ರಾಯಚೂರು ಜಿಲ್ಲೆ ಸುದ್ದಿಸಿರವಾರ

ಗೋವಿಂದ ಕಾರಜೋಳ ಅವರು ಮೀಸಲಾತಿ ಕುರಿತು ಗೊಂದಲ ಹೇಳಿಕೆ ನೀಡಿದ್ದು,ರಾಜ್ಯದ ಜನತೆಗೆ ಸ್ಪಷ್ಟನೆ ನೀಡಲು ಒತ್ತಾಯ

ವರದಿ: ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ

ಸಿರವಾರ ಜೂ.06 : ಪರಿವಾರ, ತಳವಾರ ಮೀಸಲಾತಿ ಕುರಿತು ನೀಡಿದ ಗೊಂದಲ ಹೇಳಿಕೆಯನ್ನು ಸಮಾಜ ಕಲ್ಯಾಣ ಸಚಿವ ಹಾಗೂ ಉಪ ಮುಖ್ಯಮಂತ್ರಿಯಾದ ಗೋವಿಂದ ಕಾರಜೋಳ ತಕ್ಷಣ ವಾಪಸ್ಸು ಪಡೆಯಬೇಕು ಹಾಗೂ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ವಾಲ್ಮೀಕಿ ಯುವಕರ ಸಂಘ ತಾಲೂಕು ಘಟಕ ಸಿರವಾರ ಅಧ್ಯಕ್ಷರಾದ ರಂಗನಾಥ ನಾಯಕ ಒತ್ತಾಯಿಸಿದರು.

ಇಂದು ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದೆರಡು ದಿನಗಳ ಹಿಂದೆ ಉಪಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಸಚಿವರಾದ ಗೋಂವಿದ ಕಾರಜೋಳ ವಿಜಯಪುರದಲ್ಲಿ ನಾಯಕ ಸಮಾಜದ ಪರ್ಯಾಯ ಪದಗಳಾದ ಪರಿವಾರ,ತಳವಾರ ಉಪಜಾತಿಗಳನ್ನು ರಾಜ್ಯದ ಎಲ್ಲಾ ಅಂಬಿಗರು ಸಹ ಪಡೆಯಬಹುದು ಎಂದು ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಅತ್ಯಂತ ಗೊಂದಲ್ಲಕ್ಕೆ ಕಾರಣವಾಗಿದ್ದು ಈ ಹೇಳಿಕೆಯನ್ನು ವಾಪಸ್ಸು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಗೋವಿಂದ ಕಾರಜೋಳ ಅವರು ಹಿರಿಯರು ಮತ್ತು ರಾಜಕೀಯ ಕ್ಷೇತ್ರದಲ್ಲಿ ಬಹಳ ಶ್ರಮವಹಿಸಿ ಮೇಲೆ ಬಂದವರು, ತಳ ಸಮುದಾಯದಿಂದ ಬಂದ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಜಾತಿ ರಾಜಕಾರಣ ಮಾಡಿದ್ದು, ತೀರಾ-ತೀರಾ ಕಡಿಮೆ ಅನ್ನುವುದು ಹತ್ತೀರದಿಂದ ಬಲ್ಲವರಿಗೆ ಮಾತ್ರ ಗೊತ್ತಿದೆ. ಆದರೆ ಎಸ್.ಟಿ ವಿಷಯದಲ್ಲಿ ಅದರಲ್ಲೂ ತಳವಾರ, ಪರಿವಾರ ವಿಷಯದಲ್ಲಿ ಕಾರಜೋಳ ಅವರು ಆಡಿರುವ ಮಾತುಗಳನ್ನು ನೋಡಿದರೆ ಅವರಿಗೆ ಇದರ ಬಗ್ಗೆ ಜ್ಞಾನದ ಕೊರತೆಯೋ ಅಥವಾ ಉದ್ದೇಶಪೂರ್ವಕವಾಗಿ ಮಾತನಾಡಿದ್ದಾರೆಯೋ ಅನ್ನುವ ಅನುಮಾನ ಉಂಟಾಗಿದೆ. ನಾಯಕ ಸಮುದಾಯದ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರ ವರ ಉಳಿದುಕೊಂಡಿದ್ದವು, ಎಸ್.ಟಿಗೆ ಸೇರುವಂತೆ ಹೋರಾಟ ನಡೆಸಿದಾಗ ಎಸ್.ಟಿ ಪಟ್ಟಿಯಲ್ಲಿ ಸೇರ್ಪಡೆಯಾಗಿವೆಂದರು.

