ಕರ್ನಾಟಕ ಸುದ್ದಿ

ಬ್ರೆಕೀಂಗ್ ನ್ಯೂಸ್ ; ಕೋವಿಡ್​​-19 ರಿಪೋರ್ಟ್ ಮುಗಿಯುವ ಮುನ್ನವೇ ಮನೆಗೆ ಕಳಿಸಿದ್ದ ತಾಯಿ ಮಗನಿಗೆ ಕೊರೋನಾ: ಜೆಪಿ ನಗರದ ರಾಗಿಗುಡ್ಡ ಸ್ಲಂ ಸೀಲ್​ಡೌನ್​​

Posted By: Sirajuddin Bangar

Source: NS18

ಬೆಂಗಳೂರು(ಜೂ.04): ಕೋವಿಡ್​​-19 ರಿಪೋರ್ಟ್​ ಬರುವ ಮುನ್ನವೇ ಮನೆಗೆ ಕಳಿಸಿದ್ದ ತಾಯಿ ಮಗನಿಗೆ ಪಾಸಿಟಿವ್​​​ ಪತ್ತೆಯಾದ ಘಟನೆ ಜೆಪಿ ನಗರದ ರಾಗಿಗುಡ್ಡ ಸ್ಲಂನಲ್ಲಿ ನಡೆದಿದೆ. ಈ ಇಬ್ಬರನ್ನು 7 ದಿನ ಕ್ವಾರಂಟೈನ್​​ನಲ್ಲಿಡದೇ ರಿಪೋರ್ಟ್​ ಬರುವ ಮುಂಚೆಯೇ ಮನೆಗೆ ಕಳಿಸಿದ ಅಧಿಕಾರಿಗಳ ಯಡವಟ್ಟಿನಿಂದಾಗಿ ಈಗ ಇಡೀ ಏರಿಯಾಗೆ ಕೊರೋನಾ ಸೋಂಕು ವಕ್ಕರಿಸಿಕೊಳ್ಳುವ ಭಯ ಶುರುವಾಗಿದೆ. ಹೀಗಾಗಿ ಜೆಪಿ ನಗರದ ರಾಗಿಗುಡ್ಡ ಏರಿಯಾ ಸೀಲ್​ಡೌನ್​​ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವ್​​ ಕೇಸ್​​ ಪತ್ತೆಯಾದ ಮತ್ತೊಂದು ಸ್ಲಂ ಈಗ ಜೆಪಿ ನಗರದ ರಾಗಿಗುಡ್ಡ. ಇದೇ ಸ್ಲಂನ ಇಬ್ಬರು ದೆಹಲಿಗೆ ಹೋಗಿದ್ದರು. ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದ ತಾಯಿ ಮಗನನ್ನು ಕೋವಿಡ್​​-19 ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಬಳಿಕ ಹೆಬ್ಬಾಳದ ಬಿಸಿಎಂ ಹಾಸ್ಟೆಲ್​​ನಲ್ಲಿ ಕ್ವಾರಂಟೈನ್​​ನಲ್ಲಿ ಇಡಲಾಗಿತ್ತು. ಆದರೆ, ಕ್ವಾರಂಟೈನ್​​ ಮುಗಿಯುವ ಮುನ್ನವೇ ಅಧಿಕಾರಿಗಳು ಇವರನ್ನು ಮನೆಗೆ ಕಳಿಸಿದ್ದರು. ಈಗ ಇಬ್ಬರಿಗೂ ಕೊರೋನಾ ಪಾಸಿಟಿವ್​​ ಪತ್ತೆಯಾಗಿದೆ.

ಇನ್ನು, ಮನೆಗೆ ಕಳಿಸುವ ವೇಳೆ ಇಬ್ಬರ ಸ್ವಾಬ್ ತೆಗೆಯಲಾಗಿತ್ತು. ರಾಜ್ಯ ಸರ್ಕಾರದ ನಿಯಮದಂತೆಯೇ ರಿಪೋರ್ಟ್ ಬರುವ ಮುನ್ನವೇ ಅಧಿಕಾರಿಗಳು ಇಬ್ಬರನ್ನು ಮನಗೆ ಕಳಿಸಿದ್ದರು. ಇವರು ತಮಗ್ಯಾವ ಕೊರೋನಾವೂ ಬಂದಿಲ್ಲ ಎಂದು ಮನೆಯ ಎದುರು ಇರುವ ಪುಟ್ಟಪುಟ್ಟ ಮಕ್ಕಳನ್ನ ಮುದ್ದಾಡಿದ್ದಾರೆ.  ಈಗ ತಾಯಿ ಮಗನಿಗೆ ಪಾಸಿಟಿವ್ ಬಂದಿರುವುದು ಇಡೀ ಏರಿಯಾದ ಜನರಲ್ಲಿ ಆತಂಕ ಮೂಡಿಸಿದೆ.

ಇನ್ನು, ತಾಯಿ ಮಗ ಇಬ್ಬರು ಇಡೀ ಸ್ಲಂ ಓಡಾಡಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಇಡೀ ಸ್ಲಂ ಸೀಲ್​ಡೌನ್​ ಮಾಡಿದ್ದಾರೆ. ಸರ್ಕಾರದ ಯಡವಟ್ಟಿನಿಂದಲೇ ಈಗ ಮತ್ತೊಂದು ಸ್ಲಂ ಸೀಲ್​ಡೌನ್​ ಮಾಡಲಾಗಿದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close