಳೆದಿದ್ದಾರೆ. ಜನರ ಸೇವೆಗಾಗಿ ತಮ್ಮ ಲಾರಿಯನ್ನು ಕೂಡ ಮಾರಿದ್ದು ಅದ್ರಲ್ಲಿ  ಜನರ ಸೇವೆಗೆ ಮುಂದಾಗಿದ್ದಾರೆ.

ಒಟ್ಟಾರೆ ಪಾಂಡವಪುರ ತಾಲೂಕಿನ ಲಕ್ಷ್ಮಿ ಸಾಗರದ ಬಿ. ರೇವಣ್ಣನವರ ಈ ಸಾಮಾಜಿಕ ಸೇವೆಯನ್ನು ಕಂಡ ತಾಲೂಕಿನ ಜನರು ಇವರನ್ನು ಮತ್ತು ಇವರ ಸಾಮಾಜಿಕ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದು ಭವಿಷ್ಯದಲ್ಲಿ ಕ್ಷೇತ್ರದ ಜನ ನಾಯಕನಾಗುವಂತೆ  ಹರಸಿ ಹಾರೈಸುತ್ತಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close