ಉದ್ಯೋಗ ಮಾಹಿತಿಕರ್ನಾಟಕ ಸುದ್ದಿ

ಬೆಂಕಿಯಲ್ಲಿ ಅರಳಿದ ಪ್ರತಿಭೆ ಸದಾನಂದ; ನರೇಗಾ ಕೆಲಸ ಮಾಡುತ್ತಿರುವ ಎಂಜಿನಿಯರ್

— ಸಿರಾಜುದ್ದೀನ್ ಬಂಗಾರ್, ಸಂಪಾದಕರು ಕರ್ನಾಟಕ-ಜ್ವಾಲೆ ನ್ಯೂಸ್

ಹೆತ್ತವರು ಕನಸಿನಂತೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಕೆಲಸವೂ ದೊರೆತಿತ್ತು. ಒಳ್ಳೆಯ ಸಂಬಳ ಸಹ ಈ ಸದಾನಂದನಿಗೆ ಸಿಗುತ್ತಿತ್ತು. ಆದರೆ, ಕೊರೋನಾ ಹೆಮ್ಮಾರಿ ಈ ಯುವಕನ ಕನಸು ನುಚ್ಚುನೂರು ಮಾಡಿದೆ.

ಗದಗ ತಾಲೂಕಿನ ಕದಡಿ ಗ್ರಾಮದ  ಬಡತನದ ಬೆಂಕಿಯಲ್ಲಿ ಅರಳಿದ ಪ್ರತಿಭೆ ಸದಾನಂದ. ಸಂಕಷ್ಟದ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡಿದ ಆತ ಇಂಜಿನಿಯರ್ ಆಗಿದ್ದಾನೆ. ಹೆತ್ತವರ ಆಸೆ ಈಡೇರಿಸುವ ಕನಸು ಹೊಂದಿದ್ದ‌ ಯುವಕ ಸದಾನಂದ ಬೆಂಗಳೂರ‌ನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಕೊರೋನಾ ಆತನ ಕೆಲಸ ಕಿತ್ತುಕೊಂಡಿದೆ. ಈಗ ಈತ ಮಾಡುತ್ತಿರೋದು ನರೇಗಾ ಕೂಲಿ ಕೆಲಸ. 

ಗದಗ ತಾಲೂಕಿನ ಕದಡಿ ಗ್ರಾಮ ಯುವಕ. ಈತ ಸಾಮಾನ್ಯ ಯುವಕನಲ್ಲ. ಬಡತನ ಎನ್ನುವ ಬೆಂಕಿಯಲ್ಲಿ ಅರಳಿ ತಾವರೆ. ಹೌದು ಮೂಲತಃ ರೈತ ಕುಟುಂಬದಲ್ಲಿ ಹುಟ್ಟಿದ ಯುವಕ ಬಾಲಕನಿದ್ದಾಗನಿಂದಲೂ ದುಡಿಯುವ ಕಾಯಕಯೋಗಿ. ರೈತಾಪಿ ಕೆಲಸ ಮಾಡಿಕೊಂಡೇ ಶಾಲೆ, ಕಾಲೇಜು ಮುಗಿಸಿದ್ದಾನೆ. ಕಷ್ಟ ಪಟ್ಟು ಓದಿ ಬಿಇ ಪದವಿ ಮುಗಿಸಿದ್ದಾನೆ. ಹೆತ್ತವರು ಕನಸಿನಂತೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಕೆಲಸವೂ ದೊರೆತ್ತಿತ್ತು. ಒಳ್ಳೆಯ ಸಂಬಳ ಸಹ ಈ ಸದಾನಂದನಿಗೆ ಸಿಗುತ್ತಿತ್ತು. ಆದರೆ, ಕೊರೋನಾ ಹೆಮ್ಮಾರಿ ಈ ಯುವಕನ ಕನಸು ನುಚ್ಚುನೂರು ಮಾಡಿದೆ.

ಹುಟ್ಟೂರಿನತ್ತ ಯುವಕ ಮುಖಮಾಡಿದ್ದ. ಊರಿಗೆ ಬಂದ ಸದಾನಂದ ಸುಮ್ಮನೆ ಕುಳಿತುಕೊಳ್ಳದೇ ತಮ್ಮ ಜಮೀನಿನ ಕೆಲಸಕ್ಕೆ ಬೇರೆ ಯಾರನ್ನೂ ಕೂಲಿ ಮಾಡಿಸದೇ ತಾನೇ ಕೆಲಸ ಮಾಡಿದ್ದಾನೆ. ಅಷ್ಟೇ ಅಲ್ಲ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಕೂಡ ಮಾಡುತ್ತಿದ್ದಾನೆ. ಬೆಳಗ್ಗೆ 6 ಗಂಟೆಗೆ ಗ್ರಾಮ ಪಂಚಾಯತ್ ವತಿಯಲ್ಲಿ ಜಮೀನುಗಳಲ್ಲಿ  ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ನಡೆದಿದೆ. ಇಂಜಿನಿಯರ್ ಸದಾನಂದ ಕೂಡ ತನ್ನ ತಾಯಿ ಜೊತೆ ಕೂಲಿ ಮಾಡುತ್ತಿದ್ದಾನೆ.