ಪ್ರತಿ ಜಾತಿಯಲ್ಲಿ ಇತರ ಜಾತಿಗೆ ಹೋಲುವ ಪರ್ಯಾಯ ಪದಗಳಿರುತ್ತವೆ. ಅಂಬಿಗರಲ್ಲ ಇನ್ನೋಂದು ತಳವಾರ ಮತ್ತು ಪರಿವಾರ ಅಂತ ಬರೆಯಿಸಿ ಜಾತಿ ಪ್ರಮಾಣ ಪತ್ರ ಪಡೆಯರೆಂದು ಪ್ರಚೋದನೆ ನೀಡಿರುವುದು ವಿಡಿಯೋದಲ್ಲಿದೆ. ಎಸ್.ಟಿಗೆ ಸೇರ್ಪಡೆಯಾಗಿರುವುದು ನಾಯಕ ಸಮುದಾಯದ ಪರಿವಾರ ಮತ್ತು ತಳವಾರ ಹೊರೆತು ಬೇರೆ ಜಾತಿಯಲ್ಲಿನ ತಳವಾರ ಪರಿವಾರವಲ್ಲ. ಅನೇಕ ಜಾತಿಗಳಲ್ಲಿ ಪರಿವಾರ ಮತ್ತು ತಳವಾರ ಎಸ್.ಟಿ ಸೌಲಭ್ಯ ಪಡೆಯಲು ಬರುವುದಿಲ್ಲವೆಂದು ತಿಳಿಸಿದರು.

ಗೊಂವಿಂದ ಕಾರಜೋಳ ಅವರದ್ದೆ ಪಕ್ಷದ ಮೈಸೂರು ಸಂಸದ ಪ್ರತಾಪಸಿಂಹ ಅವರು ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿ ವೀರ ಮದಕರಿ ನಾಯಕನ ಸಮುದಾಯವಾದ ವಾಲ್ಮೀಕಿ ನಾಯಕರ ಪರ್ಯಾಯ ಪದಗಳಾದ, ಪರಿವಾರ ಮತ್ತು ತಳವಾರ ಪದಗಳನ್ನು ಎಸ್.ಟಿಗೆ ಸೇರಿಸಿ ಆಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿದ ವೀಡಿಯೋವನ್ನು, ಒಂದು ಸಾರಿ ಕಾರಜೋಳ ಅವರು ನೋಡಿ ತಿಳಿದುಕೊಳ್ಳಲಿ ಎಂದು ಒತ್ತಾಯಿಸಿದರು.

ಗೋವಿಂದ ಕಾರಜೋಳ ಅವರು ಕೂಡಲೇ ನೀಡಿರುವ ಹೇಳಿಕೆಯನ್ನು ವಾಪಸ್ಸು ಪಡೆದು ರಾಜ್ಯದ ಜನತೆಗೆ ಸ್ಪಷ್ಟನೇ ನೀಡಬೇಕು ಇಲ್ಲದಿದ್ದರೆ ಎಸ್.ಟಿ ಸಮುದಾಯದಿಂದ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದ್ಲಲಿ ಚನ್ನಬಸವ ಗಡ್ಲ, ಅಪ್ಪಾಜಿ ನಾಯಕ, ಎಸ್.ಮಲ್ಲಿಕಾರ್ಜುನ ನಾಯಕ, ಅಂಬು ನಾಯಕ, ಯಲ್ಲಪ್ಪ ನಾಯಕ ದೊರೆ, ಈರೇಶ ನಾಯಕ ಗಣದಿನ್ನಿ ಉಪಸ್ಥೀತರಿದ್ದರು.

Continue

Related Articles

Leave a Reply

Your email address will not be published. Required fields are marked *

Back to top button
Close
Close