Uncategorized

ನಾಳೆ ಸಂಭವಿಸಲಿದೆ ವರ್ಷದ ಎರಡನೇ ಚಂದ್ರಗ್ರಹಣ; ಇದರ ವಿಶೇಷತೆ ಏನು ಗೊತ್ತೇ?

–ಸಿರಾಜುದ್ದೀನ್ ಬಂಗಾರ್ ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ನಾಳೆ ಅಂದರೆ ಜೂನ್ 5ರಂದು ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸಲಿದೆ. ಈ ಚಂದ್ರಗ್ರಹಣ ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ.  ನಾಳೆ ಸಂಭವಿಸುವ ಚಂದ್ರಗ್ರಹಣ ಪೂರ್ಣ ಅಥವಾ ಭಾಗಶಃ ಚಂದ್ರಗ್ರಹಣವಲ್ಲ. ಇದು ಆರಂಭದ ಎರಡು ಗ್ರಹಣಗಳಂತೆ ನೆರಳು ಚಂದ್ರಗ್ರಹಣವಾಗಿರುತ್ತದೆ. ಹೀಗಾಗಿ ಈ ಗ್ರಹಣವು ಭಾರತದಲ್ಲಿ ಅತೀ ಹೆಚ್ಚು ಪ್ರಭಾವ ಬೀರುವುದಿಲ್ಲ ಎನ್ನಲಾಗುತ್ತಿದೆ.

ಚಂದ್ರ ಗ್ರಹಣ ಸಂಭವಿಸುವ ಸಮಯ

ಮಾಸದ ಪ್ರಕಾರ ಜೂನ್​ 5ರ ರಾತ್ರಿ 11.16ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಲಿದೆ. ಈ ಗ್ರಹಣ ಅಂತ್ಯಗೊಳ್ಳುವುದು ಮಧ್ಯರಾತ್ರಿ 2.34ಕ್ಕೆ ಎನ್ನಲಾಗಿದೆ. ಮಧ್ಯರಾತ್ರಿ 12.54ಕ್ಕೆ ಪೂರ್ಣ ಚಂದ್ರಗ್ರಹಣ ಗೋಚರವಾಗಲಿದೆ. ಈ ವೇಳೆಯಲ್ಲಿ ಭಾರತದಲ್ಲಿ ಚಂದ್ರಗ್ರಹಣವನ್ನು ನೋಡಬಹುದಾಗಿದೆ.

2020ರ ಮೊದಲ ಚಂದ್ರಗ್ರಹಣ ಜನವರಿ 10ರಂದು ಸಂಭವಿಸಿತ್ತು. ನಾಳೆ ಮತ್ತೊಂದು ಚಂದ್ರಗ್ರಹಣ ನಡೆಯುತ್ತದೆ. ಜೂನ್ 21ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಇನ್ನು, ಇದೇ ವರ್ಷ ಡಿಸೆಂಬರ್ 14ರಂದು ಮತ್ತೊಂದು ಸೂರ್ಯಗ್ರಹಣ ಸಂಭವಿಸಲಿದೆ.

ಇನ್ನು ಗ್ರಹಣದ ಸಮಯದಲ್ಲಿ ಚಂದ್ರನು ಅರ್ಧಾಕಾರದಲ್ಲಿ ಕಾಣುವುದಿಲ್ಲ. ಏಕೆಂದರೆ ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಚಂದ್ರ ತನ್ನ ಪೂರ್ಣ ಗಾತ್ರದಲ್ಲೇ ಚಲಿಸುತ್ತಾನೆ.

ಈ ಚಂದ್ರಗ್ರಹಣ ಸಂಭವಿಸುವ ವೇಳೆ ದೇವಸ್ಥಾನಗಳನ್ನು ಬಂದ್ ಮಾಡುವುದಾಗಲಿ ಅಥವಾ ಆಹಾರ ಸೇವನೆಯ ಮೇಲಿನ ನಿರ್ಬಂಧವಾಗಲಿ ಇರುವುದಿಲ್ಲ. ಗ್ರಹಣ ಸಮಯದಲ್ಲಿ ಆಹಾರವನ್ನೂ ಸೇವಿಸಬಹುದಾಗಿದೆ. ಯಾವುದೇ ಧಾರ್ಮಿಕ ನಿಷೇಧ ಇರುವುದಿಲ್ಲ.

ಎಲ್ಲೆಲ್ಲಿ ಚಂದ್ರಗ್ರಹಣ

ಈ ಚಂದ್ರಗ್ರಹಣವು ದಕ್ಷಿಣ ಅಮೆರಿಕಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಕಾಣಿಸಿಕೊಳ್ಳಲಿದೆ.

ಅರೆನೆರಳಿನ ಚಂದ್ರಗ್ರಹಣ

ಗ್ರಹಣ ಸಂಭವಿಸುವ ಮೊದಲು ಚಂದ್ರನು ಭೂಮಿಯ ನೆರಳನ್ನು ಪ್ರವೇಶಿಸುತ್ತಾನೆ. ಇದನ್ನು ಚಂದ್ರ ಮಾಲಿನ್ಯ (ಪೆನುಂಬ್ರಾ) ವೆಂದು ಕರೆಯಲಾಗುತ್ತದೆ. ಚಂದ್ರನು ಈ ರೀತಿಯಾಗಿ ಭೂಮಿಯ ನೆರಳನ್ನು ಪ್ರವೇಶಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close