ಇನ್ನೂ ಕಿಲ್ಲರ ಕೊರೋನಾ ತಂದಿಟ್ಟ ಪರಿಸ್ಥಿತಿಗೆ ಕೈಯಲ್ಲಿ ಸಲಕೆ, ಗುದ್ಲಿ ಹಿಡಿದು ಕೂಲಿ ಕೆಲಸ ಮಾಡುತ್ತಿದ್ದಾನೆ. ಕುಳಿತು ಉಂಡ್ರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆ ಮಾತಿನಂತೆ. ಕಂಪನಿ ಕೆಲಸವೂ ಇಲ್ಲ. ಬಿಇ ಪದವೀಧರ ಅಂತ ಕುಳಿತ್ರೆ ಹೊಟ್ಟೆ ತುಂಬಲ್ಲ. ಬಡ ಕುಟುಂಬ ಆರ್ಥಿಕ ಪರಿಸ್ಥಿತಿ ಕೂಡ ಗಂಭೀರವಾಗಿದೆ. ಹೀಗಾಗಿ ಹೆತ್ತವರ ಭಾರ ಕಡಿಮೆ ಮಾಡಬೇಕು ಅಂತ ತಾಯಿ, ಚಿಕ್ಕಪ್ಪನ ಜೊತೆ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ.

2015 ರಲ್ಲಿ ಬಿಇ ಪದವಿ ಮುಗಿಸಿದ ಸದಾನಂತ ಬೆಂಗಳೂರಿನಲ್ಲಿ ಖಾಸಗಿ ಕಂಪನಿನಲ್ಲಿ ಮೆಂಟೆನನ್ಸ್ ಇಂಜಿನಿಯರ್ ಅಂತ ಕೆಲಸ ಮಾಡುತ್ತಿದ್ದ. ಈಗ ಲಾಕ್ ಡೌನ್ ನಿಂದ ಕೆಲಸ ಇಲ್ಲ. ಕಂಪನಿ ಯಾವಾಗ ಕರೆಯುತ್ತಾ ಗೋತ್ತಿಲ್ಲ. ಮುಂದೇ ಏನೂ ಅಂತ ಚಿಂತೆ ಮಾಡದೇ ಈ ಯುವ ಇಂಜಿನಿಯರ್ ಕೂಲಿ ಕೆಲಸ ಮಾಡುತ್ತಿದ್ದಾನೆ.

ನನ್ನ ಮಗ ಇಂಜಿನಿಯರ್ ಆಗಬೇಕು. ದೊಡ್ಡ ಸಾಹೇಬ್ ಆಗಬೇಕು ಎನ್ನುವ ಆಸೆ. ಆದರೆ, ಏನ್ ಮಾಡುವುದು ಕ್ರೂರಿ ಕೊರೋನಾ ನನ್ನ ಮಗನಿಗೆ ಈ ಪರಿಸ್ಥಿತಿ ತಂದಿಟ್ಟಿದೆ ನೋಡ್ರಿ ಅಂತ ಸದಾನಂದ ತಾಯಿ ನೋವು ತೋಡಿಕೊಳ್ಳುತ್ತಾಳೆ.

ಕೊರೋನಾ ಅಟ್ಟಹಾಸಕ್ಕೆ ಎಲ್ಲರೂ ಥಂಡಾ ಹೊಡೆದಿದ್ದಾರೆ. ಹತ್ತಾರು ಕನಸು ಕಂಡಿದ್ದ ಯುವ ಇಂಜಿನಿಯರ್ ಗಳ ಪರಿಸ್ಥಿತಿ ದೇವರೆ ಬಲ್ಲ ಎಂಬಂತಾಗಿದೆ. ಬಡತನದಲ್ಲಿ ಬೆಳೆದು ಕಷ್ಟಪಟ್ಟು ಓದಿ ಇಂಜಿನಿಯರ್ ಮುಗಿಸಿದ್ದಾನೆ. ಕಂಪನಿ ಕೆಲಸಕ್ಕೆ ಕರೆಯುವವರೆಗೂ ಕೂಲಿ ಮಾಡಿ ಹೆತ್ತವರಿಗೆ ಸಹಾಯ ಮಾಡುವ ಛಲ ತೋರಿದ್ದಾನೆ. ಈಗಿನ ಜಗತ್ತಿನಲ್ಲಿ ಸ್ವಲ್ಪ ಕಲಿತರೂ ಸಾಕು ಸಣ್ಣ ಪುಟ್ಟ ಕೆಲಸ, ಕೂಲಿ ಮಾಡುವುದಕ್ಕೆ ಹಿಂದೇಟು ಹಾಕುವ ಇಂದಿನ ಪೀಳಿಗೆಗೆ ಈ ಯುವ ಇಂಜಿನಿಯರ್ ಮಾದರಿಯಾಗಿದ್ದಾರೆ.

Continue

Related Articles

Leave a Reply

Your email address will not be published. Required fields are marked *

Back to top button
Close
Close