ಅಂತರಾಷ್ಟ್ರೀಯಸಿನಿಮಾ ಸುದ್ದಿ

ಬಾಲಿವುಡ್ ಲೆಜೆಂಡರಿ ಸಿನಿಮಾ ನಿರ್ದೇಶಕ ಬಸು ಚಟರ್ಜಿ ವಿಧಿವಶ, ಅಂತ್ಯಕ್ರಿಯೆ

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ಬಾಲಿವುಡ್ ನ ಖ್ಯಾತ ಹಾಗೂ ದಂತಕಥೆ ಎನ್ನಿಸಿಕೊಂಡಿರುವ ನಿರ್ದೇಶಕ ಬಸು ಚಟರ್ಜಿ(90ವರ್ಷ) ಗುರುವಾರ ವಿಧಿವಶರಾಗಿದ್ದಾರೆ ಎಂದು ವರದಿ ತಿಳಿಸಿದೆ.

ರಜನಿಗಂಧ, ಚೋಟಿ ಸಿ ಬಾತ್, ಖಟ್ಟಾ ಮೀಠಾ, ಬಾತೋನ್ ಬಾತೋನ್ ಮೈನ್, ಸೌಕೀನ್ ಸೇರಿದಂತೆ ಹಲವಾರು ಕ್ಲಾಸಿಕ್ ಚಿತ್ರಗಳ ನಿರ್ದೇಶಕರಾಗಿ ಹೆಸರಾಗಿದ್ದವರು ಬಸು ಚಟರ್ಜಿ.

ಖ್ಯಾತ ನಿರ್ದೇಶಕ ಬಸು ಚಟರ್ಜಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಐಎಫ್ ಟಿಡಿಎ ಅಧ್ಯಕ್ಷ ಅಶೋಕೆ ಪಂಡಿತ್, ಇಂದು ಮಧ್ಯಾಹ್ನ 2ಗಂಟೆಗೆ ಮುಂಬೈನ ಸಾಂತಾ ಕ್ರೂಝ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ.

ಲೆಜೆಂಡರಿ ಚಿತ್ರ ನಿರ್ಮಾಪಕ ಚಟರ್ಜಿ ಅವರ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಾಪ, ನೆನಪುಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿ ವಿವರಿಸಿದೆ.

Tags
Continue

Related Articles

Leave a Reply

Your email address will not be published. Required fields are marked *

Back to top button
Close
Close