ಮಾನವಿರಾಯಚೂರು ಜಿಲ್ಲೆ ಸುದ್ದಿ

ಉದ್ಯೋಗ ಖಾತ್ರಿ ಯೋಜನೆಯ ದಿನಗಳನ್ನು ಮತ್ತು ಕೂಲಿಯ ಹಣವನ್ನು ಹೆಚ್ಚಿಸುವಂತೆ ; ಮಾನ್ವಿ ಶಾಸಕರು ಮನವಿ

ವರದಿ: ಸಿರಾಜುದ್ದೀನ್ ಬಂಗಾರ್

ರಾಯಚೂರು, ಜೂ 04: ಇಂದು ರಾಯಚೂರು ಜಿಲ್ಲೆಗೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ರವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನಗಳನ್ನು ಮತ್ತು ಕೂಲಿಯ ಹಣವನ್ನು ಹೆಚ್ಚಿಸುವಂತೆ ಮಾನ್ವಿ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಇವರು ಮನವಿ ಸಲ್ಲಿಸಿದರು.

ಕೊರೋನಾ ವೈರಸ್ ಹರಡದಂತೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿತ್ತು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಇರುವ ಮಾನವ ದಿನಗಳನ್ನು ಮತ್ತು ನೀಡುತ್ತಿರುವ ಕೂಲಿ ಹಣವನ್ನು ಹೆಚ್ಚಿಸಿದರೆ ಕೂಲಿಕಾರ್ಮಿಕರಿಗೆ ಅನುಕೂಲವಾಗುತ್ತದೆ. ಮಾನವ ದಿನಗಳನ್ನು 7 ರಿಂದ 14 ದಿನಗಳವರೆಗೆ ಹೆಚ್ಚಿಸುವಂತೆ ಮತ್ತು ಕೂಲಿ ಹಣವನ್ನು ರೂ. 275 ರಿಂದ ರೂ. 300 ರೂಪಾಯಿಗೆ ಹೆಚ್ಚಿಸುವಂತೆ ಮನವಿ ಮಾಡಿಕೊಂಡರು.

Continue

Related Articles

Leave a Reply

Your email address will not be published. Required fields are marked *

Back to top button
Close
Close