ದೇಶದ-ವಿದೇಶ

ಲಾಕ್‌ಡೌನ್‌ ವೇಳೆ ಪೂರ್ಣ ವೇತನ ನೀಡದ ಕಂಪೆನಿಗಳ ವಿರುದ್ಧ ಸರ್ಕಾರ ಬಲವಂತದ ಕ್ರಮ ಜರುಗಿಸುವಂತಿಲ್ಲ; ಸುಪ್ರೀಂ

–ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ಲಾಕ್‌ಡೌನ್‌ ನಂತಹ ಪರಿಸ್ಥಿತಿಯಲ್ಲಿ ಸರ್ಕಾರ ಪರಿಹಾರವನ್ನು ನೀಡಬೇಕು, ಈ ಕುರಿತು ಚರ್ಚೆ ನಡೆಸಬೇಕು. ಅಲ್ಲದೆ, ಲಾಕ್‌ಡೌನ್ ಅವಧಿಯ ವೇತನ ಪಾವತಿ ಮತ್ತು ಕೈಗಾರಿಕೆಗಳನ್ನು ರಕ್ಷಿಸುವ ನಡುವೆ ಸಮತೋಲನವನ್ನು ಸಾಧಿಸಬೇಕಾಗಿದೆ ಎಂದು ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿತ್ತು.

ಲಾಕ್‌ಡೌನ್ ಅವಧಿಯಲ್ಲಿ ನೌಕರರಿಗೆ ಪೂರ್ಣ ವೇತನವನ್ನು ಪಾವತಿಸಬೇಕು ಮಾರ್ಚ್.29 ರಂದು ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ, ಈ ಸುತ್ತೋಲೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಗಳು ಮತ್ತು ಉದ್ಯೋಗದಾತರ ವಿರುದ್ಧ ಸರ್ಕಾರ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಕೇಂದ್ರ ಸಕಾರಕ್ಕೆ ಮೇ.15ರಂದು ಆದೇಶಿಸಿದ್ದ ಸುಪ್ರೀಂ ಈ ಆದೇಶವನ್ನು ಇಂದು ಜೂನ್‌.12ರ ವರೆಗೆ ವಿಸ್ತರಿಸಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರ್ಚ್.29 ರಂದು ಸುತ್ತೋಲೆ ಹೊರಡಿಸಿದ್ದ ಗೃಹ ಸಚಿವಾಲಯ ತನ್ನ ಸುತ್ತೋಲೆಯಲ್ಲಿ, “ಸಾಂಕ್ರಾಮಿಕ ರೋಗದ ಸವಾಲಿನ ಪರಿಸ್ಥಿತಿಯ ಮಧ್ಯೆ ನೌಕರರನ್ನು ಕೆಲಸದಿಂದ ವಜಾಗೊಳಿಸಬೇಡಿ ಅಥವಾ ವೇತನವನ್ನು ಕಡಿತ ಮಾಡಬೇಡಿ. ಎಲ್ಲಾ ಉದ್ಯೋಗದಾತರೂ ತಮ್ಮ ಕಾರ್ಮಿಕರಿಗೆ ಪೂರ್ಣ ವೇತನ ಪಾವತಿಸಿ ಸಹಕರಿಸಿ” ಎಂದು ಕೇಳಿಕೊಂಡಿತ್ತು. ಅಲ್ಲದೆ, ನಿಯಮವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು.

ಈ ಎಚ್ಚರಿಕೆಯ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್ ಕೆ ಕೌಲ್ ಮತ್ತು ಎಂ ಆರ್ ಷಾ ಅವರ ತ್ರಿಸದಸ್ಯ ನ್ಯಾಯಪೀಠವು ಕೇಂದ್ರ ಗೃಹ ಇಲಾಖೆಯ ಸುತ್ತೋಲೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. “ಕಾರ್ಮಿಕರಿಗೆ ಶೇ.100 ರಷ್ಟು ವೇತನ ನೀಡದ ಉದ್ಯೋಗದಾತರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

ಇದು ಕಳವಳಕಾರಿಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಪರಿಹಾರವನ್ನು ನೀಡಬೇಕು, ಈ ಕುರಿತು ಚರ್ಚೆ ನಡೆಸಬೇಕು. ಅಲ್ಲದೆ, ಲಾಕ್‌ಡೌನ್ ಅವಧಿಯ ವೇತನ ಪಾವತಿ ಮತ್ತು ಕೈಗಾರಿಕೆಗಳನ್ನು ರಕ್ಷಿಸುವ ನಡುವೆ ಸಮತೋಲನವನ್ನು ಸಾಧಿಸಬೇಕಾಗಿದೆ” ಎಂದು ಕಿವಿಮಾತು ಹೇಳಿತ್ತು.

ಈ ಕುರಿತು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯಲ್ಲಿ,”ಕಾರ್ಮಿಕರಿಗೆ ವೇತನ ಇಲ್ಲದಿದ್ದರೆ ಪರಿಸ್ಥಿತಿ ಏನಾಗಬಹುದು? ಎಂಬ ಆತಂಕ ನ್ಯಾಯಾಲಕ್ಕೂ ಇದೆ. ಆದರೆ, ಉದ್ಯಮ ಅಥವಾ ಉದ್ಯೋಗದಾತರಿಗೆ ಹಣ ಪಾವತಿ ಮಾಡಲಾಗದ ಪರಿಸ್ಥಿತಿಯೂ ಇರಬಹುದು. ಆದ್ದರಿಂದ ಈ ಎರಡರ ನಡುವೆ ಸಮತೋಲನ ಅಗತ್ಯ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್‌ ತಮ್ಮ ವಾದ ಮಂಡಿಸಿ, “ಲಾಕ್‌ಡೌನ್‌ ನಂತರ ಉದ್ಯೋಗದಾತರು ಅಥವಾ ಉದ್ಯಮಗಳು ತಮ್ಮ ಕಾರ್ಮಿಕರಿಗೆ ಸಂಪೂರ್ಣ ವೇತನ ನೀಡಿದರೆ ಈ ಮೂಲಕ ಕಾರ್ಮಿಕರ ವಲಸೆಯನ್ನು ತಡೆಯಬಹುದು ಎಂಬುದು ಕೇಂದ್ರ ಸರ್ಕಾರದ ನಿರ್ಧಾರವಾಗಿತ್ತು. ಇದೇ ಕಾರಣಕ್ಕೆ ಈ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು” ಎಂದು ವಿವರಿಸಿದ್ದರು.

ಈ ವೇಳೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರನ್ನು ಪ್ರಶ್ನಿಸಿದ್ದ ನ್ಯಾಯಾಲಯ, “ಕೈಗಾರಿಕಾ ವಿವಾದ ಕಾಯ್ದೆಯ ಕೆಲವು ನಿಬಂಧನೆಗಳನ್ನು ಜಾರಿಗೆ ತರಲಾಗಿಲ್ಲ. ಈ ಅಂಶವನ್ನು ಗಮನಿಸಿದರೆ ಉದ್ಯೋಗಿಗಳಿಗೆ ಶೇ.100 ರಷ್ಟು ವೇತನವನ್ನು ಪಾವತಿಸದಿದ್ದಕ್ಕಾಗಿ ಉದ್ಯೋಗದಾತರನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರ ಸರ್ಕಾರಕ್ಕೆ ಇದೆಯೇ?” ಎಂದು ನ್ಯಾಯಪೀಠ ಕೇಂದ್ರವನ್ನು ಕೇಳಿದೆ.

ಅಲ್ಲದೆ, ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ತಮ್ಮ ಉದ್ಯೋಗಿಗಳಿಗೆ ಪೂರ್ಣ ವೇತನ ನೀಡಲು ಸಾಧ್ಯವಾಗದ ಕಂಪನಿಗಳು ಮತ್ತು ಉದ್ಯೋಗದಾತರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮೇ 15 ರಂದು ನೀಡಿದ್ದ ಆದೇಶವನ್ನು ಮತ್ತಷ್ಟು ಕಾಲ ವಿಸ್ತರಿಸಿನ ಆದೇಶಿಸಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close