ಕರ್ನಾಟಕ ಸುದ್ದಿ

‘ಮೋದಿ ಸರ್ಕಾರದಿಂದ ದೇಶದ ಸ್ಥಿತಿ ಅಧೋಗತಿ ತಲುಪಿದೆ’ – ಕಾಂಗ್ರೆಸ್​ ಶಾಸಕ ಕೈವೈ ನಂಜೇಗೌಡ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಆಡಳಿತದಿಂದ ದೇಶದ ಸ್ಥಿತಿ ಅಧೋಗತಿ ತಲುಪಿದೆ ಎಂದು ಮಾಲೂರು ಕಾಂಗ್ರೆಸ್​ ಶಾಸಕ ಕೆವೈ ನಂಜೇಗೌಡ ಕಿಡಿಕಾರಿದ್ದಾರೆ. ಇಂದು ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡುವ ವೇಳೆ ನಂಜೇಗೌಡ ಹೀಗೆ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದರು.

ಇನ್ನು, ಕೇಂದ್ರ ಸರ್ಕಾರ ಚುನಾವಣೆ ಪ್ರಚಾರದಲ್ಲಿ ಹೇಳಿದಂತೆ ನಡೆದುಕೊಂಡಿಲ್ಲ. ಇವರ ಆಡಳಿತದಿಂದಲೇ ದೇಶದ ಅರ್ಥ ವ್ಯವಸ್ಥೆ ಹಾಳಾಗಿದೆ. ಪ್ರಪಂಚದಲ್ಲಿ ಭಾರತ ದೇಶದ ಸ್ಥಾನ ಮಾನ ಕುಸಿದಿದೆ.  ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎಂದರು ಕಾಂಗ್ರೆಸ್​ ಶಾಸಕ ಕೈವೈ ನಂಜೇಗೌಡ.

ಕೊರೋನಾ ಸಂದರ್ಭವನ್ನು ಕೇಂದ್ರ ಸರ್ಕಾರವೂ ಸರಿಯಾಗಿ ನಿಭಾಯಿಸಿದ ಕಾರಣದಿಂದಾಗಿ ವಲಸೆ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಇದು ದೇಶದ ಸದ್ಯದ ಸ್ಥಿತಿ. ಬಿಜೆಪಿ ನಾಯಕರು ಮೋದಿ ಸರ್ಕಾರವನ್ನು ಹೊಗಳುವುದರಲ್ಲಿ ಅರ್ಥವಿಲ್ಲ. ಇನ್ನಾದರೂ ಕೇಂದ್ರ ಚುನಾವಣೆ ನೀಡಿದ ಸಂದರ್ಭದಲ್ಲಿ ಭರವಸೆಯಂತೆ ಬಡವರ ಪರ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ್ದಕ್ಕೆ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ನಾಯಕರು ಕಾರ್ಯಕ್ರಮ ಮಾಡಿದ್ದರು. ಮೊದಲ ಅವಧಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳ ಕಾರಣಕ್ಕೆ ಜನ ಮತ್ತೆ ಮೋದಿಯವರನ್ನು ಆಯ್ಕೆ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ನಾಯಕರು ಹಾಡಿಹೊಗಳಿದ್ದರು. ಇದಕ್ಕೆ ಹೀಗೆ ನಂಜೇಗೌಡ ತಿರುಗೇಟ ನೀಡಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close